IPL 2022: ಆರ್‌ಸಿಬಿ ಪಂದ್ಯ ವೀಕ್ಷಿಸಲಿದ್ದಾರೆ ಕೆಜಿಎಫ್‌ನ ಅಧೀರ ಮತ್ತು ರಮಿಕಾ ಸೇನ್

ಸದ್ಯ ಭಾರತದಾದ್ಯಂತ ಎರಡು ವಿಷಯಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಕನ್ನಡದ ಚಿತ್ರ ಕೆಜಿಎಫ್ ಸದ್ದು ಮಾಡುತ್ತಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೊಂಬಾಳೆ ಫಿಲ್ಮ್ಸ್ ಕೈಜೋಡಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಚಾರವನ್ನೂ ಕೂಡ ವಿಶೇಷ ವಿಡಿಯೋ ಮೂಲಕ ಮಾಡಿದ್ದರು.
ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದ ನಂತರ ವಿಶ್ವದ ಹಲವೆಡೆ ಅಬ್ಬರಿಸುತ್ತಿದ್ದು, ಇತ್ತೀಚೆಗಷ್ಟೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೂ ಸಹ ಚಿತ್ರವನ್ನು ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯವನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅಭಿನಯಿಸಿರುವ ಸಂಜಯ್ ದತ್ ಮತ್ತು ರವೀನಾ ಟಂಡನ್ ವೀಕ್ಷಿಸುತ್ತಿದ್ದಾರೆ.
ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಖಳನಾಯಕ ಅಧೀರ ಎಂಬ ಪಾತ್ರ ನಿರ್ವಹಿಸಿರುವ ಸಂಜಯ್ ದತ್ ಮತ್ತು ರಮಿಕಾ ಸೇನ್ ಪಾತ್ರ ನಿರ್ವಹಿಸಿರುವ ನಟಿ ರವೀನಾ ಟಂಡನ್ ಈ ಪಂದ್ಯವನ್ನು ವೀಕ್ಷಿಸುವ ವಿಷಯವನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications