ಪಂಜಾಬ್ ವಿರುದ್ಧ ಅಬ್ಬರಿಸಲು ಪಣತೊಟ್ಟ ವಿರಾಟ್: ಜಿಮ್‌ನಲ್ಲಿ ಭರ್ಜರಿ ವರ್ಕೌಟ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಅತ್ಯಂತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದು, ಏನಾದ್ರೂ ಮಾಡಿ ಫಾರ್ಮ್‌ಗೆ ಮರಳಬೇಕೆಂದು ಪಣತೊಟ್ಟಿದ್ದಾರೆ. ಹೀಗಾಗಿಯೇ ಏನಾದರೂ ಮಾಡಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಬೇಕೆಂದು ಪಣತೊಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಉತ್ತಮ ಸ್ಕೋರ್ ಕಲೆಹಾಕಲು ಗುರಿ ನೆಟ್ಟಿರುವ ವಿರಾಟ್ ಜಿಮ್‌ನಲ್ಲಿ ಸಾಕಷ್ಟು ಬೆವರು ಸುರಿಸಿ ವರ್ಕೌಟ್ ಮಾಡುತ್ತಿದ್ದಾರೆ. ಫಿಟ್ನೆಸ್ ಕೋಚ್ ಶಂಕರ್ ಬಸು ಮಾರ್ಗದರ್ಶನದಲ್ಲಿ ವಿರಾಟ್ ತೂಕದ ತರಬೇತಿ ಪಡೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ತೂಕದ ತರಬೇತಿ ಮತ್ತು ಇತರ ವ್ಯಾಯಾಮಗಳನ್ನು ಮಾಡುತ್ತಿದ್ದು, ಡೆಡ್‌ಲಿಫ್ಟ್ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೆಲಸ ನಿಲ್ಲಿಸಬಹುದು ಎಂದು ಯಾರು ಹೇಳಿದರು ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ. ಈ ಹಂತದಲ್ಲಿ, ವಿರಾಟ್ ಕೊಹ್ಲಿಯ ವೀಡಿಯೊಗೆ ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದು, ಪತ್ನಿ ಅನುಷ್ಕಾ ಶರ್ಮಾ 'Hottie' ಎಂದು ಹೊಗಳಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ಮೂರು ಬಾರಿ ಗೋಲ್ಡನ್ ಡಕೌಟ್ ಆಗಿದ್ದು, ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿರುವ ವಿರಾಟ್ 19.6 ಸರಾಸರಿಯಲ್ಲಿ 216 ರನ್ ಗಳಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ 20 ಸರಾಸರಿಗಿಂತ ಕೆಳಗಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧ ಶತಕ ಗಳಿಸಿದ್ರೂ ಸಹ ಆ ಇನ್ನಿಂಗ್ಸ್ ಉತ್ತಮವಾಗಿ ಕಾಣಲಿಲ್ಲ. 53 ಎಸೆತಗಳಲ್ಲಿ 58 ರನ್ ಗಳಿಸಿ ತಂಡದ ಪರ ಭಾರೀ ಇನ್ನಿಂಗ್ಸ್ ಆಡಿದರು. ಆದರೆ ಈ ಅರ್ಧಶತಕದಿಂದ ವಿರಾಟ್ ಫಾರ್ಮ್ ಗೆ ಬಂದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಆತ್ಮವಿಶ್ವಾಸವನ್ನು ವಿರಾಟ್ ಬುಡಮೇಲು ಮಾಡಿದರು. ನಂತರದ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ಔಟಾದರು.
ಆರ್‌ಸಿಬಿ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನ ಜಯಿಸಿ 5 ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. ಒಟ್ಟು 14 ಪಾಯಿಂಟ್ಸ್ ಕಲೆಹಾಕಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಎರಡೂ ಪಂದ್ಯಗಳನ್ನ ಜಯಿಸಿದ್ರೆ ಪ್ಲೇ ಆಫ್ ಖಚಿತವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications