IPL 2022: ಸೆಂಚುರಿ ಸಿಡಿಸಲು ತುದಿಗಾಲಲ್ಲಿ ನಿಂತಿರುವ ವಿರಾಟ್, ಅಭಿಮಾನಿಗಳಿಗೆ ಕೊಹ್ಲಿ ಸಂದೇಶ

ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್) 15ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮಾರ್ಚ್ 26ರಂದು ಅಧಿಕೃತ ಚಾಲನೆ ಸಿಗಲಿದೆ. ಪ್ರತಿ ತಂಡಗಳು ಸಜ್ಜಾಗಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ ನಾಯಕತ್ವದ ಜೊತೆಗೆ ಕಣಕ್ಕಿಳಿಯಲು ಸಜ್ಜಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದ ಹೊಣೆಗಾರಿಕೆಯಲ್ಲಿ ಸಂಪೂರ್ಣ ಮುಕ್ತ ಮನಸ್ಸಿನಿಂದ ಕಣಕ್ಕಿಳಿಯಲು ಸಜ್ಜಾಗಿದ್ದು, ಅವರ ಅಭಿಮಾನಿಗಳು ಕಿಂಗ್ ಕೊಹ್ಲಿಯಿಂದ ಬಿಗ್ ಸ್ಕೋರ್ ನಿರೀಕ್ಷಿಸುತ್ತಿದ್ದಾರೆ.
2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ವಿರಾಟ್‌ಗೆ ಪ್ರಸ್ತುತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದಾರೆ. ಇದೇ ರೀತಿಯಲ್ಲಿ 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ರನ್ ಕೊರತೆ ಅನ್ನು ಕಂಡಿದ್ದರು. ಕಳೆದ ಎರಡು ವರ್ಷಗಳಿಂದ ಕೊಹ್ಲಿ ವೃತ್ತಿಜೀವನದ ಗ್ರಾಫ್ ಕುಸಿದಿದೆ. 2019ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕ ಸಿಡಿಸದೇ ಇರುವುದು ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ.
ಆದ್ರೆ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ನಲ್ಲಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಫೋಟೊವೊಂದನ್ನ ಶೇರ್ ಮಾಡಿದ್ದು, ಇನ್ನು ಹೆಚ್ಚು ಹೊತ್ತು ಸಮಯ ತೆಗೆದುಕೊಳ್ಳುವುದಿಲ್ಲ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಟ್ವಿಟ್ಟರ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಲೈಕ್ಸ್ ಜೊತೆಗೆ ಕಮೆಂಟ್ಸ್ ಕೂಡ ಬಂದಿದೆ.
ವಿರಾಟ್ ಕೊಹ್ಲಿ 2016ರ ಐಪಿಎಲ್ ಸೀಸನ್‌ನಲ್ಲಿ ನಾಲ್ಕು ಭರ್ಜರಿ ಶತಕ ಸೇರಿದಂತೆ 973 ರನ್ ಸಿಡಿಸಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಆಟಗಾರನಾಗಿ ಹೊರಹೊಮ್ಮಿದ್ದರು. ಕೊಹ್ಲಿ ಆ ರೀತಿಯ ಫಾರ್ಮ್‌ಗೆ ಮರಳಿದ್ದೇ ಆದಲ್ಲಿ ಎದುರಾಳಿ ಬೌಲರ್ ಗಳ ಧೂಳೀಪಟ ಗ್ಯಾರೆಂಟಿ ಎಂಬುದು ಕೊಹ್ಲಿ ಅಭಿಮಾನಿಗಳ ನಂಬಿಕೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications