GT vs RR: ಫೈನಲ್ ಪಂದ್ಯದಲ್ಲಿ ಗೆಲ್ಲಲು ಡ್ರೀಮ್ ಟೀಮ್ ಹೀಗಿರಬೇಕು; ಈತನಿಗೆ ನಾಯಕತ್ವ ನೀಡಿ

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಾಳೆ ( ಮೇ 29ರ ಭಾನುವಾರ ) ನಡೆಯಲಿರುವ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ.
ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಐಪಿಎಲ್ ಆಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಲೀಗ್ ಹಂತದ ಪಂದ್ಯಗಳಲ್ಲಿ ಅಬ್ಬರಿಸಿ ಪ್ಲೇ ಆಫ್ ಹಂತದಲ್ಲಿನ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿತು. ಇತ್ತ ಗುಜರಾತ್ ಟೈಟನ್ಸ್ ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್ ಲೀಗ್ ಹಂತದ ಮುಕ್ತಾಯದ ಸಮಯಕ್ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಕಾರಣ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡುವ ಅವಕಾಶವನ್ನು ಹೊಂದಿತ್ತು.
ಹೀಗೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿದ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಫೈನಲ್ ಪಂದ್ಯ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ಗುಜರಾತ್ ಟೈಟನ್ಸ್ ಟ್ರೋಫಿ ಗೆದ್ದು ಹೊರಹೊಮ್ಮುತ್ತಾ ಅಥವಾ 13 ವರ್ಷಗಳ ಬಳಿಕ ಮತ್ತೆ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗುತ್ತಾ ಎಂಬ ಕುತೂಹಲ ಹುಟ್ಟಿದೆ. ಹೀಗೆ ಇತ್ತಂಡಗಳ ನಡುವಿನ ಈ ಸೆಣಸಾಟದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ. ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಗಳಿಸಬಹುದಾಗಿದೆ.

ಡ್ರೀಮ್ ಟೀಮ್ 1
1 ಜೋಸ್ ಬಟ್ಲರ್, 2 ಶುಭಮನ್ ಗಿಲ್, 3 ಸಂಜು ಸ್ಯಾಮ್ಸನ್, 4 ಹಾರ್ದಿಕ್ ಪಾಂಡ್ಯ, 5 ಡೇವಿಡ್ ಮಿಲ್ಲರ್, 6 ಶಿಮ್ರಾನ್ ಹೆಟ್ಮೆಯರ್, 7 ರಶೀದ್ ಖಾನ್, 8 ಪ್ರಸಿದ್ಧ್ ಕೃಷ್ಣ, 9 ಯುಜ್ವೇಂದ್ರ ಚಹಾಲ್, 10 ಯಶ್ ದಯಾಳ್, 11 ಮೊಹಮ್ಮದ್ ಶಮಿ.
ನಾಯಕ: ಹಾರ್ದಿಕ್ ಪಾಂಡ್ಯ, ಉಪನಾಯಕ: ಜೋಸ್ ಬಟ್ಲರ್, ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್.

ಡ್ರೀಮ್ ಟೀಮ್ 2
1 ಜೋಸ್ ಬಟ್ಲರ್, 2 ಯಶಸ್ವಿ ಜೈಸ್ವಾಲ್, 3 ವೃದ್ಧಿಮಾನ್ ಸಹಾ, 4 ಹಾರ್ದಿಕ್ ಪಾಂಡ್ಯ, 5 ಡೇವಿಡ್ ಮಿಲ್ಲರ್, 6 ಸಂಜು ಸ್ಯಾಮ್ಸನ್, 7 ರಶೀದ್ ಖಾನ್, 8 ಆರ್ ಅಶ್ವಿನ್, 9 ಓಬೇದ್ ಮೆಕಾಯ್, 10 ಪ್ರಸಿದ್ಧ್ ಕೃಷ್ಣ, 11 ಮೊಹಮ್ಮದ್ ಶಮಿ.
ನಾಯಕ: ಸಂಜು ಸ್ಯಾಮ್ಸನ್, ಉಪನಾಯಕ: ರಶೀದ್ ಖಾನ್, ವಿಕೆಟ್ ಕೀಪರ್: ವೃದ್ಧಿಮಾನ್ ಸಹಾ.

ಸಂಭಾವ್ಯ ಆಡುವ ಬಳಗಗಳು
ರಾಜಸ್ಥಾನ್ ರಾಯಲ್ಸ್: 1. ಜೋಸ್ ಬಟ್ಲರ್, 2. ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), 4. ರಿಯಾನ್ ಪರಾಗ್, 5. ದೇವದತ್ ಪಡಿಕ್ಕಲ್, 6. ಶಿಮ್ರಾನ್ ಹೆಟ್ಮೆಯರ್, 7. ಆರ್ ಅಶ್ವಿನ್, 8. ಟ್ರೆಂಟ್ ಬೌಲ್ಟ್, 9. ಪ್ರಸಿದ್ಧ್ ಕೃಷ್ಣ, 10. ಯುಜ್ವೇಂದ್ರ ಚಹಾಲ್, 11. ಒಬೆದ್ ಮೆಕಾಯ್.
ಗುಜರಾತ್ ಟೈಟನ್ಸ್: 1 ವೃದ್ಧಿಮಾನ್ ಸಹಾ, 2 ಶುಭಮನ್ ಗಿಲ್, 3 ಹಾರ್ದಿಕ್ ಪಾಂಡ್ಯ, 4 ಮ್ಯಾಥ್ಯೂ ವೇಡ್, 5 ಡೇವಿಡ್ ಮಿಲ್ಲರ್, 6 ರಾಹುಲ್ ತೆವಾಟಿಯಾ, 7 ರಶೀದ್ ಖಾನ್, 8 ಯಶ್ ದಯಾಳ್, 9 ಆರ್ ಸಾಯಿ ಕಿಶೋರ್, 10 ಅಲ್ಜಾರಿ ಜೋಸೆಫ್, 11 ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications