
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಈಗಾಗಲೇ ಆರಂಭಿಕ ಪಂದ್ಯಗಳನ್ನ ಮುಗಿಸಿದ್ದು, ಪ್ರತಿ ತಂಡಗಳು ಎರಡು ಪಂದ್ಯಗಳನ್ನಂತು ಆಡಿದೆ. ಹೀಗಿರುವಾಗ ಐಪಿಎಲ್ ಪಂದ್ಯಗಳ ವೀಕ್ಷಣೆ ವಿಚಾರಕ್ಕೆ ಬಂದ್ರೆ ಬಿಸಿಸಿಗೆ ಹೊಸ ತಲೆ ನೋವು ಶುರುವಾಗಿದೆ. ಆರ್ಥಿಕ ಕುಸಿತದಿಂದ ಜರ್ಜರಿತಗೊಂಡಿರುವ ಶೀಲಂಕಾದಲ್ಲಿ ಐಪಿಎಲ್ ಪ್ರಸಾರ ಸ್ಥಗಿತಗೊಂಡಿದೆ.
ಶ್ರೀಲಂಕಾದಲ್ಲಿ ಆಹಾರ, ತೈಲಕ್ಕೆ ಹಾಹಾಕಾರದ ನಡುವೆ ಇದೀಗ ಐಪಿಎಲ್ ನೇರಪ್ರಸಾರ ಕೂಡ ಸ್ಥಗಿತಗೊಂಡಿದೆ. ಐಪಿಎಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸೇವೆ ನಿಲ್ಲಿಸಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಈಗಾಗಲೇ ಟಿ20 ಟೂರ್ನಿ ಪ್ರಸಾರ ಮಾಡುವುದನ್ನ ಸಹ ನಿಲ್ಲಿಸಿದ್ದು ಪ್ರಮುಖ ಸುದ್ದಿ ಪತ್ರಿಕೆಗಳು ಖರ್ಚು ಕಡಿತಗೊಳಿಸಲು ಐಪಿಎಲ್ ಕವರೇಜ್ ಕೂಡ ನಿಲ್ಲಿಸಿವೆ.
ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಟಿ20 ಸ್ಪರ್ಧೆಯನ್ನು ಪ್ರಸಾರ ಮಾಡಲಾಗುತ್ತಿಲ್ಲ, ಈಗಾಗಲೇ ಆರ್ಥಿಕ ಸಂಕಷ್ಟವು ಅಲ್ಲಿನ ನಾಗರಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.

ಶ್ರೀಲಂಕಾದಲ್ಲಿ ಐಪಿಎಲ್ ನೇರ ಪ್ರಸಾರ ಏಕೆ ಸ್ಥಗಿತಗೊಂಡಿದೆ?
ಜಾನಿ ನ್ಯೂಸ್‌ನ ವರದಿಗಳ ಪ್ರಕಾರ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಕೇವಲ ಸಾಮಾನ್ಯ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. IPL 2022 ಪ್ರಸಾರದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ದ್ವೀಪ ರಾಷ್ಟ್ರದ ಎರಡು ಜನಪ್ರಿಯ ಪತ್ರಿಕೆಗಳು ಪಂದ್ಯಾವಳಿಯ ಬಗ್ಗೆ ಯಾವುದೇ ಸುದ್ದಿಗಳನ್ನು ಪ್ರಕಟಿಸದ ಕಾರಣ ಪ್ರತಿಷ್ಠಿತ ಟಿ20 ಲೀಗ್ ಮಾಧ್ಯಮ ಪ್ರಸಾರವನ್ನು ಪಡೆಯುವುದನ್ನು ನಿಲ್ಲಿಸಿದೆ.
ಮುದ್ರಣ ಮಾಧ್ಯಮವು "ಕಾಗದದ ವೆಚ್ಚವನ್ನು ಪೂರೈಸಲು ಹೆಣಗಾಡುತ್ತಿದೆ" ಮತ್ತು ಸದ್ಯಕ್ಕೆ ಸುದ್ದಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಸಂಬಂಧಿಸಿದಂತೆ, ಬಿಕ್ಕಟ್ಟು ಎಷ್ಟು ಉಲ್ಬಣಗೊಂಡಿದೆ ಎಂದರೆ ಅನೇಕ ಟಿವಿ ಚಾನೆಲ್‌ಗಳನ್ನು ಸಹ ಮುಚ್ಚಲಾಗಿದೆ. ಸ್ಥಳೀಯ ವಾಹಿನಿಗಳ ಜೊತೆಗೆ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪ್ರಸಾರ ಹಕ್ಕುಗಳಿಗೆ ಬೇಡಿಕೆ ಇಟ್ಟಿದ್ದರೂ ಸಹ ದೇಶದ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದು, ಟೂರ್ನಿಯನ್ನು ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ.
