For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಸ್ಲೆಡ್ಜಿಂಗ್ ಮಾಡುವ ರೀತಿಯೇ ವಿಭಿನ್ನ: ಸೂರ್ಯಕುಮಾರ್ ಯಾದವ್

virat

ಐಪಿಎಲ್ 2020 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಭಾರತದ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಸ್ಲೆಡ್ಜಿಂಗ್‌ ವಿಚಾರವನ್ನ ಸೂರ್ಯಕುಮಾರ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಮತ್ತು ತನ್ನ ದೀರ್ಘ ನೋಟದ ಹಿಂದಿನ ಸಂಪೂರ್ಣ ಕಥೆಯನ್ನು ಬಹಿರಂಗಪಡಿಸಿದ್ದಾರೆ.

2021ರ ಸೀಸನ್‌ನಲ್ಲಿ ಅರ್ಧ ಸೀಸನ್‌ ಅಬುಧಾಬಿಯಲ್ಲಿ ನಡೆಯಿತು. ಅದು 14ನೇ ಸೀಸನ್‌ನ 48 ನೇ ಪಂದ್ಯವಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 164ರನ್ ಗಳಿಸಿತ್ತು. ಮುಂಬೈ ತಂಡ ಚೇಸಿಂಗ್ ಮಾಡಲು ಪ್ರಾರಂಭಿಸಿ ಎರಡು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಸೂರ್ಯ ಕುಮಾರ್ ಅವರ ಅರ್ಧಶತಕವು ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ನಡುವೆ ಸ್ಲೆಡ್ಜಿಂಗ್‌ ಘಟನೆ ಅನುಭವ ಹೇಗಿತ್ತು ಎಂಬುದನ್ನ, ಗೌರವ್ ಕಪೂರ್ ಅವರ ಯೂಟ್ಯೂಬ್ ಶೋ ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್‌ನಲ್ಲಿ ಸೂರ್ಯಕುಮಾರ್ ವಿವರಿಸಿದ್ದಾರೆ.

ಡೇಲ್ ಸ್ಟೇನ್ ಅವರ ಎಸೆತಗಳಲ್ಲಿ ಸತತ ಎರಡು ಬೌಂಡರಿ ಬಾರಿಸಿದ್ದ ಸೂರ್ಯ ಕುಮಾರ್ ಮತ್ತೆ ರನ್ ಗಳಿಸುವ ಪ್ರಯತ್ನದಲ್ಲಿ ಕೊಹ್ಲಿಯ ಹತ್ತಿರ ಚೆಂಡನ್ನು ಹೊಡೆದಾಗ ಅದನ್ನು ಹಿಡಿದುಕೊಂಡು ನೇರವಾಗಿ ಮಾತು ಸಹ ಆಡದೇ ಮುಂಬೈ ಇಂಡಿಯನ್ಸ್‌ ಹಿಟ್ಟರ್ ಬಳಿಗೆ ಬಂದು ಅವನನ್ನು ದೀರ್ಘವಾಗಿ ಗುರಾಯಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ನಾಯಕ ಸ್ಲೆಡ್ಜಿಂಗ್ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ.

''ಅದು ಕೊಹ್ಲಿಯ ಶೈಲಿ. ಮೈದಾನದಲ್ಲಿ ಅವನ ಶಕ್ತಿಯ ಮಟ್ಟವು ಯಾವಾಗಲೂ ವಿಭಿನ್ನವಾಗಿರುತ್ತದೆ. ಆ ಪಂದ್ಯವು ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿತ್ತು ಆದ್ದರಿಂದ ಆ ಪಂದ್ಯದಲ್ಲಿ ವಿರಾಟ್ ಅವರ ಸ್ಲೆಡ್ಜಿಂಗ್ ಮತ್ತೊಂದು ಹಂತದಲ್ಲಿತ್ತು. ನನ್ನ ಆಟದ ಮೇಲೆ ನಾನು ಗಮನವನ್ನು ಕೇಂದ್ರಿಕರಿಸಿದ್ದೆ, ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯವನ್ನು ಗೆಲ್ಲಬೇಕು ಎನ್ನುವುದು ನನ್ನ ಆಶಯವಾಗಿತ್ತು. ರನ್ ಗಳಿಸುವ ಯತ್ನದಲ್ಲಿ ಚೆಂಡು ಕೊಹ್ಲಿ ಬಳಿ ಹೊಯಿತು. ಚೆಂಡು ಪಡೆದ ವಿರಾಟ್‌ ನನ್ನನ್ನೇ ಗುರಾಯಿಸುತ್ತ ಬಂದರು ನಾನು ಸಹ ಹಿಂದೆ ಸರಿಯದೇ ದೃಷ್ಠಿಯನ್ನು ನೇರಗೊಳಿಸಿದೆ ಅದು ತುಂಬಾ ಸಹಜವಾಗಿತ್ತು'' ಎಂದು ಹೇಳಿದ್ದಾರೆ.

ಆರೊನ್ ಫಿಂಚ್-ಪ್ರಸಿದ್ಧ್ ಕೃಷ್ಣ ಮೈದಾನದಲ್ಲೇ ಮಾತಿನ‌ ಚಕಮಕಿಯ ವಿಡಿಯೋ ವೈರಲ್ | Oneindia Kannada

ಸೂರ್ಯ ಕುಮಾರ್ ಯಾದವ್ ಅವರು ಆ ಪಂದ್ಯದಲ್ಲಿ 43 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ಮುಂಬೈ ತಂಡವನ್ನ ಗೆಲುವಿನ ದಡವನ್ನು ಸೇರಿಸಿದ್ದರು. ವಿರಾಟ್‌ ಚೆಂಡಿನೊಂದಿಗೆ ನನ್ನ ಬಳಿ ಸ್ಲೆಡ್ಜಿಂಗ್ ಮಾಡಲು ಆಗಮಿಸುತ್ತಿದ್ದರು. ಮುಂದೆ ಬಂದ ವಿರಾಟ್ ಒಂದು ಮಾತನ್ನು ಆಡಲಿಲ್ಲ ನಾನು ಕೂಡ ಸುಮ್ಮನ್ನಿದ್ದೇ ವಿರಾಟ್ ನ ಯಾವುದೇ ಕ್ರಮಗಳಿಗೆ ಪ್ರತಿಕ್ರಿಯಿ ನೀಡದೆ ಸಂದರ್ಭದ ಮಹತ್ವವನ್ನು ಅರ್ಥ ಮಾಡಿಕೊಂಡೆ ಎಂದು ಹೇಳಿದ್ದಾರೆ.

Story first published: Wednesday, April 20, 2022, 10:08 [IST]
Other articles published on Apr 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+