GT vs SRH: 5 ವಿಕೆಟ್ ಗೊಂಚಲು ಪಡೆದು ಮಿಂಚಿದ ಉಮ್ರಾನ್ ಮಲಿಕ್

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದ್ದಾರೆ. ಪಂದ್ಯದಲ್ಲಿ ತನ್ನ ಪಾಲಿನ ಎಲ್ಲಾ 4 ಓವರ್ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್ 6.2 ಎಕಾನಮಿ ದರದಲ್ಲಿ 25 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ 196 ರನ್‌ಗಳ ಗುರಿಯನ್ನು ನೀಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಅಭಿಷೇಕ್ ಶರ್ಮಾ ಮತ್ತು ಏಡೆನ್ ಮಾರ್ಕ್ರಮ್ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರೆ, 6 ಎಸೆತಗಳನ್ನು ಎದುರಿಸಿದ ಶಶಾಂಕ್ ಸಿಂಗ್ ಅಜೇಯ 25 ರನ್ ಕಲೆ ಹಾಕಿದರು. ಅಂತಿಮ ಓವರ್‌ನಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ ಲಾಕಿ ಫರ್ಗ್ಯುಸನ್ ಎಸೆದ ಅಂತಿಮ 3 ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು.
ಇನ್ನು 196 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಪ್ರಯತ್ನಿಸಿದ ಗುಜರಾತ್ ಟೈಟನ್ಸ್ ಪರ ವೃದ್ದಿಮಾನ್ ಸಹಾ ಮತ್ತು ಶುಬ್ ಮನ್ ಗಿಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಹೀಗೆ ಉತ್ತಮ ಆರಂಭ ಪಡೆದ ಗುಜರಾತ್ ಟೈಟನ್ಸ್ ಪರ ವೃದ್ಧಿಮನ್ ಸಹಾ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇನ್ನು 15.6 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಗುಜರಾತ್ ಟೈಟನ್ಸ್ 140 ರನ್ ಕಲೆ ಹಾಕಿತ್ತು. ಗುಜರಾತ್ ಟೈಟನ್ಸ್ ತಂಡದ ಮೊದಲ ಎಲ್ಲಾ 5 ವಿಕೆಟ್‍ಗಳನ್ನೂ ಉಮ್ರಾನ್ ಮಲಿಕ್ ಅವರೇ ಪಡೆದು ಮಿಂಚಿದರು.
ಮೊದಲಿಗೆ 7.4 ಓವರ್‌ನಲ್ಲಿ ಶುಬ್ ಮನ್ ಗಿಲ್ ವಿಕೆಟ್ ಪಡೆದ ಉಮ್ರಾನ್ ಮಲಿಕ್ ವೃದ್ಧಿಮಾನ್ ಸಹಾ ಮತ್ತು ಶುಬ್ ಮನ್ ಗಿಲ್ ಜತೆಯಾಟವನ್ನು ಮುರಿದರು. ನಂತರ 9.2 ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದ ಉಮ್ರಾನ್ ಮಲಿಕ್ 13.2 ಓವರ್‌ಗೆ ವೃದ್ಧಿಮಾನ್ ಸಹಾ ವಿಕೆಟ್ ಪಡೆದು ಗುಜರಾತ್ ಟೈಟನ್ಸ್ ತಂಡದ ಮೇಲೆ ಒತ್ತಡ ಹೇರಿದರು. ಇನ್ನುಳಿದಂತೆ ತಂಡ 139 ರನ್ ಗಳಿಸಿದ್ದಾಗ ಡೇವಿಡ್ ಮಿಲ್ಲರ್ ವಿಕೆಟ್ ಪಡೆದ ಉಮ್ರಾನ್ ಮಲಿಕ್ ನಂತರದ ಎಸೆತದಲ್ಲಿಯೇ ಅಭಿನವ್ ಮನೋಹರ್ ಅವರನ್ನು ಡಕ್ ಔಟ್ ಮಾಡುವ ಮೂಲಕ ತನ್ನ ಐದನೇ ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications