ಅತಿ ಕೆಟ್ಟ ಆರಂಭ ಪಡೆದ ಸಿಎಸ್‌ಕೆ: ಹಾಲಿ ಚಾಂಪಿಯನ್ನರ ಸತತ ಸೋಲಿಗೆ 3 ಕಾರಣ!

ಹಾಲಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಮೊದಲ ಮೂರು ಪಂದ್ಯಗಳಲ್ಲಿ ಮೂರನ್ನು ಕೂಡ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ ತಂಡದ ಆತ್ಮ ವಿಶ್ವಾಸ ಸಹಜವಾಗಿಯೇ ಕುಸಿದು ಹೋದಂತಿದೆ. ಪ್ರಮುಖ ಆಟಗಾರರಿಂದಲೇ ನಿರೀಕ್ಷಿತ ಪ್ರದರ್ಶನ ಬಾರದಿರುವುದು ದೊಡ್ಡ ಹಿನ್ನಡೆಗೆ ಕಾರಣವಾಗಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು. ನಂತರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 210 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ ನಂತರವೂ ತೀಕ್ಷ್ಣವಲ್ಲದ ಬೌಲಿಂಗ್‌ನಿಂದಾಗಿ ಎರಡನೇ ಬಾರಿಗೆ ಮುಖಭಂಗವನ್ನುಂಟು ಮಾಡಿತು. ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ರವೀಂದ್ರ ಜಡೇಜಾ ಪಡೆ ಹೀನಾಯ ಸೋಲಿಗೆ ಶರಣಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಹಿಂದೆಂದೂ ಅನುಭವಿಸದ ಸತತ ಮೂರು ಆರಂಭಿಕ ಸೋಲು ಕಂಡಿದೆ.
ಹಾಗಾದರೆ ಸಿಎಸ್‌ಕೆ ತಂಡ ಅನುಭವಿಸುತ್ತಿರುವ ಸತತ ಸೋಲಿಗೆ ಕಾರಣವೇನು? ಮುಂದೆ ಓದಿ..

ಚಹರ್‌ಗೆ ಗಾಯ, ಮೊನಚಿಲ್ಲದ ಬೌಲಿಂಗ್ ಪಡೆ:
ಟೂರ್ನಿಯ ಆರಂಭಕ್ಕೂ ಮುನ್ನವೇ ಸಿಎಸ್‌ಕೆ ತಂಡದ ವೇಗದ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹರ್ ಗಾಯಗೊಂಡಿದ್ದಾರೆ. ಚಹರ್ ಯಾವಾಗ ಲಭ್ತವಾಗಲಿದ್ದಾರೆ ಎಂಬ ಬಗ್ಗೆ ಈವರೆಗೂ ಮಾಹಿತಿ ದೊರೆತಿಲ್ಲ. ದೀಪಕ್ ಚಹರ್‌ಗೆ ಪರಿಣಾಮಕಾರಿ ಬ್ಯಾಕ್‌ಅಪ್ ಆಟಗಾರ ತಂಡದಲ್ಲಿ ಕಾಣಿಸುತ್ತಿಲ್ಲ. ತುಷಾರ್ ದೇಶ್‌ಪಾಂಡೆ ಹಾಗೂ ಮುಖೇಶ್ ಚೌಧರಿ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿದರೂ ಅವರಿಂದ ಪರಿಣಾಮಕಾರಿ ಇನ್ನಿಂಗ್ಸ್ ತಂಡಕ್ಕೆ ದೊರೆತಿಲ್ಲ. ಸ್ವತಃ ನಾಯಕ ಜಡೇಜಾ ಕೂಡ ತಮ್ಮ ಎಂದಿನ ಲಯದಲ್ಲಿದ್ದಂತೆ ಕಾಣಿಸುತ್ತಿಲ್ಲ. ಹೀಗಾಗಿ ಎದುರಾಳಿ ನಾಯಕರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಸುಲಭ ಸವಾಲಾಗಿ ಪರಿಣಮಿಸುತ್ತಿದೆ.

