IPL 2022: ಟೂರ್ನಿಯಲ್ಲಿ ಎಲ್ಲಾ ತಂಡಗಳು ಬಾರಿಸಿದ ಸಿಕ್ಸರ್ ಪಟ್ಟಿ ಔಟ್; ಡೇಂಜರಸ್ ತಂಡದ್ದೇ ಕಡಿಮೆ ಸಿಕ್ಸರ್!

ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಒಟ್ಟು 70 ಪಂದ್ಯಗಳು ಇದೇ ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿವೆ.
ಇನ್ನು ಲೀಗ್ ಹಂತ ಮುಕ್ತಾಯವಾಗುವುದಕ್ಕೂ ಒಂದು ದಿನದ ಮುನ್ನವೇ ಈ ಬಾರಿಯ ಆವೃತ್ತಿಯಲ್ಲಿ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡ ತಂಡ ಯಾವುವು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಈ ಬಾರಿ ಹೊಸದಾಗಿ ಸೇರ್ಪಡೆಗೊಂಡ ಗುಜರಾತ್ ಟೈಟನ್ಸ್, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್, ಸಂಜು ಸಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾದವು.
ಈ ಬಾರಿ ಅನೇಕ ಪಂದ್ಯಗಳಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಇನ್ನೂರಕ್ಕೂ ಹೆಚ್ಚು ರನ್ ದಾಖಲಾಗಿದ್ದು, ರನ್ ಹೊಳೆಯೇ ಹರಿದಿದೆ. ಹೀಗಾಗಿ ಈ ಬಾರಿ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಸುರಿಮಳೆ ಸುರಿಸಿ ಅಬ್ಬರಿಸಿದ್ದು, ಸಿಕ್ಸರ್ ಮಳೆಯೇ ಸುರಿದಿದೆ. ಹೀಗಾಗಿಯೇ ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲಿಯೇ 1000 ಸಿಕ್ಸರ್ ದಾಖಲಾಗಿದ್ದು, ಇದೊಂದು ನೂತನ ದಾಖಲೆಯಾಗಿದೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಯಾವುದೇ ಆವೃತ್ತಿಯಲ್ಲಿಯೂ 1000 ಸಿಕ್ಸರ್ ದಾಖಲಾಗಿರಲಿಲ್ಲ. ಆದರೆ, ಈ ಬಾರಿ 1000 ಸಿಕ್ಸರ್ ದಾಖಲಾಗಿರುವುದು ನೂತನ ದಾಖಲೆಯಾಗಿದೆ. ಇಷ್ಟು ದೊಡ್ಡ ಮಟ್ಟದ ಸಿಕ್ಸರ್‌ಗಳ ಪೈಕಿ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ..

ಅತಿಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು?
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ತಂಡ ಎಂಬ ಸಾಧನೆಯನ್ನು ಮಾಡಿರುವುದು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್. ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 9 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 18 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿ ಕ್ವಾಲಿಫಯರ್ ಸುತ್ತಿಗೆ ಅರ್ಹತೆಯನ್ನು ಪಡೆದಿದೆ. ಹೀಗೆ ಲೀಗ್ ಹಂತ ಮುಕ್ತಾಯವಾಗುವ ಸಮಯಕ್ಕೆ ಉತ್ತಮ ಹಂತದಲ್ಲಿರುವ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ 116 ಸಿಕ್ಸರ್ ಬಾರಿಸಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ತಂಡ ಎನಿಸಿಕೊಂಡಿದೆ.

ಅತಿ ಕಡಿಮೆ ಸಿಕ್ಸರ್ ಬಾರಿಸಿದ ತಂಡ ಯಾವುದು?
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಸುತ್ತು ಮುಕ್ತಾಯವಾಗುವ ಸಮಯಕ್ಕೆ ಅತಿಹೆಚ್ಚು ಸಿಕ್ಸರ್ ಬಾರಿಸಿದ ತಂಡ ಎಂಬ ಖ್ಯಾತಿಗೆ ರಾಜಸ್ಥಾನ್ ರಾಯಲ್ಸ್ ಪಾತ್ರವಾಗಿದ್ದರೆ, ಅತಿ ಕಡಿಮೆ ಸಿಕ್ಸರ್ ಬಾರಿಸಿದ ತಂಡವಾಗಿ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಈ ಮೂಲಕ ಕ್ವಾಲಿಫಯರ್ ಸುತ್ತಿಗೆ ಪ್ರವೇಶ ಪಡೆದುಕೊಂಡಿರುವ ಎರಡು ತಂಡಗಳ ಪೈಕಿ ಒಂದು ತಂಡ ಅತಿಹೆಚ್ಚು ಸಿಕ್ಸರ್ ಬಾರಿಸಿದ್ದರೆ, ಮತ್ತೊಂದು ತಂಡ ಅತಿ ಕಡಿಮೆ ಸಿಕ್ಸರ್ ಬಾರಿಸಿದೆ. ಗುಜರಾತ್ ಟೈಟನ್ಸ್ ಬಾರಿಸಿರುವ ಒಟ್ಟು 69. ಹೀಗೆ ಟೂರ್ನಿಯಲ್ಲಿ ಡೇಂಜರಸ್ ತಂಡ ಎನಿಸಿಕೊಂಡಿರುವ ಗುಜರಾತ್ ಟೈಟನ್ಸ್ ಅತಿ ಕಡಿಮೆ ಸಿಕ್ಸರ್ ಬಾರಿಸಿರುವುದು ಆಶ್ಚರ್ಯಕರವಾಗಿದೆ.

ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ತಂಡಗಳು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
116 - ರಾಜಸ್ಥಾನ್ ರಾಯಲ್ಸ್
113 - ಕೆಕೆಆರ್
110 - ಪಂಜಾಬ್ ಕಿಂಗ್ಸ್
106 - ಡೆಲ್ಲಿ ಕ್ಯಾಪಿಟಲ್ಸ್
103 - ಚೆನ್ನೈ ಸೂಪರ್ ಕಿಂಗ್ಸ್
101 - ಲಕ್ನೋ ಸೂಪರ್ ಜೈಂಟ್ಸ್
100 - ಮುಂಬೈ ಇಂಡಿಯನ್ಸ್
97 - ಸನ್ ರೈಸರ್ಸ್ ಹೈದರಾಬಾದ್
86 - ರಾಯಲ್ ಚಾಲೆಂಜರ್ಸ್ ಬೆಂಗಳೂರು
69 - ಗುಜರಾತ್ ಟೈಟನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications