For Quick Alerts
ALLOW NOTIFICATIONS  
For Daily Alerts
 

Kaviya Maran : ಸತತ 3 ಪಂದ್ಯ ಗೆದ್ದ SRH: ಕಾವ್ಯ ಮಾರನ್‌ಗೆ ಹೊಗಳಿಕೆಯ ಸುರಿಮಳೆ

SRH

ಐಪಿಎಲ್‌ 15ನೇ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಸೋತು ಚೇತರಿಸಿಕೊಂಡಿದ್ದ ತಂಡ ಇದೀಗ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ಈ ಯಶಸ್ಸಿನ ನಡೆಯಿಂದಾಗಿ ಎಸ್‌ಆರ್ಎಚ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್‌ರನ್ನ ಹೊಗಳಿದ್ದು, ತಮಾಷೆಯ ಮಿಮ್ಸ್‌ಗಳನ್ನು, ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೆಕೆಆರ್ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಹುಲ್ ತ್ರಿಪಾಠಿ, ಏಡನ್ ಮಕ್ರಾಮ್ ಮೇಲೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಮೊದಲೆರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನೊಂದಿಗೆ ಗೆಲುವಿನ ಖಾತೆ ತೆರೆಯಿತು. ಆದ್ರೆ ಸತತ ಎರಡು ಪಂದ್ಯ ಸೋತಿದ್ದ ಎಸ್‌ಆರ್‌ಎಚ್‌ ಮಾಲೀಕರಾದ ಕಾವ್ಯಾ ಮಾರನ್ ಪಂದ್ಯಕ್ಕೆ ಹಾಜರಾಗಿರಲಿಲ್ಲ. ವೈಯಕ್ತಿಕ ಕಾರಣಕ್ಕಾಗಿ ಅವಳು ಹಾಜರಾಗಲಿಲ್ಲ.

ಮೆಗಾ ಹರಾಜಿನಲ್ಲಿ ಸರಿಯಾದ ತಂಡವನ್ನು ತೆಗೆದುಕೊಳ್ಳದಿದ್ದಕ್ಕಾಗಿ ಅಭಿಮಾನಿಗಳ ಒಂದು ಗುಂಪು ಆಕೆಯ ಮೇಲೆ ಕೋಪಗೊಂಡಿತ್ತು. ಸನ್ ರೈಸರ್ಸ್ ಗೆದ್ದಾಗ ಕಾವ್ಯಾ ಪಂದ್ಯಕ್ಕೆ ಗೈರು ಹಾಜರಾಗಿದ್ದಕ್ಕೆ ಪಂದ್ಯ ಗೆದ್ದಿದೆ ಎಂದು ಕಠಿಣವಾಗಿ ಟ್ವೀಟ್ ಮಾಡಿದ್ದಲ್ಲದೆ, ಆಕೆ ಐರನ್ ಲೆಗ್ ಎಂದು ಪ್ರಚಾರ ಮಾಡಿದ್ದರು. ಪ್ರತಿ ಪಂದ್ಯಕ್ಕೂ ಮುನ್ನ ಸ್ಟೇಡಿಯಂಗೆ ಬರದಂತೆ ಕಾವ್ಯಾ ಮಾರನ್‌ಗೆ ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಲಾಗಿತ್ತು.

ಆದ್ರೆ ಕಾವ್ಯ ಮಾರನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಹಾಜರಾಗಿದ್ದರು. ಗ್ಯಾಲರಿಯಲ್ಲಿ ತಮ್ಮ ಹಾವಭಾವದ ಮೂಲಕ ಅಭಿಮಾನಿಗಳನ್ನು ಸೆಳೆದರು. ಆಕೆಯ ನಗುವನ್ನ ಕ್ಯಾಮರಾಮನ್ ಪದೇ ಪದೇ ತೋರಿಸುತ್ತಿದರು. ಇದಕ್ಕೆ ಕಾರಣ ಸನ್‌ರೈಸರ್ಸ್ ಗೆಲುವಿನ ಬೇಟೆ. ಯಾರು ಕಾವ್ಯ ಮಾರನ್ ವಿರುದ್ಧ ಕಿಡಿಕಾಡಿದ್ದರೋ , ಅವರ ವಿರುದ್ಧ ಅಭಿಮಾನಿಗಳು ಬೆಂಬಲಕ್ಕೆ ನಿಂತರು. ಕಾವ್ಯಾ ಬಂದಿದ್ದಕ್ಕೆ ಎಸ್‌ಆರ್‌ಎಚ್ ಪಂದ್ಯ ಗೆದ್ದಿದೆ ಎಂದು ಕಾಮೆಂಟ್ ಮಾಡಿ ಗೆಲುವಿನ ನಗೆ ಬೀರಿದರು.

ಸೂರ್ಯಕುಮಾರ್ ಯಾದವ್ 4 ಬಿಟ್ಟು ಬೌಲರ್ ಬಳಿ ಕ್ಷಮೆಯಾಚಿಸಿದರು | Oneindia Kannada

ಸನ್ ರೈಸರ್ಸ್ ಆಟಗಾರರ ಅದ್ಭುತ ಪ್ರದರ್ಶನಕ್ಕೆ ನೆಟಿಜನ್ ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಟ್ರೆಂಡ್ ಮಾಡುತ್ತಿರುವ ಮೀಮ್‌ಗಳು ಆಕರ್ಷಕವಾಗಿವೆ. ಕಾವ್ಯಾ ಪಾಪಾ ಮುಖದಲ್ಲಿ ನಗು.. ಗ್ಲೋ ತುಂಬಾ ಖುಷಿಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Story first published: Saturday, April 16, 2022, 17:51 [IST]
Other articles published on Apr 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+