ಐಪಿಎಲ್ ಇತಿಹಾಸದಲ್ಲಿ ಕೊನೆಯ 6 ಎಸೆತಗಳಿಗೆ 23 ರನ್ ಚೇಸ್ ಮಾಡಿ ಗೆದ್ದಿರುವ ಏಕೈಕ ತಂಡವಿದು!

ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಎಂದರೆ ಈಗಿನ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚುಮೆಚ್ಚು. ಕಡಿಮೆ ಓವರ್ ಇರುವ ಕಾರಣ ಪಂದ್ಯಗಳು ವೇಗವಾಗಿ ಮುಗಿಯುತ್ತವೆ ಎನ್ನುವ ಬೃಹತ್ ಅನುಕೂಲವನ್ನು ಹೊಂದಿರುವಂತಹ ಈ ಕ್ರಿಕೆಟ್ ಮಾದರಿಯ ಪಂದ್ಯಗಳಲ್ಲಿ ರನ್ ಹೊಳೆ ಇತರೆ ಮಾದರಿಗಳಿಗೆ ಹೋಲಿಸಿದರೆ ಹೆಚ್ಚಾಗಿ ಹರಿದುಬರಲಿದೆ. ಅದರಲ್ಲಿಯೂ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುವ ತಂಡ ಬೃಹತ್ ರನ್ ಮೊತ್ತಗಳನ್ನು ಹಲವು ಬಾರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದು ಕ್ರಿಕೆಟ್ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿವೆ.
ಇನ್ನು ಇದೇ ಕ್ರಿಕೆಟ್ ಮಾದರಿಯಲ್ಲಿ ನಡೆಯುವ ಜಗತ್ತಿನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ ತುಸು ಹೆಚ್ಚೇ ಮನರಂಜನೆಯನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹಲವಾರು ರೋಚಕ ಹಣಾಹಣಿ ನಡೆದಿದ್ದು, ಈ ಲೀಗ್ ತನ್ನ ವೀಕ್ಷಕರನ್ನು ಕೊನೆಯ ಎಸೆತದವರೆಗೂ ಹಿಡಿದಿಟ್ಟುಕೊಂಡಂತ ಉದಾಹರಣೆಗಳಿವೆ. ಕ್ರಿಕೆಟ್ ಪ್ರೇಮಿಗಳು ಉಗುರು ಕಚ್ಚುತ್ತಾ ಪಂದ್ಯಗಳನ್ನು ವೀಕ್ಷಿಸುವಷ್ಟರ ಮಟ್ಟಕ್ಕೆ ಐಪಿಎಲ್ ಪಂದ್ಯಗಳು ನಡೆಯುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ.
ಹೀಗಾಗಿಯೇ ಜಗತ್ತಿನಾದ್ಯಂತ ವೀಕ್ಷಕರನ್ನು ಗಳಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಕೊನೆಯ 6 ಎಸೆತಗಳಲ್ಲಿ ಬೃಹತ್ ಮೊತ್ತಗಳನ್ನು ಚೇಸ್ ಮಾಡಿ ಗೆಲುವು ಸಾಧಿಸಿರುವ ತಂಡಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ.

5. ರಾಯಲ್ ಚಾಲೆಂಜರ್ಸ್ ಬೆಂಗಳೂರು - 21 ರನ್
2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ವಾರಿಯರ್ಸ್ ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪುಣೆ ವಾರಿಯರ್ಸ್ 183 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ಓವರ್‌ನಲ್ಲಿ 21 ರನ್ ಬಾರಿಸಬೇಕಾದ ಅಗತ್ಯವಿತ್ತು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಸೌರಬ್ ತಿವಾರಿ ಸಿಂಗಲ್ ತೆಗೆದುಕೊಂಡರೆ, ನಂತರ ಎಬಿ ಡಿ ವಿಲಿಯರ್ಸ್ 1 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

4. ಮುಂಬೈ ಇಂಡಿಯನ್ಸ್ - 21 ರನ್
2011ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 176 ರನ್‌ಗಳ ಗುರಿಯನ್ನು ನೀಡಿತ್ತು. ಹಾಗೂ ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು 21 ರನ್ ಬಾರಿಸಬೇಕಾಗಿತ್ತು. ಲಕ್ಷ್ಮೀಪತಿ ಬಾಲಾಜಿ ಎಸೆದ ಕೊನೆಯ ಓವರ್‌ನ ಮೊದಲ 4 ಎಸೆತಗಳನ್ನು ಬೌಂಡರಿಗೆ ಅಟ್ಟಿದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಫ್ರಾಂಕ್ಲಿನ್ ಐದನೇ ಎಸೆತಕ್ಕೆ ಸಿಂಗಲ್ ತೆಗೆದುಕೊಂಡರು ಹಾಗೂ ಅಂತಿಮ ಎಸೆತದಲ್ಲಿ ಅಂಬಟಿ ರಾಯುಡು ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

