For Quick Alerts
ALLOW NOTIFICATIONS  
For Daily Alerts
 

RCB vs CSK: ಅಬ್ಬರಿಸಿದ ಉತ್ತಪ್ಪ, ದುಬೆ ಶತಕ ಜಸ್ಟ್ ಮಿಸ್; ಆರ್‌ಸಿಬಿಗೆ 217 ರನ್‌ಗಳ ಬೃಹತ್ ಗುರಿ ನೀಡಿದ ಚೆನ್ನೈ

IPL 2022: Uthappa and Dubes terrific knock helps CSK to mount 216/4 against RCB
Dube ಹಾಗು Uthappa CSK ಗೆಲುವಿಗೆ ಮುಖ್ಯ ಕಾರಣ | Oneindia Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 217 ರನ್‌ಗಳ ಗುರಿ ನೀಡಿದೆ.

ಇತ್ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದರು. ರುತುರಾಜ್ ಗಾಯಕ್ವಾಡ್ 17 ಎಸೆತಗಳಿಗೆ ಔಟ್ ಆದರೆ, ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 3 ರನ್ ಗಳಿಸಿ ರನ್ ಔಟ್ ಆದರು. ಹೀಗೆ 6.4 ಓವರ್‌ಗಳಲ್ಲಿ 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಮ್ ದುಬೆ ಕಣದಲ್ಲಿದ್ದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಜೊತೆ ಸೇರಿ 165 ರನ್‌ಗಳ ಅದ್ಭುತ ಜತೆಯಾಟವನ್ನು ಆಡಿ ಆಸರೆಯಾದರು. ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಬಾರಿಸಿ ಶತಕ ವಂಚಿತರಾದರು. ರಾಬಿನ್ ಉತ್ತಪ್ಪ ಬೆನ್ನಲ್ಲೇ ಕಣಕ್ಕಿಳಿದ ರವೀಂದ್ರ ಜಡೇಜಾ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಗೋಲ್ಡನ್ ಡಕ್ ಆದರು.

ನಂತರ ಹೇಜಲ್ ವುಡ್ ಎಸೆದ ಅಂತಿಮ ಓವರ್‌ನಲ್ಲಿ 2 ಸಿಕ್ಸರ್ ಬಾರಿಸಿ ಶತಕದ ಸನಿಹಕ್ಕೆ ಬಂದ ಶಿವಂ ದುಬೆ ಕೂಡ 45 ಎಸೆತಗಳಲ್ಲಿ ಅಜೇಯ 94 ರನ್ ಕಲೆಹಾಕಿ ಶತಕವನ್ನು ಕೈ ತಪ್ಪಿಸಿಕೊಂಡರು. ಅತ್ತ ಜಡೇಜಾ ಔಟಾದ ಬಳಿಕ ಕಣಕ್ಕಿಳಿದ ಎಂ ಎಸ್ ಧೋನಿ ಯಾವುದೇ ಎಸೆತ ಎದುರಿಸದೇ ಉಳಿದರು. ರಾಬಿನ್ ಉತ್ತಪ್ಪ ಮತ್ತು ಶಿವಮ್ ದುಬೆ ಅಬ್ಬರದ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 14 ಎಸೆತಗಳಲ್ಲಿ 50 ( 150ರಿಂದ 200) ರನ್ ಗಳಿಸಿತು.

Story first published: Wednesday, April 13, 2022, 10:12 [IST]
Other articles published on Apr 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+