
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಆಟಗಾರ ಯುಜುವೇಂದ್ರ ಚಾಹಲ್ ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿರುವ ಚಾಹಲ್ ಟೂರ್ನಿಯಲ್ಲಿ 11 ವಿಕೆಟ್ ಸಂಪಾದಿಸಿದ್ದು ಪರ್ಪಲ್ ಕ್ಯಾಪ್ ಧರಿಸಿಕೊಂಡಿದ್ದಾರೆ. ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಸಂಪಾದಿಸಿರುವ ಚಾಹಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಟೂರ್ನಿಯಲ್ಲಿ ಎಲ್ಲಾ ವಿಭಾಗದಲ್ಲಿಯೂ ಯಶಸ್ಸು ಸಾಧಿಸುತ್ತಿದೆ. ಸಂಜು ಸ್ಯಾಮ್ಸನ್ ಪಡೆಯ ಯಶಸ್ಸಿನಲ್ಲಿ ಚಾಹಲ್ ಕೊಡುಗೆ ಕುಡ ಮಹತ್ವದ್ದಾಗಿದ್ದು ಪ್ರತಿ ಪಂದ್ಯದಲ್ಲಿಯೂ ವಿಕೆಟ್ ಟೇಕರ್ ಆಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ತಂಡ 3 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಚಾಹಲ್ ಮಾತನಾಡಿದ್ದು ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಚಾಹಲ್ ನಾನು ತನ್ನ ಮೂಲಕ ಸಾಮರ್ಥ್ಯದ ಮೇಲೆ ಹೆಚ್ಚು ಗಮನಹರಿಸುತ್ತೇನೆ ಎಂದಿದ್ದಾರೆ. ಅದು ಬೇರೆ ಯಾವುದೂ ಅಲ್ಲ ತನ್ನ ಆಲೋಚನೆಯೇ ನನ್ನ ಶಕ್ತಿ ಎಂದಿದ್ದಾರೆ ಯುಜುವೇಂದ್ರ ಚಾಹಲ್. "ನನಗೆ ನಾನು ಬೆಂಬಲಿಸಿಕೊಳ್ಳುತ್ತೇನೆ. ನನ್ನ ಪ್ರಮುಖ ಸಾಮರ್ರ್ಥಯವೆಂದರೆ ನನ್ನ ಆಲೋಚನೆ. ನಾನು ಸಾಮಾನ್ಯವಾನು ಏನು ಮಾಡುತ್ತೀನೋ ಅದರಿಂದ ಅದರಿಂದ ವಿಮುಖನಾಗಲು ಬಯಸುವುದಿಲ್ಲ. ನಾನು ಮೊದಲ ಓವರ್‌ನಿಂದ ಅಂತಿಮ ಓವರ್‌ವರೆಗೆ ಬೌಲಿಂಗ್ ಮಾಡಲು ಯಾವಾಗಲೂ ಸಿದ್ಧವಾಗಿರುತ್ತೇನೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ಇನ್ನು ಈ ಸಂದರ್ಭದಲ್ಲಿ ಚಾಹಲ್ ಲಕ್ನೋ ತಂಡದ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆದ ಕ್ಷಣವನ್ನು ಹೆಚ್ಚು ಆನಂದಿಸಿದೆ ಎಂದಿದ್ದಾರೆ. ದಕ್ಷಿಣ ಆಪ್ರಿಕಾದ ಈ ಆಟಗಾರ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ ಎಂದಿದ್ದಾರೆ ಚಾಹಲ್. "ಡಿಕಾಕ್ ವಿಕೆಟ್ ಪಡೆದಿದ್ದನ್ನು ನಾನು ಹೆಚ್ಚು ಆನಂದಿಸಿದ್ದೇನೆ. ಆತ ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದರು" ಎಂದಿದ್ದಾರೆ ಯುಜುವೇಂದ್ರ ಚಾಹಲ್.

ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸಂಜು ಸ್ಯಾಮ್ಸನ್ ನೇತೃತ್ವದ ಆರ್ಆರ್ ತಂಡ ಆಡಿದ 4 ಪಂದ್ಯಗಳ ಪೈಕಿ 3 ಗೆಲುವು ಸಾಧಿಸಿದ್ದು 1 ಸೋಲು ಅನುಭವಿಸಿದೆ. ಆರ್‌ಆರ್ ತಂಡ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 14ರಂದು ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆಡಲಿದೆ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ,
ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್