ಶಹಬಾಜ್ ಅಹ್ಮದ್‌ಗೆ ಶಬ್ಬಾಸ್.. ಎಂದ ಆರ್‌ಸಿಬಿ ಡೈರೆಕ್ಟರ್ ಮೈಕ್ ಹೆಸನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಚ್, ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಷನ್ ಮೈಕ್ ಹೆಸನ್ , ಆಲ್‌ರೌಂಡರ್ ಶಹಬಾಜ್ ಅಹ್ಮದ್ ಪರ್ಫಾಮೆನ್ಸ್‌ಗೆ ಶಬ್ಬಾಸ್‌ಗಿರಿ ನೀಡಿದ್ದಾರೆ.
ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಶಹಬಾಜ್ ಅಹ್ಮದ್ ಪ್ರತಿ ಪಂದ್ಯದಲ್ಲೂ ಕೆಳಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ದಿನೇಶ್ ಕಾರ್ತಿಕ್ ಜೊತೆಗೂಡಿ ಆರ್‌ಸಿಬಿ ಪರ ಭರ್ಜರಿ ಪರ್ಫಾಮೆನ್ಸ್ ನೀಡುವ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.
"ಅವನದ್ದು ಯಾವಾಗಲೂ ಶಾಂತರೀತಿಯ ಸ್ವಭಾವದ ಆಟ. ಆತ ನಿಜವಾಗಿಯೂ ಮೊದಲ ಬಾರಿಗೆ ಪೂರ್ಣ ಸೀಸನ್ ಆಡುತ್ತಿದ್ದಾನೆ. ಅನುಭವಿ ಆಟಗಾರರ ಜೊತೆಗೆ ಚೆಂಡಿನ ಮೇಲಿನ ಹಿಡಿತದಲ್ಲಿಯೂ ಸಮರ್ಥವಾಗಿ ಹಿರಿಯ ವೃತ್ತಿಪರರಾಗಿ ಕಾಣುತ್ತಾರೆ. ಜೊತೆಗೆ ಆಟಗಾರರ ಒತ್ತಡವನ್ನು ಕಡಿಮೆ ಮಾಡಲು ಬೌಂಡರಿಯನ್ನು ಪಡೆಯುತ್ತಾರೆ'' ಎಂದು ಮೈಕ್ ಹೆಸನ್ ಹೇಳಿದ್ದಾರೆ.
ಆತ ಚೆಂಡನ್ನು ಚೆನ್ನಾಗಿ ಬಾರಿಸುತ್ತಾನೆ, ಹಾಗೂ ಆತನ ಬಳಿ ಸಾಕಷ್ಟು ಶಕ್ತಿಯಿದೆ. ಇಷ್ಟೆಲ್ಲಾ ಹೊಂದಿರುವ ಆಟಗಾರ ಕಡಿಮೆ ಪಂದ್ಯಗಳನ್ನ ಆಡಿದ್ದಾನೆ ಎಂದು ಮೈಕ್ ಹೆಸನ್ ಆರ್‌ಸಿಬಿ ಆಟಗಾರ ಶಹಬಾಜ್ ಕುರಿತು ಹೊಗಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಬಾಜ್ 21 ಎಸೆತಗಳಲ್ಲಿ 32ರನ್ ಕಲೆಹಾಕಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ದಿನೇಶ್ ಕಾರ್ತಿಕ್ ಜೊತೆಗೂಡಿ ಉತ್ತಮ ಜೊತೆಯಾಟದ ಮೂಲಕ ತಂಡದ ಚೇತರಿಕೆಗೆ ಕಾರಣರಾದ್ರು.
ಇನ್ನು ಬೌಲಿಂಗ್‌ನಲ್ಲಿ ಆತ ಮೊದಲ ಓವರ್‌ನಲ್ಲಿ 15ರನ್‌ಗಳ ಬಿಟ್ಟುಕೊಟ್ಟರು. ಆದ್ರೆ ನಂತರದ ಓವರ್‌ನಲ್ಲಿ ಆತ ನೀಡಿದ್ದು ಕೇವಲ 2 ರನ್ ಹೀಗಾಗಿ ಚೆಂಡಿನೊಂದಿಗೆ ಆತ ಅಸಾಧಾರಣ ಎಂದು ಭಾವಿಸುತ್ತೇನೆ ಎಂದು ಮೈಕ್ ಹೆಸನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications