
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ನಾಳೆ ( ಮೇ 13 ) ಮುಖಾಮುಖಿಯಾಗಲಿದ್ದು, ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟೂರ್ನಿ ಪ್ಲೇಆಫ್ ಸನಿಹಕ್ಕೆ ಬರುತ್ತಿದ್ದಂತೆ ಹಲವು ತಂಡಗಳ ನಡುವೆ ಪ್ಲೇಆಫ್ ಪ್ರವೇಶಿಸಲು ಪೈಪೋಟಿ ಏರ್ಪಟ್ಟಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಸಹ ಸೇರಿವೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇತ್ತಂಡಗಳು ಪರಸ್ಪರ ಮುಖಾಮುಖಿಯಾಗಲಿರುವ ಎರಡನೇ ಪಂದ್ಯ ಇದಾಗಿದ್ದು, ಇತ್ತಂಡಗಳ ನಡುವೆ ಮಾರ್ಚ್ 27 ರಂದು ನಡೆದಿದ್ದ 3ನೇ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದವು. ಟೂರ್ನಿಯಲ್ಲಿ ನಡೆದಿದ್ದ ಈ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, 11 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು , ಉಳಿದ 6 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆದುಕೊಳ್ಳಬೇಕೆಂದರೆ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಬೇಕಿದೆ ಹಾಗೂ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಹೆಚ್ಚಾಗಿ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನುಳಿದ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದರೆ ಟಾಪ್ 2 ಸ್ಥಾನವನ್ನು ಪಡೆದುಕೊಳ್ಳುವ ಅವಕಾಶವಿದೆ.
ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು, ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಊಹೆಯಲ್ಲಿದ್ದರೆ, ಇನ್ನೂ ಕೆಲ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ತಂಡಗಳನ್ನು ರಚಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವವರು ಈ ಕೆಳಕಂಡಂತೆ ಆಟಗಾರರನ್ನು ಆರಿಸುವುದು ಉತ್ತಮ ಎನ್ನಬಹುದು.
ಡ್ರೀಮ್ ಟೀಮ್ 1: 1 ಶಿಖರ್ ಧವನ್, 2 ಫಾಫ್ ಡು ಪ್ಲೆಸಿಸ್, 3 ಗ್ಲೆನ್ ಮ್ಯಾಕ್ಸ್‌ವೆಲ್, 4 ರಜತ್ ಪಾಟಿದಾರ್, 5 ಲಿಯಾಮ್ ಲಿವಿಂಗ್‌ಸ್ಟೋನ್, 6 ದಿನೇಶ್ ಕಾರ್ತಿಕ್, 7 ರಿಷಿ ಧವನ್, 8 ವನಿಂದು ಹಸರಂಗ, 9 ಹರ್ಷಲ್ ಪಟೇಲ್, 10 ರಾಹುಲ್ ಅರ್ ಚಹರ್, 10 ರಾಹುಲ್ ಅರ್ ಚಹರ್.
ನಾಯಕ: ಫಾಫ್ ಡು ಪ್ಲೆಸಿಸ್, ಉಪನಾಯಕ: ಶಿಖರ್ ಧವನ್, ವಿಕೆಟ್‌ಕೀಪರ್: ದಿನೇಶ್ ಕಾರ್ತಿಕ್
ಡ್ರೀಮ್ ಟೀಮ್ 2: 1 ಜಾನಿ ಬೈರ್‌ಸ್ಟೋವ್, 2 ಮಯಾಂಕ್ ಅಗರ್ವಾಲ್, 3 ಭಾನುಕಾ ರಾಜಪಕ್ಸೆ, 4 ಮಹಿಪಾಲ್ ಲೊಮೊರೊರ್, 5 ಜಿತೇಶ್ ಶರ್ಮಾ, 67, ರಿಷಿ ಕಾಗಿ ದ್ಹಾವನ್, 67 8 ಹರ್ಷಲ್ ಪಟೇಲ್ 9 ಜೋಶ್ ಹ್ಯಾಜಲ್‌ವುಡ್, 10 ರಾಹುಲ್ ಚಹಾರ್, 11 ಮೊಹಮ್ಮದ್ ಸಿರಾಜ್.
ನಾಯಕ: ಮಯಾಂಕ್ ಅಗರ್ವಾಲ್, ಉಪನಾಯಕ: ಭಾನುಕಾ ರಾಜಪಕ್ಸೆ, ವಿಕೆಟ್ ಕೀಪರ್: ಜಿತೇಶ್ ಶರ್ಮಾ.