Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR vs SRH: ತ್ರಿಪಾಠಿ, ಮಾರ್ಕ್ರಮ್ ಅಬ್ಬರಕ್ಕೆ ಕೆಕೆಆರ್ ಧೂಳಿಪಟ; ಹ್ಯಾಟ್ರಿಕ್ ಜಯ ಸಾಧಿಸಿದ ಹೈದರಾಬಾದ್!

IPL 2022: Sunrisers Hyderabad beat Kolkata Knight Riders by 7 wickets

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 25ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಸನ್ ರೈಸರ್ಸ್ ಹೈದರಾಬಾದ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ಕಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 176 ರನ್‌ಗಳ ಗುರಿಯನ್ನು ನೀಡಿತ್ತು.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ 6 ರನ್ ಗಳಿಸಿ ಔಟ್ ಆದರೆ, ಆ್ಯರನ್ ಫಿಂಚ್ 7 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 28 ರನ್, ಸುನಿಲ್ ನರೈನ್ 6 ರನ್, ಶೆಲ್ಡನ್ ಜಾಕ್ಸನ್ 7 ರನ್, ಪ್ಯಾಟ್ ಕಮಿನ್ಸ್ 3 ರನ್, ಅಮನ್ ಹಕೀಮ್ ಖಾನ್ 5 ರನ್ ಮತ್ತು ಉಮೇಶ್ ಯಾದವ್ ಅಜೇಯ 1 ರನ್ ಕಲೆ ಹಾಕಿದರು. ತಂಡ ಮೊದಲ 3 ವಿಕೆಟ್‍ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 36 ಎಸೆತಗಳಲ್ಲಿ 54 ರನ್ ಬಾರಿಸಿ ಆಸರೆಯಾದರು. ಇನ್ನುಳಿದಂತೆ ಅಂತಿಮ ಹಂತದಲ್ಲಿ ಅಬ್ಬರಿಸಿದ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ ಅಜೇಯ 49 ರನ್ ಚಚ್ಚಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ ಈ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 3 ರನ್ ಗಳಿಸಿ ಔಟ್ ಆದರೆ, ನಾಯಕ ಕೇನ್ ವಿಲಿಯಮ್ಸನ್ 17 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭಿಕರಿಂದ ಉತ್ತಮ ಬುನಾದಿಯನ್ನು ಪಡೆದುಕೊಳ್ಳದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 3ನೇ ವಿಕೆಟ್‍ಗೆ ಜತೆಯಾದ ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಮ್ ಅಬ್ಬರಿಸಿ 94 ರನ್‌ಗಳ ಜತೆಯಾಟವಾಡಿ ಆಸರೆಯಾದರು.

37 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 4 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 71 ರನ್ ಚಚ್ಚಿದರೆ, ಏಡನ್ ಮರ್ಕ್ರಮ್ 36 ಎಸೆತಗಳಲ್ಲಿ ಅಜೇಯ 68 ಸಿಡಿಸಿದರು ಹಾಗೂ ನಿಕೊಲಸ್ ಪೂರನ್ 8 ಎಸೆತಗಳಲ್ಲಿ ಅಜೇಯ 5 ರನ್ ಕಲೆ ಹಾಕಿದರು. ಇನ್ನು 18 ಎಸೆತಗಳಿಗೆ 18 ರನ್ ಅಗತ್ಯವಿದ್ದಾಗ ಪ್ಯಾಟ್ ಕಮಿನ್ಸ್ ಬೌಲಿಂಗ್ ಮಾಡಿದರು. ಈ ಓವರ್‌ನ ಮೊದಲ ಎಸೆತಕ್ಕೆ ಏಡನ್ ಮಾರ್ಕ್ರಮ್ ಸಿಂಗಲ್ ತೆಗೆದುಕೊಂಡರೆ, ಎರಡನೇ ಎಸೆತದಲ್ಲಿ ನಿಕೋಲಸ್ ಪೂರನ್ 1 ರನ್ ಓಡಿದರು ಹಾಗೂ ನಂತರ ಪ್ಯಾಟ್ ಕಮಿನ್ಸ್ ಎಸೆದ ಓವರ್‌ನ 3, 4 ಮತ್ತು 5ನೇ ಎಸೆತಗಳಿಗೆ ಕ್ರಮವಾಗಿ 4,6,6 ಚಚ್ಚಿದ ಏಡನ್ ಮಾರ್ಕ್ರಮ್ ಅಬ್ಬರಿಸಿದರು. ಈ ಮೂಲಕ 17.5 ಓವರ್‌ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದ ಸನ್ ರೈಸರ್ಸ್ ಹೈದರಾಬಾದ್ ಗೆಲುವಿನ ಕೇಕೆ ಹಾಕಿತು.

rahul tripathi

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆ್ಯಂಡ್ರೆ ರಸೆಲ್ 2 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು. ಈ ಪಂದ್ಯ ಮುಕ್ತಾಯವಾದ ನಂತರ ಅಂಕ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಏಳನೇ ಸ್ಥಾನಕ್ಕೇರಿದ್ದರೆ, ದ್ವಿತೀಯ ಸ್ಥಾನದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

Story first published: Saturday, April 16, 2022, 10:40 [IST]
Other articles published on Apr 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+