ಪವರ್ ಹಿಟ್ಟರ್‌ಗಳ ಕೊರತೆ
ಈ ಬಾರಿಯ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರವೇ ಗೊಂದಲಕಾರಿಯಾಗಿದೆ. ಫ್ರಾಂಚೈಸಿ ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ ಅವರಂತಾ ಅನುಭವಿ ಆಟಗಾರರನ್ನು ತಂಡಕ್ಕೆ ಮರಳಿ ಸೇರ್ಪಡೆಗೊಳಿಸಿತ್ತು. ಆದರೆ ಫಾಫ್ ಡು ಪ್ಲೆಸಿಸ್ ಅವರಂತಾ ಪ್ರಮುಖ ಆಟಗಾರನನ್ನು ತಂಡದಿಂದ ಬಿಟ್ಟುಕೊಟ್ಟಿತ್ತು. ಡು ಪ್ಲೆಸಿಸ್ ಸಿಎಸ್‌ಕೆ ತಂಡಕ್ಕೂ ನಾಯಕನಾಗಿ ಉತ್ತಮ ಆಯ್ಕೆಯಾಗಿರುತ್ತಿದ್ದರು. ಕಳೆದ ಬಾರಿಯ ಯಶಸ್ವಿ ಜೋಡಿಯಾದ ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಂದ ಮತ್ತೊಮ್ಮೆ ಅದ್ಭುತ ಆರಂಭವನ್ನು ನಿರೀಕ್ಷಿಸಬಹುದಾಗಿತ್ತು. ಫಾಫ್ ಇಲ್ಲದೆ ಪ್ರಸ್ತುತ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ ಮಂಕಾದಂತೆ ಭಾಸವಾಗುತ್ತಿದ್ದಾರೆ. ಋತು ಫಾರ್ಮನ್ ಕಂಡುಕೊಳ್ಳುವುದನ್ನು ತಂಡ ನಿರೀಕ್ಷಿಸುತ್ತಿದೆ. ಇನ್ನು ನಿರಕ್ಷೆಯಿಟ್ಟು ತಂಡಕ್ಕೆ ಮರಳಿ ಸೇರ್ಪಡೆಗೊಳಿಸಿರುವ ಅಂಬಾಟಿ ರಾಯುಡು ಹಾಗೂ ರೀಟೈನ್ ಮಾಡಿಕೊಂಡಿರುವ ಮೊಯೀನ್ ಅಲಿ ಕೂಡ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿರುವುದು ಈ ಸತತ ಸೋಲಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಪರಿಣಾಮಕಾರಿಯಲ್ಲದ ನಾಯಕತ್ವ
ಇನ್ನು ಈ ಬಾರಿಯ ಟೂರ್ನಿಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಎಂಎಸ್ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಜಡೇಜಾ ನಾಯಕನಾಗಿ ಅಂಗಳದಲ್ಲಿ ಪರಿಣಾಮಕಾರಿಯಾಗಿ ಕಾಣಿಸುತ್ತಿಲ್ಲ. ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಜಡೇಜಾ ನಾಯಕತ್ವದಲ್ಲಿ ಮಂಕಾದಂತೆ ಭಾಸವಾದರು. ಮಾಜಿ ನಾಯಕ ಧೋನಿ ಫೀಲ್ಡಿಂಗ್ ಹಾಗೂ ಬೌಲಿಂಗ್ ಬಗ್ಗೆ ಸಲಹೆ ನಿಡುತ್ತಿರುವುದು ಕಾಣಿಸಿತ್ತು. ಇದು ಮುಂದಿನ ಪಂದ್ಯಗಳಲ್ಲಿಯೂ ಮುಂದುವರಿದಿದೆ. ಹೀಗಾಗಿ ನಾಯಕನಾಗಿ ಜಡ್ಡು ಪರಿಣಾಮಕಾರಿಯಾಗಿಲ್ಲದಿರುವುದು ಕೂಡ ಈ ಹಿನ್ನಡೆಗೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications