IPL 2022: ಮಾರ್ಚ್ 26ಕ್ಕೆ ಐಪಿಎಲ್ ಪ್ರಾರಂಭ, ಮೇ 29ಕ್ಕೆ ಫೈನಲ್ : ಅಧಿಕೃತವಾಗಿ ಪ್ರಕಟ

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್ ಮಾರ್ಚ್ 26ರಿಂದ ಪ್ರಾರಂಭಗೊಳ್ಳುವುದು ಎಂದು ಐಪಿಎಲ್ ಚೇರ್‌ಮನ್ ಬ್ರಿಜೇಶ್ ಪಟೇಲ್ ಗುರುವಾರ ದೃಢಪಡಿಸಿದ್ದಾರೆ.
ಮಾರ್ಚ್ 26, 2022ರಿಂದ ಪ್ರಾರಂಭಗೊಳ್ಳಲಿರುವ ಐಪಿಎಲ್ ಮುಂಬರುವ ಸೀಸನ್‌ನಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಎಎನ್‌ಐಗೆ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗಿರುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಮೇ 29ಕ್ಕೆ ನಡೆಯಲಿದೆ.
ಈ ಮೊದಲು ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದವು. ಆದ್ರೆ ಈ ಬಾರಿ ಎಲ್ಲಾ ಐಪಿಎಲ್ ಪಂದ್ಯಗಳು ಕೋವಿಡ್ -19 ಬೆದರಿಕೆಯಿಂದಾಗಿ, ಬಹುತೇಕ ಲೀಗ್ ಹಂತದ ಪಂದ್ಯಗಳನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಸಲು ಮಂಡಳಿ ನಿರ್ಧರಿಸಿದೆ. ಉಳಿದಂತೆ ಪುಣೆಯಲ್ಲಿ ಪಂದ್ಯ ನಡೆಯಲಿವೆ. ಹೀಗಾಗಿ ಮುಂಬೈ ಇಂಡಿಯನ್ಸ್ ತವರಿನಲ್ಲಿ ತಮ್ಮ ಪಂದ್ಯಗಳನ್ನು ಆಡುವ ಬಗ್ಗೆ ಇತರ ಫ್ರಾಂಚೈಸಿಗಳು ಬಿಸಿಸಿಐನೊಂದಿಗೆ ಧ್ವನಿ ಎತ್ತಿದ್ದಾರೆ.
ಬೇರೆ ಬೇರೆ ಸ್ಥಳಗಳಲ್ಲಿ ಪಂದ್ಯ ನಡೆದರೆ ಅದು ಸಮಯೋಚಿತ ನಿರ್ಧಾರವಾಗಿರುತ್ತದೆ. ಆದ್ರೆ ಮುಂಬೈಗೆ ತವರಿನಲ್ಲೇ ಪಂದ್ಯ ನಡೆದಾಗ ಹೆಚ್ಚಿನ ಸಹಾಯವಾಗುತ್ತದೆ ಎಂಬುದು ಇತರೆ ಫ್ರಾಂಚೈಸಿಗಳು ಆತಂಕ ವ್ಯಕ್ತಪಡಿಸಿವೆ.
ಇದೇ ತಿಂಗಳ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ರನ್ನು ಬರೋಬ್ಬರಿ 15.25 ಕೋಟಿಗೆ ಖರೀದಿಸುವ ಮೂಲಕ ಟೂರ್ನಿಯ ದುಬಾರಿ ಆಟಗಾರರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications