For Quick Alerts
ALLOW NOTIFICATIONS  
For Daily Alerts
 

ಧೋನಿ ನಟಿಸಿದ್ದ ಐಪಿಎಲ್ ಜಾಹೀರಾತಿಗೆ ತಡೆ: ಸತತ ಸೋಲಿನ ನಂತರ ಮಾಹಿಗೆ ಮತ್ತೊಂದು ಮುಖಭಂಗ!

IPL 2022: setback to Dhoni and star sports, MS Donis IPL campaign promo to be withdrawn

ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಐಪಿಎಲ್ ಆವೃತ್ತಿಗೆ ಕಣಕ್ಕಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದೆ. ಈ ಸತತ ಸೋಲಿನ ನಂತರ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನ ಪ್ರಸಾರಕರಾದ ಸ್ಟಾರ್‌ಸ್ಪೋರ್ಟ್ಸ್‌ಗೆ ಹಿನ್ನಡೆಯುಂಟಾಗಿದೆ. ಐಪಿಎಲ್ ಪ್ರಚಾರಕ್ಕಾಗಿ ಧೋನಿಯನ್ನು ಬಳಸಿಕೊಂಡು ತಯಾರಿಸಿದ್ದ ಜಾಹೀರಾತಿನ ಪ್ರಸಾರವನ್ನು ತಡೆಹಿಡಿಯುವಂತೆ ಅಡ್ವರ್ಟೈಸಿಂಗ್ ಸ್ಟಾಂಡರ್ಸ್ ಕೌನ್ಸಿಲ್ ಆಫ್ ಇಂಡಿಯಾ ಸೂಚನೆ ನೀಡಿದೆ ಎನ್ನಲಾಗಿದ್ದು ಇನ್‌ಸೈಡ್ ಸ್ಪೋರ್ಟ್ ಈ ಬಗ್ಗೆ ವರದಿ ಮಾಡಿದೆ.

ಹಿಂದಿನ ಬಾರಿಯಂತೆಯೇ ಈ ಬಾರಿ ಕೂಡ ಐಪಿಎಲ್ ಟೂರ್ನಿಯ ನೇರ ಪ್ರಸಾರದ ಪ್ರಚಾರಕ್ಕೆ ಎಂಎಸ್ ಧೋನಿಯನ್ನು ಬಳಸಿಕೊಂಡು ಸ್ಟಾರ್‌ಸ್ಪೋರ್ಟ್ ವಾಹಿನಿ ಕೆಲ ಪ್ರೋಮೋಗಳನ್ನು ತಯಾರಿಸಿದೆ. ಇದರಲ್ಲಿ ಒಂದು ಪ್ರೋಮೋವನ್ನು ತಡೆಹಿಡಿಯುವಂತೆ ಎಎಸ್‌ಸಿಐ ಸೂಚನೆ ನೀಡಿದೆ ಎನ್ನಲಾಗಿದೆ.

ಜಾಹಿರಾತಿನಲ್ಲಿ ಏನಿದೆ: ಈ ಜಾಹಿರಾತಿನಲ್ಲಿ ಧೋನಿ ಬಸ್ ಡ್ರೈವರ್‌ನ ಪಾತ್ರವಹಿಸಿದ್ದಾರೆ. ಬಸ್ ಚಲಾಯಿಸುತ್ತಾ ಪ್ರಮುಖ ರಸ್ತೆಯ ಟ್ರಾಫಿಕ್‌ನಲ್ಲಿರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಐಪಿಎಲ್ ಪಂದ್ಯ ವೀಕ್ಷಿಸುವ ದೃಶ್ಯಗಳು ಈ ಜಾಹೀರಾತಿನಲ್ಲಿದೆ. ಈ ಜಾಹೀರಾತಿನಲ್ಲಿರುವ ಈ ಅಂಶಗಳೇ ಈಗ ಎಎಸ್‌ಸಿಐ ಕೆಂಗಣ್ಣಿಗೆ ಗುರಿಯಾಗಿದೆ.

ಜಾಹೀರಾತು ತಡೆಗೆ ಕಾರಣವೇನು?: ಎಂಎಸ್ ಧೋನಿ ನಟಿಸಿರುವ ಈ ಜಾಹೀರಾತಿನಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಈ ಜಾಹೀರಾತು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆಯನ್ನು ವೈಭವೀಕರಿಸುವ ದೃಶ್ಯಗಳನ್ನು ಹೊಂದಿದೆ ಎಂದು ಎಎಸ್‌ಸಿಐ ಉಲ್ಲೇಖಿಸಿದ್ದು ಇದೇ ಕಾರಣಕ್ಕಾಗಿ ಈ ಪ್ರೋಮೋವನ್ನು ಪ್ರಸಾರ ಮಾಡದಂತೆ ಎಎಸ್‌ಸಿಐ ಸೂಚನೆ ನೀಡಿದೆ.

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಕ್ಕಿಳಿದಿದ್ದರು. ರವೀಂದ್ರ ಜಡೇಜಾ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಟೂರ್ನಿಯ ಆರಂಭದಿಂದಲೇ ಜಡೇಜಾ ನೇತೃತ್ವದ ತಂಡ ಸೋಲಿನ ಮೇಲೆ ಸೋಲು ಕಾಣಲು ಆರಂಭಿಸಿದೆ. ಮೊದಲ ಮೂರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಸಾಧಿಸಲು ಹಾಲಿ ಚಾಂಪಿಯನ್ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.

ಆದರೆ ಈ ಬಾರಿಯ ಟೂರ್ನಿಯಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿದ್ದು ಮೊದಲ ಎರಡು ಪಂದ್ಯಗಳಲ್ಲಿ ಬರ್ಜರಿ ಪ್ರದರ್ಶನ ನಿಡಿ ಗಮನಸೆಳೆದಿದ್ದಾರೆ. ಅದರಲ್ಲೂ ಕೆಕೆಆರ್ ವಿರುದ್ಧ ಆಡಿದ ಪ್ರಥಮ ಪಂದ್ಯದಲ್ಲಿ ಸ್ಪೋಟಕ ಅರ್ಧ ಶತಕ ಸಿಡಿಸಿದ್ದರು ಮಾಹಿ.

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್ ಹೀಗಿದೆ: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಕೆಎಂ ಆಸಿಫ್, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮೊಯಿನ್ ಅಲಿ, ಡ್ವೈನ್ ಪ್ರಿಟೋರಿಯಸ್

Story first published: Friday, April 8, 2022, 10:06 [IST]
Other articles published on Apr 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+