Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಸೀಸನ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವ ಪ್ಲೇಯರ್ಸ್

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿಯು ಇದೇ ತಿಂಗಳು ಮಾರ್ಚ್‌ 26ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮಾಜಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಬಾರಿ ಐಪಿಎಲ್ ವಿಶೇಷ ಅಂದ್ರೆ ಎರಡು ಹೊಸ ತಂಡಗಳ ಸೇರ್ಪಡೆ. ಲಕ್ನೋ ಸೂಪರ್ ಜೈಂಟ್ ಮತ್ತು ಗುಜರಾತ್ ಟೈಟನ್ಸ್‌ ಐಪಿಎಲ್ 15ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿವೆ. ಈಗಾಗಲೇ ನಿಮಗೆಲ್ಲಾ ತಿಳಿದಿರುವ ಹಾಗೆ ಲಕ್ನೋ ತಂಡವನ್ನ ಕೆ.ಎಲ್ ರಾಹುಲ್ ಮುನ್ನಡೆಸಿದ್ರೆ, ಗುಜರಾತ್ ಟೈಟನ್ಸ್ ತಂಡದ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಹೆಗಲಿಗೇರಿದೆ.

ಐಪಿಎಲ್ 15ನೇ ಸೀಸನ್ ಸಮೀಪದಲ್ಲೇ ಕೆಲವು ಆಟಗಾರರು ಇಂಜ್ಯುರಿ ಮತ್ತು ರಾಷ್ಟ್ರೀಯ ತಂಡದ ಪರ ಆಡುತ್ತಿರುವುದರಿಂದ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದರಲ್ಲಿ ಅನೇಕರು ಆಸ್ಟ್ರೇಲಿಯಾ ಆಟಗಾರರಾಗಿದ್ದು, ಪಾಕಿಸ್ತಾನ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾಗಿಯಾಗಲಿರುವ ಆಟಗಾರರೇ ಆಗಿದ್ದಾರೆ.

ಉದಾಹರಣೆಗೆ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್‌, ಓಡಿಐ ಹಾಗೂ ಟಿ20 ನಾಯಕ ಆ್ಯರೋನ್ ಫಿಂಚ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹೇಜಲ್‌ವುಡ್, ಮಾರ್ಕಸ್ ಸ್ಟೋಯ್ನಿಸ್ ಐಪಿಎಲ್ ಹದಿನೈದನೇ ಸೀಸನ್‌ನ ಮೊದಲ ವಾರಕ್ಕೆ ಅಲಭ್ಯರಾಗಿದ್ದಾರೆ.

ಆ್ಯರೋನ್ ಫಿಂಚ್ ಮತ್ತು ಪ್ಯಾಟ್ ಕಮಿನ್ಸ್‌ ಕೆಕೆಆರ್ ತಂಡದ ಆಟಗಾರರಾಗಿದ್ದಾರೆ. ಮ್ಯಾಕ್ಸ್‌ವೆಲ್ ಮತ್ತು ಹೇಜಲ್‌ವುಡ್‌ರನ್ನ ಆರ್‌ಸಿಬಿ ಖರೀದಿಸಿದೆ. ಇನ್ನು ಮಾರ್ಕಸ್ ಸ್ಟೋಯ್ನಿಸ್ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಸದಸ್ಯ.

ಆಸ್ಟ್ರೇಲಿಯಾ ಆಟಗಾರರಷ್ಟೇ ಅಲ್ಲದೆ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ಇಂಗ್ಲೆಂಡ್ ಮತ್ತು ವೆಸ್ಟ್‌ ಇಂಡೀಸ್ ತಂಡದ ಕೆಲವು ಆಟಗಾರರು ಸಹ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೀಗೆ ಮೊದಲ ವಾರದಲ್ಲಿ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಿರುವ ಆಟಗಾರರು, ಫ್ರಾಂಚೈಸಿ ಹೆಸರು ಈ ಕೆಳಗಿದೆ.

ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ) : ಕೊಲ್ಕತ್ತಾ ನೈಟ್ ರೈಡರ್ಸ್
ಆ್ಯರೋನ್ ಫಿಂಚ್(ಆಸ್ಟ್ರೇಲಿಯಾ): ಕೊಲ್ಕತ್ತಾ ನೈಟ್ ರೈಡರ್ಸ್
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): ಆರ್‌ಸಿಬಿ
ಜೋಶ್ ಹೇಜಲ್‌ವುಡ್ (ಆಸ್ಟ್ರೇಲಿಯಾ): ಆರ್‌ಸಿಬಿ
ಮಾರ್ಕಸ್ ಸ್ಟೋಯ್ನಿಸ್ (ಆಸ್ಟ್ರೇಲಿಯಾ): ಲಕ್ನೋ ಸೂಪರ್‌ ಜೈಂಟ್ಸ್‌
ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್): ಲಕ್ನೋ ಸೂಪರ್‌ ಜೈಂಟ್ಸ್‌
ಅಲ್ಝಾರಿ ಜೋಸೆಫ್ (ವೆಸ್ಟ್‌ ಇಂಡೀಸ್): ಗುಜರಾತ್ ಟೈಟನ್ಸ್
ಜೇಸನ್ ರಾಯ್ (ಇಂಗ್ಲೆಂಡ್): ಗುಜರಾತ್ ಟೈಟನ್ಸ್‌
ಜೈರ್ ಬೈಸ್ಟ್ರೋವ್ (ಇಂಗ್ಲೆಂಡ್): ಪಂಜಾಬ್ ಕಿಂಗ್ಸ್‌
ಮಾರ್ಕ್ ವುಡ್‌ (ಇಂಗ್ಲೆಂಡ್): ಲಕ್ನೋ ಸೂಪರ್ ಜೈಂಟ್ಸ್‌

Story first published: Friday, March 18, 2022, 20:54 [IST]
Other articles published on Mar 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+