ವಿರಾಟ್ ಕೊಹ್ಲಿ ದಾಖಲೆಗೆ ಸನಿಹ: IPL 2022ರ ಸೀಸನ್‌ನಲ್ಲಿ ಜೋಸ್ ಬಟ್ಲರ್ ಮೂರನೇ ಶತಕ

ರಾಜಸ್ತಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಐಪಿಎಲ್ 2022ರ ಸೀಸನ್‌ನಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಪ್ರಸಕ್ತ ಸೀಸನ್‌ನಲ್ಲಿ ಒಟ್ಟಾರೆ ಮೂರನೇ ಶತಕ ದಾಖಲಿಸಿದ್ರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ತಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಮತ್ತೊಮ್ಮೆ ಅಬ್ಬರದ ಆಟವಾಡಿದ್ರು. ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಿಂಚಿನ ಆಟವಾಡಿದ್ದ ಬಟ್ಲರ್ ಮತ್ತೊಮ್ಮೆ ಬಿರುಗಾಳಿಯ ಆಟವಾಡಿದ್ರು.
65 ಎಸೆತಗಳಲ್ಲಿ 116 ರನ್ ಸಿಡಿಸಿದ ಜೋಸ್ ಬಟ್ಲರ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 9 ಅಮೋಘ ಶತಕಗಳಿದ್ದವು. 178.46 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಬಟ್ಲರ್‌ಗೆ ದೇವದತ್ ಪಡಿಕ್ಕಲ್ 54, ಸಂಜು ಸ್ಯಾಮ್ಸನ್ ಅಜೇಯ 46 ರನ್ ಕಲೆಹಾಕುವ ಮೂಲಕ ತಂಡದ ಮೊತ್ತ 222ರನ್ ಕಲೆಹಾಕಲು ಸಾಧ್ಯವಾಯಿತು. ಐಪಿಎಲ್ ಇತಿಹಾಸದಲ್ಲಿ ಇದು ರಾಜಸ್ತಾನ್ ರಾಯಲ್ಸ್ ತಂಡದ ಗರಿಷ್ಠ ಸ್ಕೋರ್ ಆಗಿದೆ.
ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋಸ್ ಬಟ್ಲರ್, ಅದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ದಾಖಲಿಸಿದ್ರು. ಈ ಮೂಲಕ ಸೀಸನ್‌ನಲ್ಲಿ ಮೂರು ಶತಕ ದಾಖಲಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ದಾರೆ. ಜಾಸ್ ಬಟ್ಲರ್ ಐಪಿಎಲ್‌ನಲ್ಲಿ ಒಟ್ಟಾರೆ 4 ಶತಕ ದಾಖಲಿಸಿದ್ದಾರೆ.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 2016ನೇ ಸೀಸನ್‌ನಲ್ಲಿ 4 ಶತಕ ಸಿಡಿಸಿದ್ದು, 900ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು.
IPL 2022ರ ಸೀಸನ್‌ನಲ್ಲಿ ಬಟ್ಲರ್ ಮೂರನೇ ಶತಕ ದಾಖಲಿಸುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಇಂಗ್ಲೆಂಡ್ ಬ್ಯಾಟ್‌ಮನ್ ಅನ್ನು ಸಾಕಷ್ಟು ಪ್ರಶಂಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications