
ಐಪಿಎಲ್ 2022ರ ಪ್ರತಿ ಪಂದ್ಯಗಳು ಕೂಡ ಅತ್ಯಂತ ರೋಚಕವಾಗಿ ನಡೆಯುತ್ತಿದ್ದು ಕೆಕೆಆರ್ ಹಾಗೂ ಆರ್‌ಆರ್ ನಡುವಿನ ಪಂದ್ಯ ಕೂಡ ಅಂತಾದ್ದೇ ಅನುಭವವನ್ನು ಅಭಿಮಾನಿಗಳಿಗೆ ನೀಡಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್ ಅಬ್ಬರದ ಪ್ರದರ್ಶನ ನೀಡುವ ಮೂಲಕ ಭರ್ಜರಿ ಶತಕ ಸಿಡಿಸಿದರೆ ನಂತರ ಯುಜುವೇಂದ್ರ ಚಾಹಲ್ ಐಪಿಎಲ್ 2022ರಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ಯುಜಿ ಅಮೋಘ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ ತಂಡ ನೀಡಿದ 218 ರನ್‌ಗಳ ಬೃಹತ್ ಗುರಿಯನ್ನು ಕೆಕೆಆರ್ ತಂಡ ಅದ್ಭುತವಾಗಿ ಬೆನ್ನಟ್ಟುತ್ತಾ ಸಾಗಿತ್ತು. ಆರಂಭದಲ್ಲಿ ಆರೋನ್ ಫಿಂಚ್ ಅವರ ಭರ್ಜರಿ ಆಟದ ನಂತರ ಕೆಕೆಆರ್ ನಾಯಕ ಶ್ರೇಯಸ್ ಐಯ್ಯರ್ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳ ಮೇಲೆ ದಂಡೆತ್ತಿ ಸಾಗಿದರು. ಈ ಮೂಲಕ ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟುವ ಸೂಚನೆ ನೀಡಿದರು. ಆದರೆ 17ನೇ ಓವರ್‌ನಲ್ಲಿ ಯಜಜುವೇಂದ್ರ ಚಾಹಲ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ರೀತಿಯಲ್ಲಿ ಮೇಲುಗೈ ಒದಗಿಸಿದರು.
17ನೇ ಓವರ್ ಎಸೆದ ಯುಜುವೇಂದ್ರ ಚಾಹಲ್ ಬರೊಬ್ಬರಿ 4 ವಿಕೆಟ್‌ಗಳನ್ನು ಈ ಒಂದೇ ಓವರ್‌ನಲ್ಲಿ ಸಂಪಾದಿಸುವ ಮೂಲಕ ಕೆಕೆಆರ್ ತಂಡಕ್ಕೆ ಆಘಾತ ನೀಡಿದ್ದಾರೆ. ಇದರಲ್ಲಿ ಹ್ಯಾಟ್ರಿಕ್ ಕೂಡ ಇತ್ತು ಎಂಬುದು ವಿಶೇಷ. ಈ ಮೂಲಕ ಈ ಬಾರಿಯ ಟೂರ್ನಿಯ ಮೊದಲ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ್ದಾರೆ ಯುಜುವೇಂದ್ರ ಚಾಹಲ್.
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಕರುಣ್ ನಾಯರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಹಾಲ್
ಬೆಂಚ್: ಕುಲದೀಪ್ ಸೇನ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್-ನೈಲ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಅನುನಯ್ ಸಿಂಗ್, ಧ್ರುವ ಜುರೆಲ್, ಶುಭಂ ಗರ್ವಾಲ್
ಕೊಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಆರೋನ್ ಫಿಂಚ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಬೆಂಚ್: ಅಮನ್ ಹಕೀಮ್ ಖಾನ್, ಟಿಮ್ ಸೌಥಿ, ಸ್ಯಾಮ್ ಬಿಲ್ಲಿಂಗ್ಸ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ಅಜಿಂಕ್ಯ ರಹಾನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜಿತ್ ತೋಮರ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಹರ್ಷಿತ್ ರಾಣಾ