IPL 2022: ಸತತ 13ನೇ 'ಫಾಸ್ಟೆಸ್ಟ್ ಡೆಲಿವರಿ' ಪ್ರಶಸ್ತಿ ಗೆದ್ದ ಉಮ್ರಾನ್ ಮಲ್ಲಿಕ್ ದಾಖಲೆ

ಸನ್‌ರೈಸರ್ಸ್ ಹೈದರಾಬಾದ್ ವೇಗಿ, ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲ್ಲಿಕ್ ಐಪಿಎಲ್ 2022 ಋತುವಿನಲ್ಲಿ ತನ್ನ ಬೆಂಕಿಯಂತಹ ವೇಗದ ಎಸೆತದ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಅಮೋಘ ಪ್ರದರ್ಶನ ನೀಡಿದರು.
ಉಮ್ರಾನ್ ಮಲಿಕ್ ಕೇವಲ 3 ಓವರ್ ಬೌಲ್ ಮಾಡಿ 23 ರನ್ ನೀಡಿದ್ದು, ಮೂರು ಪ್ರಮುಖ ವಿಕೆಟ್ ಪಡೆದರು. ಇಶಾನ್ ಕಿಶನ್, ಡೇನಿಯಲ್ ಸಾಮ್ಸ್ ಮತ್ತು ತಿಲಕ್ ವರ್ಮಾ ಕಾಶ್ಮೀರದ ಎಕ್ಸ್‌ಪ್ರೆಸ್ ಉಮ್ರಾನ್ ದಾಳಿಗೆ ಪೆವಿಲಿಯನ್ ಸೇರಿಕೊಂಡರು.
ಈ ಉತ್ತಮ ಬೌಲಿಂಗ್ ಜೊತೆಗೆ ಉಮ್ರಾನ್ ಮಲ್ಲಿಕ್ ಸತತ 13ನೇ ಬಾರಿ ಪಂದ್ಯವೊಂದರಲ್ಲಿ ವೇಗದ ಎಸೆತಕ್ಕಾಗಿ ಫಾಸ್ಟೆಸ್ಟ್ ಡೆಲಿವರಿ ಪ್ರಶಸ್ತಿಯನ್ನೂ ಪಡೆದರು. ಉಮ್ರಾನ್ ಮಲಿಕ್ ಸನ್ ರೈಸರ್ಸ್ ಹೈದರಾಬಾದ್ ಆಡಿದ 13 ಪಂದ್ಯಗಳಲ್ಲಿ 13 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಈ ಪ್ರಶಸ್ತಿಯ ಹೆಸರಿನಲ್ಲಿ ಉಮ್ರಾನ್ ಈಗಾಗಲೇ ತಮ್ಮ ಖಾತೆಗೆ 13 ಲಕ್ಷ ರೂ. ಜಮಾ ಮಾಡಿದ್ದಾರೆ.
ಎದುರಾಳಿ ತಂಡದಲ್ಲಿ ವೇಗಿ ಎಷ್ಟೇ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರೂ, ಅವರನ್ನ ಹಿಂದಿಕ್ಕಿ ಉಮ್ರಾನ್ ಪ್ರಶಸ್ತಿ ಪಡೆಯುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಗಂಟೆಗೆ 154 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆದು ಪ್ರಶಸ್ತಿ ಪಡೆದರು.
IPL 2022 ರ ಋತುವಿನಲ್ಲಿ 157 kmph ವೇಗದ ಎಸೆತದಲ್ಲಿ ಉಮ್ರಾನ್ ದಾಖಲೆಯನ್ನು ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಐದು ವಿಕೆಟ್ ಪಡೆದರು. ಎಸ್‌ಆರ್‌ಎಚ್‌ನ ಪೇಸರ್ ಈಗಾಗಲೇ 13 ಪಂದ್ಯಗಳಲ್ಲಿ ಐದು ವಿಕೆಟ್ ಗೊಂಚಲು ಸೇರಿದಂತೆ 21 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications