Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉಮ್ರಾನ್ ಮಲ್ಲಿಕ್ ಭಾರತದ ಪರ ಆಡ್ತಾನೆ ಎಂದು ಭವಿಷ್ಯ ನುಡಿದ ಮೈಕಲ್ ವಾನ್

Umran malik
Umran Malik ಈ ಸರಣಿಯ ಅತ್ಯಂತ ವೇಗದ ಬೌಲರ್ | Oneindia Kannda

ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಯುವ ಬೌಲರ್ ಉಮ್ರಾನ್ ಮಲ್ಲಿಕ್ ಪ್ರದರ್ಶನ ಕಂಡು ಭವಿಷ್ಯ ನುಡಿದಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್‌ ಈತ ಭವಿಷ್ಯದ ಟೀಂ ಇಂಡಿಯಾ ಪ್ಲೇಯರ್ ಎಂದಿದ್ದಾರೆ.

ಐಪಿಎಲ್‌ನಲ್ಲಿ ತನ್ನ ವೇಗದ ಬೌಲಿಂಗ್ ಮೂಲಕ ಶೈನ್ ಆಗ್ತಿರುವ ಉಮ್ರಾನ್ ಮಲ್ಲಿಕ್ 90mphs ಸಾಮರ್ಥ್ಯದಲ್ಲಿ ಬೌಲಿಂಗ್ ಮಾಡುತ್ತಾರೆ. ಯುಎಇನಲ್ಲಿ ಕಳೆದ ಸೀಸನ್‌ನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಉಮರ್ ಮಲ್ಲಿಕ್ ತನ್ನ ವೇಗದ ಮೂಲಕವೇ ಹೆಸರು ಮಾಡಿದ್ರು.

ಜಮ್ಮು ಕಾಶ್ಮೀರ ಪರ ದೇಶೀಯ ಕ್ರಿಕೆಟ್ ಆಡುವ ಉಮ್ರಾನ್ ಮಲ್ಲಿಕ್ ತಮ್ಮ ಪ್ರದರ್ಶನದ ಮೂಲಕ ಐಪಿಎಲ್ ಫ್ರಾಂಚೈಸಿಯನ್ನ ಸೆಳೆಯುವಲ್ಲಿ ಯಶಸ್ವಿಯಾದ್ರು. ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಕಣಕ್ಕಿಳಿಯುವ ಉಮರ್ ಮಲ್ಲಿಕ್ ಕುರಿತಾಗಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪ್ರೆಡಿಕ್ಷನ್ ಮಾಡಿದ್ದು, ಆದಷ್ಟು ಬೇಗ ಆತ ಭಾರತಕ್ಕೆ ಪದಾರ್ಪಣೆ ಮಾಡಲಿದ್ದಾನೆ. ಅವನ ಆಟವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಈ ಬೇಸಿಗೆಯಲ್ಲಿ ಕೆಲವು ಕೌಂಟಿ ಕ್ರಿಕೆಟ್ ಆಡಲು ಕಳುಹಿಸಬೇಕು ಎಂದಿದ್ದಾರೆ.

''ಉಮ್ರಾನ್ ಮಲಿಕ್ ಶೀಘ್ರದಲ್ಲೇ ಭಾರತಕ್ಕಾಗಿ ಆಡಲಿದ್ದಾರೆ. ನಾನು ಬಿಸಿಸಿಐ ಆಗಿದ್ದರೆ ನಾನು ಅವರನ್ನು ಈ ಬೇಸಿಗೆಯಲ್ಲಿ ಕೆಲವು ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಕಳುಹಿಸುತ್ತಿದ್ದೆ, ಈ ಮೂಲಕ ಅವರಿಗೆ ಮೊದಲು ಬೌಲಿಂಗ್ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತೇನೆ" ಎಂದು ವಾನ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಕಳೆದ ಸೋಮವಾರ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲ್ಲಿಕ್ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಸನ್‌ರೈಸರ್ಸ್ ಹೈದ್ರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಏಳನೇ ಓವರ್‌ನಲ್ಲಿ ಉಮ್ರಾನ್‌ಗೆ ಬೌಲಿಂಗ್ ನೀಡಿದರು. ಈ ವೇಳೆ 153 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದ ಈತನ ಬೌಲಿಂಗ್‌ನಲ್ಲಿ ಬೌನ್ಸರ್ ಹಾರ್ದಿಕ್ ಪಾಂಡ್ಯ ಹೆಲ್ಮೆಟ್‌ಗೆ ತಾಗಿತು.

ಗುಜರಾತ್ ಟೈಟನ್ಸ್‌ ಓಪನರ್ ಮ್ಯಾಥ್ಯೂ ವೇಡ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಮಲಿಕ್ ಉತ್ತಮವಾಗಿ ಬೌಲಿಂಗ್‌ ಕೊನೆಗೊಳಿಸಿದರು.

Story first published: Wednesday, April 13, 2022, 10:14 [IST]
Other articles published on Apr 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+