For Quick Alerts
ALLOW NOTIFICATIONS  
For Daily Alerts
 

ಧೋನಿ vs ಎಬಿಡಿ: ಐಪಿಎಲ್ ಅಂತಿಮ 5 ಓವರ್‌ಗಳಲ್ಲಿ ಹೆಚ್ಚು ರನ್ ಚಚ್ಚಿರುವ ಡೇಂಜರಸ್ ಆಟಗಾರ ಯಾರು?

IPL 2022: Top 5 batsmen with most runs in last 5 overs in IPL history

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಟೂರ್ನಿ ಇದೇ ತಿಂಗಳ 26ರಂದು ಆರಂಭವಾಗಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು ಟೂರ್ನಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿ ಸಮೀಪಿಸುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಹಲವಾರು ದಾಖಲೆ ಹಾಗೂ ಮೈಲಿಗಲ್ಲುಗಳ ಕುರಿತು ಚರ್ಚೆಗಳು ಆರಂಭವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಹಲವಾರು ಆಟಗಾರರು ತಮ್ಮ ಹೆಸರಿನಲ್ಲಿ ಕೆಲ ವಿಶೇಷ ದಾಖಲೆಗಳನ್ನು ಹೊಂದಿದ್ದಾರೆ. ಅಂತಹ ದಾಖಲೆಗಳಲ್ಲಿ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಎಂಬ ದಾಖಲೆ ಕೂಡ ಒಂದು. ಹೌದು, ಹೊಡಿಬಡಿ ಆಟ ಎಂದೂ ಹೆಸರನ್ನು ಹೊಂದಿರುವ ಐಪಿಎಲ್‌ನಲ್ಲಿ ಅಂತಿಮ 5 ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಹೊಳೆಯನ್ನು ಹರಿಸಿ ತಮ್ಮ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸುವ ಕಾರಣ ಕೊನೆಯಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಿರುವ ಹಲವಾರು ಆಟಗಾರರು ಇದ್ದಾರೆ. ಅದರಲ್ಲಿಯೂ ಡೆತ್ ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು ಎಂಬ ವಿಷಯ ಬಂದಾಗ ಹೆಚ್ಚಾಗಿ ಕೇಳಿಬರುವ ಎರಡು ಹೆಸರುಗಳೆಂದರೆ ಅದು ಎಂಎಸ್ ಧೋನಿ ಹಾಗೂ ಎಬಿ ಡಿ ವಿಲಿಯರ್ಸ್. ಹೀಗೆ ಈ ಇಬ್ಬರು ಆಟಗಾರರ ಪೈಕಿ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು ಎಂಬ ಮಾಹಿತಿ ಹಾಗೂ ಐಪಿಎಲ್ ಇತಿಹಾಸದಲ್ಲಿ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

5. ದಿನೇಶ್ ಕಾರ್ತಿಕ್

5. ದಿನೇಶ್ ಕಾರ್ತಿಕ್

ಐಪಿಎಲ್‌ನಲ್ಲಿ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಚಚ್ಚಿರುವ ಆಟಗಾರರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಐದನೇ ಸ್ಥಾನದಲ್ಲಿದ್ದಾರೆ. 95 ಇನ್ನಿಂಗ್ಸ್‌ಗಳಲ್ಲಿ ಡೆತ್ ಓವರ್‌ನಲ್ಲಿ ಬ್ಯಾಟ್ ಬೀಸಿರುವ ದಿನೇಶ್ ಕಾರ್ತಿಕ್ 1297 ರನ್ ಬಾರಿಸಿದ್ದಾರೆ, ಅಂತಿಮ ಐದು ಓವರ್‌ಗಳಲ್ಲಿ ಇದುವರೆಗೂ ಒಟ್ಟು 787 ಎಸೆತಗಳನ್ನು ಎದುರಿಸಿರುವ ದಿನೇಶ್ ಕಾರ್ತಿಕ್ 122 ಬೌಂಡರಿ ಹಾಗೂ 56 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಹೀಗೆ ಡೆತ್ ಓವರ್‌ನಲ್ಲಿ 164.80 ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿರುವ ಕಾರ್ತಿಕ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ.

4. ರೋಹಿತ್ ಶರ್ಮಾ

4. ರೋಹಿತ್ ಶರ್ಮಾ

86 ಇನ್ನಿಂಗ್ಸ್‌ಗಳಲ್ಲಿ ಅಂತಿಮ 5 ಓವರ್‌ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಶರ್ಮಾ 1481 ರನ್ ಬಾರಿಸಿದ್ದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂತಿಮ ಐದು ಓವರ್‌ಗಳಲ್ಲಿ ಕಣಕ್ಕಿಳಿದಾಗ 123 ಬೌಂಡರಿ ಹಾಗೂ 90 ಸಿಕ್ಸರ್ ಬಾರಿಸಿರುವ ರೋಹಿತ್ ಶರ್ಮಾ ಈ ಓವರ್‌ಗಳಲ್ಲಿ 181.27 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

3. ಎಬಿ ಡಿ ವಿಲಿಯರ್ಸ್

3. ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾದ ದಾಂಡಿಗ ಎಬಿ ಡಿ ವಿಲಿಯರ್ಸ್ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡೆತ್ ಓವರ್‌ಗಳಲ್ಲಿ 81 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಎಬಿ ಡಿ ವಿಲಿಯರ್ಸ್ 1868 ರನ್ ಬಾರಿಸಿದ್ದಾರೆ. ಇನ್ನು ಎಬಿ ಡಿ ವಿಲಿಯರ್ಸ್ ಅಂತಿಮ ಐದು ಓವರ್‌ಗಳಲ್ಲಿ ಕಣಕ್ಕಿಳಿದಾಗ 140 ಬೌಂಡರಿ ಹಾಗೂ 135 ಸಿಕ್ಸರ್ ಬಾರಿಸಿದ್ದು, ಬರೋಬ್ಬರಿ 222.91 ಸ್ಟ್ರೈಕ್ ರೇಟ್‌ನಲ್ಲಿ ಹೊಂದಿದ್ದಾರೆ.

2. ಕೀರನ್ ಪೊಲಾರ್ಡ್

2. ಕೀರನ್ ಪೊಲಾರ್ಡ್

ಟಿ ಟ್ವೆಂಟಿ ಸ್ಪೆಷಲಿಸ್ಟ್ ಆಟಗಾರರು ಹೆಚ್ಚಾಗಿರುವ ವೆಸ್ಟ್ ಇಂಡೀಸ್‌ ತಂಡದ ಆಟಗಾರನಾದ ಕೀರನ್ ಪೊಲಾರ್ಡ್ ಐಪಿಎಲ್ ಇತಿಹಾಸದಲ್ಲಿ ಕೊನೆಯ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೀರನ್ ಪೊಲಾರ್ಡ್ ಇದುವರೆಗೂ ಒಟ್ಟು 119 ಇನ್ನಿಂಗ್ಸ್‌ಗಳಲ್ಲಿ ಅಂತಿಮ 5 ಓವರ್‌ಗಳಲ್ಲಿ ಕಣಕ್ಕಿಳಿದಿದ್ದು 1932 ರನ್ ಚಚ್ಚಿದ್ದಾರೆ. ಇನ್ನು ಪೊಲಾರ್ಡ್ ಇದುವರೆಗೂ ಡೆತ್ ಓವರ್‌ಗಳಲ್ಲಿ 125 ಬೌಂಡರಿ ಹಾಗೂ 137 ಸಿಕ್ಸರ್ ಸಿಡಿಸಿದ್ದು 173.42 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Virat Kohli ತಮ್ಮ ಹೊಸ ನಾಯಕನ ಬಗ್ಗೆ ಹೇಳಿದ್ದೇನು ? | Oneindia Kannada
1. ಎಂಎಸ್ ಧೋನಿ

1. ಎಂಎಸ್ ಧೋನಿ

ಫಿನಿಷರ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಅಂತಿಮ 5 ಓವರ್‌ಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅಂತಿಮ ಐದು ಓವರ್‌ಗಳಲ್ಲಿ ಇದುವರೆಗೂ ಒಟ್ಟು 150 ಇನ್ನಿಂಗ್ಸ್‌ನಲ್ಲಿ ಆಡಿರುವ ಎಂಎಸ್ ಧೋನಿ 2853 ರನ್ ಬಾರಿಸಿದ್ದು, 207 ಬೌಂಡರಿ ಹಾಗೂ 164 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಎಂಎಸ್ ಧೋನಿ ಅಂತಿಮ ಐದು ಓವರ್‌ನಲ್ಲಿ 174.81 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅಂತಿಮ ಐದು ಓವರ್‌ನಲ್ಲಿ ಎಂ ಎಸ್ ಧೋನಿ ಅತಿಹೆಚ್ಚು ರನ್ ಬಾರಿಸಿ ಡೇಂಜರಸ್ ಆಟಗಾರ ಎನಿಸಿಕೊಂಡಿದ್ದರೆ, ಇತ್ತ ಎಬಿ ಡಿ ವಿಲಿಯರ್ಸ್ ಅಂತಿಮ ಐದು ಓವರ್‌ನಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿ ಡೇಂಜರಸ್ ಎನಿಸಿಕೊಂಡಿದ್ದಾರೆ.

Story first published: Tuesday, March 22, 2022, 18:06 [IST]
Other articles published on Mar 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+