Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಟೂರ್ನಿಯಲ್ಲಿ 3ನೇ ಬಾರಿ ಡಕ್ಔಟ್ ಆದ ಕೊಹ್ಲಿ; ಹೆಚ್ಚು ಬಾರಿ ಡಕ್ಔಟ್ ಆದ ನಾಲ್ವರು ಇವರೇ!

IPL 2022: Virat Kohli falls for golden duck in first over against SRH
Virat Kohli ಇಷ್ಟೊಂದು ಮಂಕಾಗಿರೋದ್ದನ್ನ ಯಾವತ್ತೂ ನೋಡಿಲ್ಲ | Oneindia Kannada

ಈ ಬಾರಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ ಓರ್ವ ಆಟಗಾರನಾಗಿ ಮಾತ್ರ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ನಡೆದಿರುವ 12 ಪಂದ್ಯಗಳಲ್ಲಿ 216 ರನ್ ಗಳಿಸಿದ್ದು, ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಅರ್ಧಶತಕ ಬಾರಿಸಿದ್ದು, ಉಳಿದ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಹೌದು, ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸಲು ಇಷ್ಟರಮಟ್ಟಿಗೆ ಪರದಾಡಿದ್ದ ಉದಾಹರಣೆಗಳೇ ಇರಲಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ಅಕ್ಷರಶಃ ಮಂಕಾಗಿದ್ದು, ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ.

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ಯ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಪಟ್ಟಿಯನ್ನು ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ. ಹೌದು, ಇಂದು ( ಮೇ 8 ) ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಪಂದ್ಯದ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆಗಿದ್ದಾರೆ.

ಪಂದ್ಯದ ಮೊದಲನೇ ಓವರ್ ಮಾಡಿದ ಜಗದೀಶ್ ಸುಚಿತ್ ಎಸೆದ ಮೊದಲ ಎಸೆತಕ್ಕೆ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಬಾರಿಗೆ ಡಕ್ ಔಟ್ ಆಗಿ ಬೇಡವಾದ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಮೂರನೇ ಬಾರಿಗೆ ಡಕ್ ಔಟ್ ಆಗಿದ್ದು, ಇದು ಈ ಬಾರಿಯ ಆವೃತ್ತಿಯಲ್ಲಿ ಆಟಗಾರನೊಬ್ಬ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಕೆಟ್ಟ ದಾಖಲೆಯಾಗಿದೆ.

ಇನ್ನು ವಿರಾಟ್ ಕೊಹ್ಲಿ ಸೇರಿದಂತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ( ಮೇ 8 ) ನಡೆದಿರುವ ಪಂದ್ಯಗಳ ಪೈಕಿ 3 ಬಾರಿ ಡಕ್ ಔಟ್ ಆಗಿ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟಾದ ಆಟಗಾರರು ಎನಿಸಿಕೊಂಡಿರುವ ಒಟ್ಟು 4 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ಅನುಜ್ ರಾವತ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು

2. ರಶೀದ್ ಖಾನ್ - ಗುಜರಾತ್ ಟೈಟನ್ಸ್

3. ಕೆಎಲ್ ರಾಹುಲ್ - ಲಕ್ನೋ ಸೂಪರ್ ಜೈಟ್ಸ್

4. ವಿರಾಟ್ ಕೊಹ್ಲಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು

Story first published: Monday, May 9, 2022, 9:46 [IST]
Other articles published on May 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+