For Quick Alerts
ALLOW NOTIFICATIONS  
For Daily Alerts
 

IPL 2022: ರಾಜಸ್ತಾನ್ ರಾಯಲ್ಸ್‌ ಕಡೆಗಣನೆ, ಐಪಿಎಲ್ ಪ್ರಸಾರಕರನ್ನ ಟ್ರೋಲ್ ಮಾಡಿದ ಸಂಜು ಸ್ಯಾಮ್ಸನ್ ಪತ್ನಿ

Sanju samson and wife

ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಗುಜರಾತ್ ಟೈಟನ್ಸ್‌ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ 14 ವರ್ಷಗಳ ಐಪಿಎಲ್ ಫೈನಲ್‌ಗೆ ತಲುಪಿದೆ. ಪ್ಲೇ ಆಫ್ ಕ್ವಾಲಿಫೈಯರ್ 2 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಗ್ರೂಪ್ ಹಂತದಲ್ಲಿ 14 ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದು ಎರಡನೇ ಸ್ಥಾನ ಗಳಿಸಿದೆ.

ಕ್ವಾಲಿಫೈಯರ್ 1ರಲ್ಲಿ ಗುಜರಾತ್ ವಿರುದ್ಧ ಸೋತಿದ್ದ ರಾಜಸ್ತಾನ, ಕ್ವಾಲಿಫೈಯರ್ 2ರಲ್ಲಿ ಆರ್‌ಸಿಬಿಯನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಹೀಗಾಗಿ ಸಿಕ್ಕಿರುವ ಅಮೂಲ್ಯ ಅವಕಾಶದಲ್ಲಿ ರಾಜಸ್ತಾನ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ರಾಜಸ್ತಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಐಪಿಎಲ್‌ ಪ್ರಸಾರಕರು

ರಾಜಸ್ತಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಐಪಿಎಲ್‌ ಪ್ರಸಾರಕರು

ಐಪಿಎಲ್ ಪ್ರಸಾರಕರು ಈ ಋತುವಿನ ಅಗ್ರ ತಂಡಗಳಲ್ಲಿ ಒಂದಾದ ರಾಜಸ್ತಾನವನ್ನು ವೀಡಿಯೋದಲ್ಲಿ ನಿರ್ಲಕ್ಷಿಸುವ ಮೂಲಕ ರಾಜಸ್ತಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಋತುವಿನ ಆರಂಭದಲ್ಲಿ, ಐಪಿಎಲ್ ಪ್ರಸಾರಕರು ಎಲ್ಲಾ ನಾಯಕರು ಕಾಣಿಸಿಕೊಂಡ ಅನಿಮೇಟೆಡ್ ವೀಡಿಯೊವನ್ನು ಮಾಡಿದರು. ಆದರೆ ಸಂಜು ಸ್ಯಾಮ್ಸನ್ ಅದರಲ್ಲಿ ಕಾಣಿಸಿಕೊಂಡಿರಲಿಲ್ಲ.

ಪ್ರಸಾರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಯಾಮ್ಸನ್ ಪತ್ನಿ

ಪ್ರಸಾರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಯಾಮ್ಸನ್ ಪತ್ನಿ

ರಾಜಸ್ತಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಪತ್ನಿ ಚಾರುಲತಾ ಸ್ಯಾಮ್ಸನ್‌ ಐಪಿಎಲ್ ಪ್ರಸಾರಕರ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಾ ತಂಡಗಳ ನಾಯಕರಿರುವಾಗ ಅನಿಮೇಟೆಡ್ ವಿಡಿಯೋದಲ್ಲಿ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್‌ರನ್ನ ಮಾತ್ರ ಏಕೆ ತೋರಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ತನ್ನ ಪತಿ ಐಪಿಎಲ್ ಜಾಹೀರಾತುದಾರರಿಗೆ ಒಡ್ಡಿಕೊಂಡಿದ್ದಾನೆಯೇ ಎಂದು ಅವರು ಬಲವಾಗಿ ಪ್ರಶ್ನಿಸಿದ್ದಾರೆ.

IPL 2022 Final: ಗುಜರಾತ್, ರಾಜಸ್ಥಾನ್ ನಡುವೆ ಟ್ರೋಫಿ ಎತ್ತಿಹಿಡಿಯುವ ತಂಡವನ್ನು ಹೆಸರಿಸಿದ ರೈನಾ

9 ತಂಡಗಳಿವೆ ಸ್ಯಾಮ್ಸನ್ ಮಾತ್ರ ಏಕಿಲ್ಲ?

9 ತಂಡಗಳಿವೆ ಸ್ಯಾಮ್ಸನ್ ಮಾತ್ರ ಏಕಿಲ್ಲ?

ಇನ್‌ಸ್ಟಾಗ್ರಾಮ್ ಸ್ಟೋರಿಯನ್ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಚಾರುಲತಾ, ವೀಡಿಯೊದಲ್ಲಿ ರಾಜಸ್ಥಾನ್ ರಾಯಲ್ಸ್ ಹೊರತುಪಡಿಸಿ 9 ಫ್ರಾಂಚೈಸಿಗಳ ನಾಯಕರು ಮತ್ತು ಆಟಗಾರರು ಹೇಗೆ ಇದ್ದಾರೆ ಎಂದು ಬರೆದಿದ್ದಾರೆ.

''ಐಪಿಎಲ್ 2022 ಟ್ರೋಫಿ ರೇಸ್ ತೋರಿಸುವ ಈ ಅನಿಮೇಟೆಡ್ ವೀಡಿಯೊವನ್ನು ಐಪಿಎಲ್ ನಿರೂಪಕರು ಮೊದಲ ದಿನವೇ ಪ್ರಸಾರ ಮಾಡಿದ್ದಾರೆ. ಗುಲಾಬಿ ಬಣ್ಣದ ಜರ್ಸಿಯನ್ನು ಏಕೆ ಮಿಸ್ ಮಾಡಿಕೊಳ್ಳಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈಗ ನೋಡಿ ರಾಜಸ್ತಾನ್ ಫೈನಲ್ ತಲುಪಿದೆ'' ಎಂದು ಶೀರ್ಷಿಕೆ ನೀಡಲಾಗಿದೆ. ಅವರು ತಮ್ಮ ಸ್ಟೋರಿಯ ಮುಂದಿನ ಪೋಸ್ಟ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ತಲುಪುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅತ್ಯಂತ ತಾಳ್ಮೆಯಿಂದ ತಂಡವನ್ನ ನಿಭಾಯಿಸುತ್ತಿರುವ ಸಂಜು ಸ್ಯಾಮ್ಸನ್‌

ಅತ್ಯಂತ ತಾಳ್ಮೆಯಿಂದ ತಂಡವನ್ನ ನಿಭಾಯಿಸುತ್ತಿರುವ ಸಂಜು ಸ್ಯಾಮ್ಸನ್‌

ಐಪಿಎಲ್ 2022 ರಲ್ಲಿ ಸಂಜು ಸ್ಯಾಮ್ಸನ್ ಅವರ ನಾಯಕತ್ವವು ತುಂಬಾ ಪರಿಣಾಮಕಾರಿಯಾಗಿದೆ. ಸ್ಯಾಮ್ಸನ್ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಕಂಡೆ ಸಹ, ರಜಸ್ತಾನ ಫ್ರಾಂಚೈಸಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿದೆ. ಸಂಜು ಸ್ಯಾಮ್ಸನ್ ಅವರ ನಾಯಕತ್ವದ ಬಗ್ಗೆ ಹಲವು ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಅವರು ತಮ್ಮ ಸಹ ಆಟಗಾರರನ್ನು ಬೆಂಬಲಿಸುವುದು ಮಾತ್ರವಲ್ಲದೆ ಡ್ರೆಸ್ಸಿಂಗ್ ರೂಂನಲ್ಲಿ ಶಾಂತ ವಾತಾವರಣ ಇರುವಂತೆ ನೋಡಿಕೊಂಡರು.

ರಾಜಸ್ಥಾನ್ ರಾಯಲ್ಸ್ 14 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್ ಆಡಲಿದೆ. ಈ ತಂಡ 2008ರಲ್ಲಿ ಚೊಚ್ಚಲ ಸೀಸನ್‌ನಲ್ಲಿ ಕೊನೆಯದಾಗಿ ಫೈನಲ್‌ನಲ್ಲಿ ಆಡಿ ಪ್ರಶಸ್ತಿ ಗೆದ್ದಿತ್ತು. ರಾಜಸ್ಥಾನ್ ರಾಯಲ್ಸ್ ಇದೀಗ ಎರಡನೇ ಪ್ರಶಸ್ತಿಯನ್ನು ಎದುರು ನೋಡುತ್ತಿದೆ. ಆರ್‌ಸಿಬಿ ವಿರುದ್ಧದ ಕೊನೆಯ ಪಂದ್ಯದಲ್ಲಿ, ಜೋಸ್ ಬಟ್ಲರ್ ಅಮೋಘ ಶತಕದೊಂದಿಗೆ ಉತ್ತಮ ಜೋಶ್‌ನಲ್ಲಿದ್ದರು ಮತ್ತು ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಫಾರ್ಮ್‌ನಲ್ಲಿರುವುದರಿಂದ ರಾಜಸ್ತಾನವು ಪ್ರಶಸ್ತಿ ಗೆಲ್ಲುವ ಫೇವರಿಟ್‌ನಂತೆ ಕಾಣುತ್ತಿದೆ.

IPL 2022 ಫೈನಲ್; GT vs RR ಪಂದ್ಯದ ಹವಾಮಾನ ವರದಿ; ಮಳೆ ಬಂದು ರದ್ದಾದರೆ ಯಾರು ಚಾಂಪಿಯನ್?

IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada
ರಾಜಸ್ತಾನ್ ಮತ್ತು ಗುಜರಾತ್ ಸಂಭಾವ್ಯ ಪ್ಲೇಯಿಂಗ್ 11

ರಾಜಸ್ತಾನ್ ಮತ್ತು ಗುಜರಾತ್ ಸಂಭಾವ್ಯ ಪ್ಲೇಯಿಂಗ್ 11

ಗುಜರಾತ್ ಟೈಟನ್ಸ್‌
ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಆರ್. ಸಾಯಿ ಕಿಶೋರ್, ಮೊಹಮ್ಮದ್ ಶಮಿ, ಯಶ್ ದಯಾಲ್

ರಾಜಸ್ತಾನ್ ರಾಯಲ್ಸ್‌
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್, ಯುಜವೇಂದ್ರ ಚಾಹಲ್

Story first published: Sunday, May 29, 2022, 14:48 [IST]
Other articles published on May 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+