3. ಡೆಕ್ಕನ್ ಚಾರ್ಜರ್ಸ್ - 21 ರನ್
2009ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಡೆಕ್ಕನ್ ಚಾರ್ಜರ್ಸ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ 161 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಡೆಕ್ಕನ್ ಚಾರ್ಜರ್ಸ್ ಅಂತಿಮ ಓವರ್‌ನಲ್ಲಿ ಗೆಲ್ಲಲು 21 ರನ್ ಬಾರಿಸಬೇಕಾದ ಅಗತ್ಯವಿತ್ತು. ಮೊರ್ಟಾಜ ಎಸೆದ ಅಂತಿಮ ಓವರ್‌ನ ಮೊದಲ ಎಸೆತವನ್ನು ಡೆಕ್ಕನ್ ಚಾರ್ಜರ್ಸ್ ಆಟಗಾರ ರೋಹಿತ್ ಶರ್ಮಾ ಬೌಂಡರಿಗೆ ಅಟ್ಟಿದರು ಹಾಗೂ ಆ ಎಸೆತ ನೋಬಾಲ್ ಆಗಿತ್ತು. ನಂತರದ 2 ಎಸೆತಗಳಿಗೆ ಸಿಂಗಲ್ ಬಂದ ನಂತರ ರೋಹಿತ್ ಶರ್ಮಾ ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ನಂತರ ಮೊರ್ಟಾಜಾ ಎಸೆದ ಎಸೆತ ವೈಡ್ ಆಯಿತು ಹಾಗೂ ನಾಲ್ಕನೇ ಎಸೆತಕ್ಕೆ ರೋಹಿತ್ ಶರ್ಮಾ 2 ರನ್ ಸಂಪಾದಿಸಿದರು. ಹೀಗೆ ಅಂತಿಮ 2 ಎಸೆತಗಳಿಗೆ ಗೆಲ್ಲಲು 5 ರನ್ ಅಗತ್ಯವಿದ್ದಾಗ ರೋಹಿತ್ ಶರ್ಮಾ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿ ಜಯ ತಂದಿಟ್ಟರು.

2. ಗುಜರಾತ್ ಟೈಟನ್ಸ್ - 22 ರನ್
ಟೂರ್ನಿಯಲ್ಲಿ ಹಲವು ವರ್ಷಗಳಿಂದ 21 ರನ್‌ಗಿಂತ ಹೆಚ್ಚಿನ ಗುರಿಯನ್ನು ಯಾವ ತಂಡವೂ ಚೇಸ್ ಮಾಡಿರಲಿಲ್ಲ. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿರುವ ನೂತನ ತಂಡ ಗುಜರಾತ್ ಟೈಟನ್ಸ್ ಈ ಮೈಲಿಗಲ್ಲನ್ನು ಮುಟ್ಟಿದೆ. ಇದೇ ವರ್ಷ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣೆಸಾಟ ನಡೆಸಿದ ಗುಜರಾತ್ ಟೈಟನ್ಸ್ 196 ರನ್‌ಗಳ ಗುರಿಯನ್ನು ಬೆನ್ನಟ್ಟಿದೆ. ಪಂದ್ಯದ ಅಂತಿಮ ಓವರ್‌ನಲ್ಲಿ 22 ರನ್ ಬಾರಿಸಬೇಕಾದ ಅಗತ್ಯವಿದ್ದಾಗ ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಕಣದಲ್ಲಿದ್ದರು. ಮೊದಲನೇ ಎಸೆತ ಎದುರಿಸಿದ ರಾಹುಲ್ ತೆವಾಟಿಯಾ ಸಿಕ್ಸರ್ ಬಾರಿಸಿದರು ಹಾಗೂ ಎರಡನೇ ಎಸೆತಕ್ಕೆ ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಎಸೆತಕ್ಕೆ ಸಿಕ್ಸರ್ ಚಚ್ಚಿದ ರಶೀದ್ ಖಾನ್ ನಾಲ್ಕನೇ ಎಸೆತಕ್ಕೆ ಯಾವುದೇ ರನ್ ಗಳಿಸಲಿಲ್ಲ ಮತ್ತು ಐದನೇ ಎಸೆತಕ್ಕೆ ಮತ್ತೊಂದು ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

1. ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ - 23 ರನ್
2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 173 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಅಂತಿಮ ಓವರ್‌ನಲ್ಲಿ 23 ರನ್ ಬಾರಿಸಬೇಕಾದ ಅಗತ್ಯವಿತ್ತು ಹಾಗೂ ಈ ಓವರ್ ಮಾಡಲು ಅಕ್ಷರ್ ಪಟೇಲ್ ಕಣಕ್ಕಿಳಿದರು ಮತ್ತು ಪುಣೆ ಪರ ಎಂಎಸ್ ಧೋನಿ ಕಣದಲ್ಲಿದ್ದರು. ಅಕ್ಷರ್ ಪಟೇಲ್ ಮೊದಲು ಡಾಟ್ ಬಾಲ್ ಮತ್ತು ವೈಡ್ ಎಸೆಯುವ ಮೂಲಕ ಓವರ್ ಆರಂಭಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications