IPLನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವುದೇ ನನ್ನ ಗುರಿ: ಉಮೇಶ್ ಯಾದವ್

ಟೀಂ ಇಂಡಿಯಾ ಬೌಲರ್ ಉಮೇಶ್ ಯಾದವ್ ಹೇಗಾದರೂ ಮಾಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಬೇಕೆಂದು ಹಾತೊರೆಯುತ್ತಿದ್ದಾರೆ. ಭಾರತದ ವೈಟ್ ಬಾಲ್ ಕ್ರಿಕೆಟ್‌ನ ಮೆಗಾ ಟೂರ್ನಮೆಂಟ್ ಐಸಿಸಿ ಟಿ20 ವಿಶ್ವಕಪ್ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಹೀಗಿರುವಾಗ ಹೇಗಾದ್ರೂ ಮಾಡಿ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಹಂಬಲ ಉಮೇಶ್ ಯಾದವ್‌ಗೆ ಹೆಚ್ಚಾಗಿದೆ.
34 ವರ್ಷದ ಉಮೇಶ್ ಯಾದವ್ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಫೆಬ್ರವರಿ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನಾಡಿದ್ರು. ಅಲ್ಲಿಂದ ಇಲ್ಲಿಯವರೆಗೆ ಕೇವಲ 1 ಟೆಸ್ಟ್ ಪಂದ್ಯವನ್ನಷ್ಟೇ ಆಡಿದ್ದಾರೆ.
ಉಮೇಶ್ ಇದುವರೆಗೆ 7 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದು, ತನ್ನ ಕೆರಿಯರ್‌ನಲ್ಲಿ 9 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಉಮೇಶ್ ಯಾದವ್ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ. ಕೆಕೆಆರ್ ಉಮೇಶ್‌ರನ್ನ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ.
ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ಅವಕಾಶವಿಲ್ಲ: ಉಮೇಶ್ ಯಾದವ್
''ನಾನು ಬಹಳಷ್ಟು ಕೆಂಪು-ಚೆಂಡಿನ ಆಟಗಳನ್ನು ಆಡಿರುವ ಕಾರಣ, ನಾನು ಬಿಳಿ ಚೆಂಡನ್ನು ಆಡಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯಿದೆ. ನಾನು 2020 ರಲ್ಲಿ ಆರ್‌ಸಿಬಿಗಾಗಿ ಎರಡು ಪಂದ್ಯಗಳನ್ನು ಆಡಿದ್ದೇನೆ. ಅದರ ನಂತರ, ನಾನು ದೆಹಲಿ ಕ್ಯಾಪಿಟಲ್ಸ್ ಸೇರಿಕೊಂಡೆ ಮತ್ತು ಒಂದೇ ಒಂದು ಪಂದ್ಯದಲ್ಲಿ ಆಡಲಿಲ್ಲ''
''ಈಗ ಗಮನಾರ್ಹವಾದ ಗ್ಯಾಪ್ ಇದ್ದು, ಬಹಳ ಸಮಯದಿಂದ ನಾನು ವೈಟ್ ಬಾಲ್ ಕ್ರಿಕೆಟ್ ಆಡಿಲ್ಲ. ಐಪಿಎಲ್‌ಗೆ ಮಾತ್ರವಲ್ಲ, ದೇಶಕ್ಕೂ ಕೂಡ ಆಡಿಲ್ಲ. ಹೀಗಾಗಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವುದು ನನ್ನ ಗುರಿಯಾಗಿದೆ'' ಎಂದು ಉಮೇಶ್ ಯಾದವ್ ಹೇಳಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ನಾವು ಯಶಸ್ವಿಯಾಗಲು ಹೆಚ್ಚಿನ ಅವಕಾಶಗಳು ಬೇಕಿದೆ. ಹೀಗಾಗಿ ಅವಕಾಶ ಸಿಗದೆ ತನ್ನ ಪ್ರದರ್ಶನ ಅನ್ನು ಸಾಭೀತುಪಡಿಸುವುದು ಹೇಗೆ? ಎಂಬುದು ಉಮೇರ್ಶ ಯಾದವ್ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications