ಐಪಿಎಲ್ 2022: ತೆಲುಗಿನ ಈ ನಟಿ ವೆಂಕಟೇಶ್ ಐಯ್ಯರ್ ಪ್ರೇಯಸಿ?: ವೈರಲ್ ಆಯ್ತು ಇಬ್ಬರ ಕಾಮೆಂಟ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್ ಹಲವಾರು ದೇಶೀಯ ಪ್ರತಿಭೆಗಳಿಗೆ ತಮ್ಮ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಇರುವ ಒಂದು ಅಮೂಲ್ಯವಾದ ವೇದಿಕೆ ಎಂದರೆ ತಪ್ಪಾಗಲಾರದು. ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಅಂಕಿಅಂಶಗಳನ್ನು ಹೊಂದಿದ್ದರೂ ಸಹ ಅಂತರ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಗದೇ ಇದ್ದ ಹಲವಾರು ಯುವ ಕ್ರಿಕೆಟಿಗರು ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿ ಆಯ್ಕೆಗಾರರ ಗಮನವನ್ನು ಸೆಳೆದು ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಮಿಂಚಿದ ಹಲವಾರು ಯುವ ಕ್ರಿಕೆಟಿಗರು ರಾತ್ರೋರಾತ್ರಿ ದೊಡ್ಡ ಸ್ಟಾರ್ ಕ್ರಿಕೆಟರ್ ಆಗಿ ಬಿಟ್ಟಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಖ್ಯಾತಿಯನ್ನು ಹೊಂದಿದ ಯುವ ಕ್ರಿಕೆಟಿಗರ ಪೈಕಿ ಮಧ್ಯಪ್ರದೇಶ ಮೂಲದ ವೆಂಕಟೇಶ್ ಅಯ್ಯರ್ ಕೂಡ ಓರ್ವರು. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಭಾಗ ಆರಂಭವಾದ ನಂತರ ತನ್ನ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬೆಳಕಿಗೆ ಬಂದ ಪ್ರತಿಭೆ ವೆಂಕಟೇಶ್ ಅಯ್ಯರ್.
ಕಳೆದ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ 10 ಪಂದ್ಯಗಳನ್ನಾಡಿದ್ದ ವೆಂಕಟೇಶ್ ಅಯ್ಯರ್ 4 ಅರ್ಧ ಶತಕಗಳು ಸೇರಿದಂತೆ 370 ರನ್ ಸಿಡಿಸಿ ಮಿಂಚಿದ್ದರು. ಹೀಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಅಬ್ಬರಿಸಿದ್ದ ವೆಂಕಟೇಶ್ ಅಯ್ಯರ್ ತಂಡ ಪ್ಲೇ ಆಫ್ ಹಾಗೂ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ತನ್ನನ್ನು ತಾನು ಗುರುತಿಸಿಕೊಂಡು ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ಸಹ ಪದಾರ್ಪಣೆಯನ್ನು ಮಾಡಿದರು. ಹೀಗೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ಬೆಳಕಿಗೆ ಬಂದ ಪ್ರತಿಭೆ ವೆಂಕಟೇಶ್ ಅಯ್ಯರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೆಲುಗು ನಟಿಯ ಚಿತ್ರಕ್ಕೆ ಕಾಮೆಂಟ್ ಮಾಡುವುದರ ಮೂಲಕ ಟ್ರೋಲ್ ಆಗುತ್ತಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ.

ನಟಿ ಹಾಕಿದ ಫೋಟೋಗೆ ಕಾಮೆಂಟ್ ಮಾಡಿದ ವೆಂಕಟೇಶ್ ಅಯ್ಯರ್
ತೆಲುಗಿನ ಟ್ಯಾಕ್ಸಿವಾಲಾ, ತಿಮ್ಮರಸು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಪ್ರಿಯಾಂಕಾ ಜಾವಲ್ಕರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದ ಇತ್ತೀಚೆಗಿನ ಫೋಟೋಗೆ ವೆಂಕಟೇಶ್ ಅಯ್ಯರ್ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಇಂದೋರ್ ಮೂಲದ ಕ್ರಿಕೆಟಿಗ ತೆಲುಗಿನ ನಟಿಗೆ ಕಾಮೆಂಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಯ್ಯರ್ ಪ್ರಶಂಸೆಗೆ ನಟಿಯ ಮರು ಉತ್ತರ!
ವೆಂಕಟೇಶ್ ಅಯ್ಯರ್ ತನ್ನ ಫೋಟೊಗೆ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿರುವ ನಟಿ ಪ್ರಿಯಾಂಕಾ ಜಾವಲ್ಕರ್ 'ಕ್ಯೂಟ್ ಯಾರು ನೀವಾ?' ಎಂದು ವೆಂಕಟೇಶ್ ಅಯ್ಯರ್ ಅವರಿಗೆ ಪ್ರಶ್ನೆಯನ್ನು ಹಾಕಿದ್ದಾರೆ. ಈ ಮೂಲಕ ನೀವು ಕ್ಯೂಟ್ ಆಗಿದ್ದೀರಾ ಎಂಬುದನ್ನು ನಟಿ ಪ್ರಿಯಾಂಕಾ ಜಾವಲ್ಕರ್ ಪರೋಕ್ಷವಾಗಿ ವೆಂಕಟೇಶ್ ಅಯ್ಯರ್ ಅವರಿಗೆ ತಿಳಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ನಡೆದಿರುವ ಈ ಕಾಮೆಂಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರ ನಡುವೆ ಪ್ರೀತಿ ಇರಬಹುದಾ ಎಂಬ ಅನುಮಾನಗಳು ಸಹ ಶುರುವಾಗಿವೆ. ಹಾಗೂ ಕೆಲ ಟ್ರೋಲಿಗರು ಇಬ್ಬರ ನಡುವಿನ ಈ ಕಾಮೆಂಟ್ ಕುರಿತು ಟ್ರೋಲ್ ಕೂಡ ಮಾಡುತ್ತಿದ್ದಾರೆ.

ವೆಂಕಟೇಶ್ ಅಯ್ಯರ್ ಅಂತರರಾಷ್ಟ್ರೀಯ ಅಂಕಿಅಂಶ
ಕಳೆದ ಐಪಿಎಲ್ ಟೂರ್ನಿಯಲ್ಲಿ ಮಿಂಚುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್ ಒಟ್ಟು 9 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 133 ರನ್ ಕಲೆಹಾಕಿದ್ದಾರೆ ಹಾಗೂ 5 ವಿಕೆಟ್‍ಗಳನ್ನೂ ಸಹ ಪಡೆದುಕೊಂಡಿದ್ದಾರೆ. ಇನ್ನು 2 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಯ್ಯರ್ 24 ರನ್ ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications