IPL 2022: 'ವಾಟ್ ಎ ಕ್ಯಾಚ್' ಕೊಹ್ಲಿ ಕ್ಯಾಚ್‌ಗೆ ಫಿದಾ ಆದ ಫ್ಯಾನ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯನ್ನ ಹಾಡಿ ಹೊಗಳಲಾಗಿದೆ.
ರಾಜಸ್ತಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ತಮ್ಮ ಅದ್ಭುತ ಫೀಲ್ಡಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ರಾಜಸ್ಥಾನದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರು ವಿರಾಟ್ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಹತಾಶರಾದರು. ಈ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಪರಿಪೂರ್ಣವಾಗಿ ತೆಗೆದುಕೊಂಡರು ಸಹ, ಫೀಲ್ಡ್ ಅಂಪೈರ್‌ಗಳು ಶಂಕಿಸಿದ್ರು. ಚೆಂಡನ್ನು ಅದ್ಭುತವಾಗಿ ಸ್ವೀಕರಿಸಿದರೂ ಸಹ ನೆಲಕ್ಕೆ ತಾಗಿಸಿದರೇ ಎಂದು ಥರ್ಡ್ ಅಂಪೈರ್ ವೀಕ್ಷಿಸಿದ್ರು.
ಆದ್ರೆ ಅಂತಿಮವಾಗಿ ವಿರಾಟ್ ಉತ್ತಮ ಕ್ಯಾಚ್ ತೆಗೆದುಕೊಂಡಿದ್ದು ಖಚಿತಗೊಂಡ ಬಳಿಕ, ದೇವದತ್ ಪಡಿಕ್ಕಲ್ ಪೆವಿಲಿಯನ್ ಸೇರಿಕೊಂಡ್ರು. ಈ ವೇಳೆಯಲ್ಲಿ ಕ್ರೀಸ್‌ಗೆ ಬಂದ ಸಂಜು ಸ್ಯಾಮ್ಸನ್‌ಗಾಗಿ ಕಾಯುವಂತೆ ಫೀಲ್ಡ್ ಅಂಪೈರ್‌ಗಳು ಕೇಳಿದರು. ಇದರಿಂದ ನಿಜವಾಗಿ ಏನಾಗುತ್ತದೆ ಎಂದು ಆರ್‌ಸಿಬಿ ಆಟಗಾರರು ಹಾಗೂ ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದರು. ಆರ್‌ಸಿಬಿ ಡಗೌಟ್ ಕೂಡ ಅಚ್ಚರಿ ವ್ಯಕ್ತಪಡಿಸಿತು. ಆದರೆ ಟಿವಿ ರಿಪ್ಲೇಯಲ್ಲಿ ಚೆಂಡು ನೆಲಕ್ಕೆ ಬಡಿದಿಲ್ಲ ಎಂದು ಸ್ಪಷ್ಟವಾಯಿತು ಮತ್ತು ಮೂರನೇ ಅಂಪೈರ್ ಅವರನ್ನು ಕಳುಹಿಸಿದ್ರು.. ಇದರಿಂದ ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಹರ್ಷಲ್ ಪಟೇಲ್ ಎಸೆದ 10ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದೆ.
10ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಸತತವಾಗಿ ಬೌಲಿಂಗ್ ಮಾಡಿ ರನ್ ತಡೆದರು. ಬಟ್ಲರ್ ಮತ್ತು ಪಡಿಕ್ಕಲ್ ಅವರ ನಿಧಾನಗತಿಯ ಎಸೆತಗಳನ್ನು ಆಡಲು ಕಷ್ಟಪಟ್ಟರು. ಅದು ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೇರಿತು. ಪಡಿಕ್ಕಲ್ ಓವರ್ ನ ಕೊನೆಯ ಎಸೆತದಲ್ಲಿ ಬೃಹತ್ ಶಾಟ್ ಆಡಲು ಯತ್ನಿಸಿ ಕ್ಯಾಚ್ ನೀಡಿದ್ರು. ಹರ್ಷಲ್ ಎಸೆದ ನಿಧಾನಗತಿಯ ಚೆಂಡನ್ನು ಊಹಿಸಲು ಸಾಧ್ಯವಾಗದ ಪಡಿಕ್ಕಲ್ ಪೆವಿಲಿಯನ್ ಸೇರಿದರು. ಪ್ಯಾಡಲ್ ಬ್ಯಾಟ್ ಅಂಚಿಗೆ ತಾಗಿ ಚಿಮ್ಮಿದ ಚೆಂಡನ್ನು ಮಿಡ್ ಫೀಲ್ಡ್ ನಲ್ಲಿದ್ದ ಕೊಹ್ಲಿ ಅದ್ಭುತವಾಗಿ ಸ್ವೀಕರಿಸಿದರು. ಆದ್ರೆ ಈ ವೇಳೆ ಚೆಂಡು ನೆಲಕ್ಕೆ ಬಡಿದಿದ್ಯಾ ಎಂಬ ಅನುಮಾನ ಮೂಡಿತ್ತು.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications