SRH vs PBKS: ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್, ಪ್ಲೇಯಿಂಗ್ XI ಮಾಹಿತಿ

ಐಪಿಎಲ್ 15ನೇ ಆವೃತ್ತಿಯ ಲೀಗ್ ಹಂತದ ಅಂತಿಮ ಪಂದ್ಯ ಆರಂಭವಾಗಿದ್ದು ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಭುವನೇಶ್ವರ್ ಕುಮಾರ್ ನಾಯಕತ್ವ ವಹಿಸಿಕೊಂಡಿದ್ದಾರೆ.
ಇನ್ನು ಸನ್‌ರೈಸರ್ಸ್ ಹೈ್ರಾಬಾದ್ ತಂಡದಲ್ಲಿ ಎರಡು ಬದಲಾವನೆ ಮಾಡಿಕೊಳ್ಳಲಾಗಿದೆ. ರೊಮ್ಯಾರಿಯೋ ಶೆಫರ್ಡ್ ಹಾಗೂ ಜಗದೀಶ ಸುಚಿತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಳ್ಳಲಾಗಿದ್ದು ನಥನ್ ಎಲ್ಲೀಸ್, ಶಾರೂಕ್‌ಖಾನ್ ಹಾಗೂ ಪ್ರೇರಖ್ ಮಂಖಡ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಈ ಪಂದ್ಯ ಲೀಗ್ ಹಂತದ ಅಂತಿ ಪಂದ್ಯವಾಗಿದ್ದರೂ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. ಹೀಗಾಗಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿಲ್ಲ. ಆದರೆ ಎರಡು ತಂಡಗಳು ಕೂಡ ಗೆಲುವಿನೊಂದಿಗೆ ಟೂರ್ನಿಯನ್ನು ಮುಕ್ತಾಯಗೊಳಿಸುವ ಸಿದ್ಧತೆಯಲ್ಲಿದ್ದು ಅದಕ್ಕಾಗಿ ಪೈಪೋಟಿಯ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್
ಬೆಂಚ್: ಟಿ ನಟರಾಜನ್, ಗ್ಲೆನ್ ಫಿಲಿಪ್ಸ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ
ಪಂಜಾಬ್ ಕಿಂಗ್ಸ್ ಆಡುವ ಬಳಗ: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್
ಬೆಂಚ್: ಭಾನುಕಾ ರಾಜಪಕ್ಸೆ, ರಿಷಿ ಧವನ್, ರಾಹುಲ್ ಚಾಹರ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ಟೈಡೆ, ಪ್ರಭಾಸಿಮ್ರಾನ್ ಸಿಂಗ್, ವೈಭವ್ ಅರೋರಾ, ಅನ್ಶ್ ಪಟೇಲ್, ರಾಜ್ ಬಾವಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications