ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಯುವ ಅಭಿಮಾನಿಗೆ ತನ್ನ ಜೆರ್ಸಿಯನ್ನೇ ತೆಗೆದು ಕೊಟ್ಟ ಟ್ರೆಂಟ್ ಬೋಲ್ಟ್‌

ಐಪಿಎಲ್ ಕ್ವಾಲಿಫೈಯರ್ 2 ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಕಾದು ಕುಳಿತಿದ್ದ ಅಭಿಮಾನಿ ಬಾಲಕನಿಗೆ ರಾಜಸ್ತಾನ್ ರಾಯಲ್ಸ್ ಬೌಲರ್ ಟ್ರೆಂಟ್ ಬೋಲ್ಟ್‌ ಸರ್ಪ್ರೈಸ್ ನೀಡಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ತಂಡದ ಶಕ್ತಿಯಾಗಿದ್ದ ಅಶ್ವಿನ್ ಮತ್ತು ಚಹಾಲ್ ಗೆ ಮ್ಯಾಕ್ಸ್ ವೆಲ್ ಕಾಡಿದರು. ಇದರ ಬೆನ್ನಲ್ಲೇ ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡಲು ಮುಂದಾದರು. ವೇಗದ ಚೆಂಡಾಗಿ ಪರಿವರ್ತನೆಗೊಂಡ ಸ್ಲೋ ಬಾಲ್ ಅನ್ನು ಎಸೆದಿದ್ದರಿಂದ ಮ್ಯಾಕ್ಸ್ ವೆಲ್ ಸ್ವಲ್ಪ ಎಡವಿದರು. ಪರಿಣಾಮವಾಗಿ ಮ್ಯಾಕ್ಸ್‌ವೆಲ್ ಫೈನ್ ಲೆಗ್‌ನ ದಿಕ್ಕಿನಲ್ಲಿ ಚೆಂಡು ಸಿಡಿಸಿದರು, ಆದರೆ ಮೆಕೇನ್‌ನ ಪ್ರಚಂಡ ಕ್ಯಾಚ್‌ನಿಂದ ಮ್ಯಾಕ್ಸಿ ಔಟಾದರು.

IPL 2022: ಕೊಹ್ಲಿಯ '973 ರನ್' ಬೃಹತ್ ದಾಖಲೆ ಮುರಿಯಲು ಬಟ್ಲರ್ ಫೈನಲ್‌ನಲ್ಲಿ ಎಷ್ಟು ರನ್ ಬಾರಿಸಬೇಕು?IPL 2022: ಕೊಹ್ಲಿಯ '973 ರನ್' ಬೃಹತ್ ದಾಖಲೆ ಮುರಿಯಲು ಬಟ್ಲರ್ ಫೈನಲ್‌ನಲ್ಲಿ ಎಷ್ಟು ರನ್ ಬಾರಿಸಬೇಕು?

ಹೀಗಾಗಿ ಆ ಪಂದ್ಯದಲ್ಲಿ ಬೌಲಿಂಗ್‌ ಮಾಡಿದ್ದ ಬೌಲ್ಟ್‌ 4 ಓವರ್ ಗಳಲ್ಲಿ ಕೇವಲ 28 ರನ್ ಬಿಟ್ಟುಕೊಟ್ಟು ತಂಡದ ಗೆಲುವಿಗೆ ಕಾರಣವಾಗಿದ್ದರು. ಈ ಹಂತದಲ್ಲಿ ಆಟ ಮುಗಿದ್ರೂ ಕೂಡ ಬಹಳ ಹೊತ್ತಿನಲ್ಲಿ ಗ್ಯಾಲರಿಯಲ್ಲೇ ಒಬ್ಬ ಹುಡುಗ ಮಾತ್ರ ರಾಜಸ್ತಾನ್ ರಾಯಲ್ಸ್‌ ಆಟಗಾರರನ್ನು ವೀಕ್ಷಿಸಲು ನಿಂತಿದ್ದ.

ಇದನ್ನು ಗಮನಿಸಿದ ಟ್ರೆಂಟ್ ಬೌಲ್ಟ್ ಬಾಲಕನನ್ನು ಕರೆದು ಆತ ತೊಟ್ಟಿದ್ದ ರಾಜಸ್ತಾನ್ ರಾಯಲ್ಸ್‌ ಜೆರ್ಸಿಯನ್ನೇ ತೆಗೆದು ಕೊಟ್ಟರು. ಅನಿರೀಕ್ಷಿತವಾಗಿ, ಹುಡುಗ ಭಾವೋದ್ವೇಗಕ್ಕೆ ಒಳಗಾಗಿ ತನ್ನ ಟೀ ಶರ್ಟ್ ಅನ್ನು ತೆಗೆದನು. ಇದನ್ನು ನೋಡಿ ನಕ್ಕಿದ ಬೌಲ್ಡ್, ಸರಿ, ನನಗೆ ನಿನ್ನ ಟೀ ಶರ್ಟ್ ಬೇಡ, ನನ್ನ ಟೀ ಶರ್ಟ್‌ ತಗೋ ಎಂದು ಹೇಳಿ ಹೊರಟು ಹೋದರು. ಸದ್ಯ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿ ಹರಿದಾಡಿದೆ.

ಆರಂಭದಲ್ಲೇ ಎಡವಟ್ಟು ಮಾಡಿ ಗುಜರಾತ್ ಗೆ ಗೆಲ್ಲೊ ದಾರಿ ಬಿಟ್ಟುಕೊಟ್ಟ Sanju Samson |#cricket |Oneindia Kannada

ಮುಂಬೈ ತಂಡವು ಮೆಗಾ ಹರಾಜಿನಲ್ಲಿ ಟ್ರೆಂಟ್ ಬೌಲ್ ಅನ್ನು ತೆಗೆದುಕೊಳ್ಳದೆ ಹೊರಬಿಟ್ಟಿತು. ಇದರ ಲಾಭ ಪಡೆದ ರಾಜಸ್ತಾನ್ ರಾಯಲ್ಸ್‌ ಬೌಲ್ಟ್‌ ಅನ್ನು ಹರಾಜಿನಲ್ಲಿ ತೆಗೆದುಕೊಂಡಿತು. ಪ್ರಸಕ್ತ ಋತುವಿನಲ್ಲಿ 15 ಪಂದ್ಯಗಳನ್ನು ಆಡಿರುವ ಬೌಲ್ಡ್ 15 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಪ್ರತಿ ಓವರ್‌ಗೆ 8 ರನ್ ನೀಡಿದ್ದಾರೆ. ಆರ್‌ಸಿಬಿ ಪಂದ್ಯದಲ್ಲೂ ರಾಜಸ್ತಾನ್ ಖಡಕ್ ಬೌಲಿಂಗ್ ಮೂಲಕ ಜಯಭೇರಿ ಬಾರಿಸಿತ್ತು.

Story first published: Saturday, May 28, 2022, 23:30 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X