For Quick Alerts
ALLOW NOTIFICATIONS  
For Daily Alerts
 

IPL 2022: ಈ 4 ಆಟಗಾರರನ್ನು ಹೊರಬಿಟ್ಟು, ಕೈ ಸುಟ್ಟುಕೊಂಡ ಪ್ರಾಂಚೈಸಿಗಳು

IPL 2022: These 4 Players From Previous Season Each Team Failed To Replace

ಐಪಿಎಲ್ 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆ ಜೊತೆಗೆ ಹಾಲಿ ತಂಡಗಳ ಅನೇಕ ಆಟಗಾರರು ಅದಲು ಬದಲಾಗಿದ್ದಾರೆ. ಹೀಗಿರುವಾಗ ಸ್ಕ್ವಾಡ್ ಜೊತೆಗೆ ತಂಡದ ಸ್ಟ್ರೆಂಥ್ ಮತ್ತು ವೀಕ್ನೆಸ್ ಕೂಡ ಏರುಪೇರಾಗಿದೆ. ಇದಕ್ಕೆ ಪ್ರಮುಖ ಕಾರಣ ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು.

ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಫ್ರಾಂಚೈಸಿಗಳಷ್ಟೇ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿತು. ಆದ್ರೆ ಮತ್ತೆ ಕೆಲವು ಮೂವರು, ಎರಡು ಹೀಗೆ ಆಟಗಾರರನ್ನ ರೀಟೈನ್ ಮಾಡಿಕೊಂಡಿದ್ದು, ಬಿಡ್ಡಿಂಗ್‌ನಲ್ಲಿ ಬಿಡದೇ ಕೆಲವು ಆಟಗಾರರನ್ನ ಫ್ರಾಂಚೈಸಿಗಳು ಖರೀದಿಸಿವೆ. ಇದಕ್ಕೆ ಉದಾಹರಣೆ ಮುಂಬೈ ಇಂಡಿಯನ್ಸ್‌ನ ಇಶಾನ್ ಕಿಶನ್, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲರ್ ದೀಪಕ್ ಚಹಾರ್.

ಐಪಿಎಲ್ 2021ರ ಸೀಸನ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೂ ಸಹ, ಕೆಲವು ಆಟಗಾರರನ್ನ ಕೆಲ ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿಲ್ಲ, ಬಿಡ್ಡಿಂಗ್ ನಲ್ಲಿ ಖರೀದಿಗೂ ಮುಂದಾಗಿಲ್ಲ. ಆದ್ರೆ ಇಂತಹ ಆಟಗಾರರ ಬದಲಿಗೆ ಮತ್ತೊಬ್ಬ ಆಟಗಾರನನ್ನ ಸಹ ಕರೆತರಲು ಈ ಫ್ರಾಂಚೈಸಿಗಳಿಗೆ ಸಾಧ್ಯವಾಗಿಲ್ಲ. ಅಂತಹ ಆಟಗಾರರು ಯಾರು? ಯಾವ ಫ್ರಾಂಚೈಸಿ ಎಂಬುದನ್ನ ಈ ಕೆಳಗೆ ತಿಳಿಯಿರಿ.

ಫಾಫ್ ಡುಪ್ಲೆಸಿಸ್

ಫಾಫ್ ಡುಪ್ಲೆಸಿಸ್

ಐಪಿಎಲ್ ನ ಚಾಂಪಿಯನ್ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದುವರೆಗೆ 11 ಬಾರಿ ಪ್ಲೇಆಫ್ ತಲುಪಿರುವ ಈ ತಂಡ 4 ಬಾರಿ ಚಾಂಪಿಯನ್ ಗಳಾಗಿ ಹೊರಹೊಮ್ಮಿದೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದ್ದ ಪ್ಲೇಯರ್‌ ಫಾಫ್ ಡುಪ್ಲೆಸಿಸ್.

2021ರ ಆವೃತ್ತಿಯಲ್ಲಿ ಮಿಂಚಿನ ಬ್ಯಾಟಂಗ್ ಪ್ರದರ್ಶನ ನೀಡಿದ ಪಾಫ್ 14 ಪಂದ್ಯಗಳಲ್ಲಿ 633 ರನ್ ಗಳಿಸುವ ಮೂಲಕ ಅತಿ ಹೆಚ್ಚು ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಚೆನ್ನೈ ಫ್ರಾಂಚೈಸಿಯು ಭವಿಷ್ಯದಲ್ಲಿ ಬಲಿಷ್ಠವಾದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ವಯೋಮಿತಿ ಆಧಾರದ ಮೇಲೆ ಫಾಫ್ ಅವರನ್ನು ಉಳಿಸಿಕೊಳ್ಳಲಿಲ್ಲ. ಪ್ರಸ್ತುತ ಆವೃತ್ತಿಯಲ್ಲಿ ಆರ್ ಸಿಬಿ ತಂಡದಲ್ಲಿ ನಾಯಕನಾಗಿರುವ ಫಾಫ್ 3 ಪಂದ್ಯಗಳಲ್ಲಿ 122 ರನ್ ಗಳಿಸಿ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ. ಆದ್ರೆ ಚೆನ್ನೈ ತಂಡವು ರುತುರಾಜ್ ಗಾಯಕ್ವಾಡ್ ಜೊತೆಗೆ ಉತ್ತಮ ಯುವ ಆರಂಭಿಕ ಆಟಗಾರರ ಹುಡುಕಾಟದಲ್ಲಿದೆ.

ಕೆ ಎಲ್ ರಾಹುಲ್ :

ಕೆ ಎಲ್ ರಾಹುಲ್ :

ಪಂಜಾಬ್ ಕಿಂಗ್ಸ್ ಕಳೆದ ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ ವಿಫಲ ತಂಡವಾಗಿದ್ದರೂ, ತಂಡದ ನಾಯಕ ಕೆ.ಎಲ್ ರಾಹುಲ್ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದರು. 2019 ರಿಂದ 2021 ರವರೆಗೆ ಫ್ರಾಂಚೈಸಿ ಪರ ಕ್ರಮವಾಗಿ 593, 670 ಮತ್ತು 626 ರನ್ ಗಳೊಂದಿಗೆ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದರು.

ಪಂಜಾಬ್ ಕಿಂಗ್ಸ್ ತಂಡದ ಏಳಿಗೆಗಾಗಿ ಶ್ರಮಿಸಿದ್ದ ಕೆ.ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ವಿಫಲಗೊಂಡಿತು. 2022 ರ ಮೆಗಾ ಹರಾಜು ಪ್ರಕ್ರೀಯೆಗೂ ಮೊದಲೇ ಡ್ರಾಫ್ಟ್ ಮೂಲಕ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ ಅವರನ್ನು ಆಯ್ಕೆ ಮಾಡಿತು. ಈ ಸೀಸನ್ ನಲ್ಲಿ ಉತ್ತಮ ಫಾರ್ಮ್ ಉಳಿಸಿಕೊಂಡಿರುವ ಕೆ.ಎಲ್ ರಾಹುಲ್ ಈಗಾಗಲೇ 100 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಎಲ್ಎಸ್‌ಜಿ ಕಳೆದ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಜಯಶಾಲಿಗಳಾಗಿದ್ದು, ನಾಯಕನಾಗಿ ತಂಡವನ್ನು ಮತ್ತು ಆಟಗಾರರನ್ನು ಹುರಿದುಂಬಿಸುತ್ತ ತಂಡವನ್ನ ಮುನ್ನಡೆಸುತ್ತಿದ್ದಾರೆ.

ರಾಹುಲ್ ಬದಲಿಗೆ ಪಂಜಾಬ್ ಕಿಂಗ್ಸ್‌ ಅನುಭವಿ ಆಟಗಾರ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದ್ದು, ಮಯಾಂಕ್ ಅಗರ್ವಾಲ್ ಅವರೊಂದಿಗೆ ಓಪನಿಂಗ್ ಮಾಡಲು ಖರೀದಿಸಿತು. ಧವನ್ ಅವರು ಐಪಿಎಲ್ ನಲ್ಲಿ ಅಗ್ರ ಕ್ರಮಾಂಕದಲ್ಲಿ ಗುಣಮಟ್ಟದ ರನ್ ಸ್ಕೋರರ್ ಆಗಿದ್ದರೂ, ಪಂಜಾಬ್ ಫ್ರಾಂಚೈಸಿಗೆ ರಾಹುಲ್ ಅವರ ಪ್ರಾಬಲ್ಯವನ್ನು ಸರಿಗಟ್ಟುವುದು ನಿಜಕ್ಕೂ ಸವಾಲಾಗಿದೆ.

ಅವೇಶ್ ಖಾನ್:

ಅವೇಶ್ ಖಾನ್:

ಭಾರತದ ಪರವಾಗಿ 2016 ರಲ್ಲಿ ಅಂಡರ್ 19 ವಿಶ್ವಕಪ್ ನಲ್ಲಿ ಕ್ಲಾಸಿಕ್ ಬೌಲಿಂಗ್ ಪ್ರದರ್ಶನದಿಂದ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ಅವೇಶ್ ಖಾನ್, ಆರು ಪಂದ್ಯಗಳಲ್ಲಿ 12 ವಿಕೆಟ್ ಗಳನ್ನು ಪಡೆಯುವ ಮೂಲಕ ತಂಡವು ಫೈನಲ್ ತಲುಪಲು ಸಹಾಯ ಮಾಡಿದರು. ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ, ಅವರು ಐಪಿಎಲ್ 2017 ರ ಆವೃತ್ತಿಯಲ್ಲಿ ಆರ್ ಸಿಬಿ ತಂಡಕ್ಕೆ ಪದಾರ್ಪಣೆ ಮಾಡಿದರು.

ಕೇವಲ ಒಂದೇ ಒಂದು ಪಂದ್ಯವನ್ನಾಡಿದ ಅವೇಶ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನ ಸಾಭೀತುಪಡಿಸಲು ವಿಫಲರಾದರು. ನಂತರದಲ್ಲಿ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಸೇರಿದ ಅವೇಶ್ ಖಾನ್ ಡಿಸಿ ತಂಡದ ಅಗ್ರ ಯುವ ಬೌಲರ್ ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

2021ರ ಐಪಿಎಲ್‌ನಲ್ಲಿ ಅವೇಶ್ ಖಾನ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ 14 ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಪಡೆದರು ಮತ್ತು ಡೆಲ್ಲಿ ಸತತ ಮೂರನೇ ಬಾರಿಗೆ ಪ್ಲೇಆಫ್ ತಲುಪಲು ಪ್ರಮುಖ ಕಾರಣಕರ್ತರಾದರು. ಹರ್ಷಲ್ ಪಟೇಲ್ ನಂತರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವೇಶ್ ಎರಡನೇ ಸ್ಥಾನದಲ್ಲಿದ್ದಾರೆ. ಯುವ ವೇಗಿ ಅವೇಶ್ ಪರ್ಪಲ್ ಕ್ಯಾಪ್ ಗಾಗಿ ಅಗ್ರ ಸ್ಪರ್ಧಿಗಳ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದರು. ಆದ್ರೆ ರೀಟೈನ್‌ನಲ್ಲಿ ಅವೇಶ್ ಖಾನ್ ಉಳಿಸಿಕೊಳ್ಳಲು ಡೆಲ್ಲಿ ವಿಫಲಗೊಂಡಿತು.

ಪ್ರಸಕ್ತ ಸೀಸನ್‌ನಲ್ಲಿ ಅವೇಶ್‌ ಖಾನ್‌ಗೆ ಲಕ್ನೋ ಸೂಪರ್ ಜೈಂಟ್ಸ್ ಮೊದಲ ದಿನದ ಐಪಿಎಲ್ ಹರಾಜಿನಲ್ಲಿ 10 ಕೋಟಿ ರೂ.ಗಳಿಗೆ ಖರೀದಿಸಿತು. ಈಗಾಗಲೇ ಎಲ್ಎಸ್‌ಜಿ ಪರ 3 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿರುವ ಈತ, ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಇತ್ತೀಚಿನ ಪಂದ್ಯದಲ್ಲಿ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

Chahal ಅವರಿಗೆ Mumbai Indians ತಂಡದ ಆ ಆಟಗಾರ ಹೀಗೇಕೆ ಮಾಡಿದ್ರು!! | Oneindia Kannada
ರಾಹುಲ್ ತೆವಾಟಿಯಾ:

ರಾಹುಲ್ ತೆವಾಟಿಯಾ:

ರಾಜಸ್ಥಾನ ರಾಯಲ್ಸ್ ತಂಡವು 2013, 2015 ಮತ್ತು 2018 ರ ಪ್ಲೇ ಆಫ್ ಪಂದ್ಯಗಳನ್ನು ಹೊರತುಪಡಿಸಿ ನಿರೀಕ್ಷಿತ ಮಟ್ಟದ ಉತ್ತಮ ಪ್ರದರ್ಶನ ನೀಡಿಲ್ಲ. ಐಪಿಎಲ್ 2022 ರ ಹರಾಜಿನಲ್ಲಿ, ಟೀಮ್ ಮ್ಯಾನೇಜ್‌ಮೆಂಟ್ ಉತ್ತಮ ಅನುಭವಿ ಮತ್ತು ಯುವ ಆಟಗಾರರನ್ನು ಖರೀದಿಸಿತು. ಆದರೆ, ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2022 ರಲ್ಲಿ ಅವರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವರಿಗೆ ಈವರೆಗೂ ಅವಕಾಶವೇ ಲಭ್ಯವಾಗಿಲ್ಲ.

2020 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರನ್ನು ಐಪಿಎಲ್‌ನಲ್ಲಿ ಖರೀದಿಸಿತು. ಆ ಸೀಸನ್ ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ 42.50 ರ ಸರಾಸರಿಯಲ್ಲಿ 242 ರನ್ ಗಳಿಸಿದರು. ಪಂದ್ಯವೊಂದರಲ್ಲಿ ಶೆಲ್ಡನ್ ಕಾಟ್ರೆಲ್ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರೋಚಕ ಗೆಲುವು ಸಾಧಿಸಿವಂತೆ ಮಾಡಿದ್ದರು.

ಕಳೆದ ಆವೃತ್ತಿಯಲ್ಲಿ ತೆವಾಟಿಯಾ 14 ಇನ್ನಿಂಗ್ಸ್‌ಗಳಲ್ಲಿ 155 ರನ್ ಗಳಿಸಿ ಎಂಟು ವಿಕೆಟ್‌ ಗಳನ್ನು ಪಡೆಯುವ ಮೂಲಕ ಕೌಶಲ್ಯತೆಯನ್ನು ಪ್ರದರ್ಶಿಸಿದರು. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅನುಭವಿ ಫಿನಿಷರ್‌ಗಳ ಕೊರತೆ ಕಾಡುತ್ತಿದ್ದು, ರಿಯಾನ್ ಪರಾಗ್ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ ಆರನೇ ಮತ್ತು ಏಳನೇ ಕ್ರಮಾಂಕದಲ್ಲಿ ಆಟವಾಡುತ್ತಿರುವುದರಿಂದ ಫಿನಿಶಿಂಗ್ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಗುಜರಾತ್ ಟೈಟನ್ಸ್ ತಂಡ ಸೇರಿರುವ ತೆವಾಟಿಯಾ ಅವರನ್ನ ರಾಜಸ್ತಾನ್ ಮಿಸ್ ಮಾಡಿಕೊಳ್ಳುತ್ತಿದೆ.

Story first published: Friday, April 8, 2022, 10:05 [IST]
Other articles published on Apr 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+