Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ನೀಡುವ ಕುರಿತು ಬಾಯ್ಬಿಟ್ಟ ಜಯವರ್ಧನೆ

Mahela Jayawardane

ಐಪಿಎಲ್ 2022ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಸತತ 8 ಪಂದ್ಯ ಸೋಲಿನೊಂದಿಗೆ ಎಲ್ಲರಿಗಿಂತ ಮುಂಚಿತವಾಗಿ ಪ್ಲೇ-ಆಫ್‌ನಿಂದ ಹೊರಬಿದ್ದಿದೆ. ಕಳಪೆ ಬ್ಯಾಟಿಂಗ್ ಹಾಗೂ ದುರ್ಬಲ ಬೌಲಿಂಗ್ ತಂಡವನ್ನು ಘಾಸಿಗೊಳಿಸಿತು. ಅದರಲ್ಲೂ ಆ ತಂಡದ ಸಂಯೋಜನೆ ಇನ್ನೂ ಸೆಟ್‌ ಆಗೇ ಇಲ್ಲ. ಹಾಗೂ ಯುವ ಆಟಗಾರರೊಂದಿಗೆ ತಂಡ ದುರ್ಬಲವಾಗಿದೆ.

ಹಿರಿಯ ಆಟಗಾರರ ವೈಫಲ್ಯ, ಅಸ್ಥಿರ ಬೌಲಿಂಗ್ ಸೋಲಿಗೆ ಕಾರಣವಾಯಿತು. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಭರ್ಜರಿ ಜಯ ಸಾಧಿಸುವ ಮೂಲಕ ಸೋಲಿನ ಓಟಕ್ಕೆ ಅಂತ್ಯ ಹಾಡಿತ್ತು.

ಈ ಮೂಲಕ 8 ಸೋಲಿನ ಬಳಿಕ ಮುಂಬೈಮೊದಲ ಗೆಲುವು ದಾಖಲಿಸಿದೆ. ಕುಮಾರ ಕಾರ್ತಿಕೇಯನ್ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಮುಂಬೈ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಗುಳಿದಿರುವುದರಿಂದ, ಅವರು ತಮ್ಮ ಬೆಂಚ್ ಆಟಗಾರರಿಗೆ ಅವಕಾಶ ನೀಡಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಈ ಸರಣಿಯಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಕೋಚ್ ಜಯವರ್ಧನೆ ಅವರು ಅರ್ಜುನ್ ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯದ ಬಗ್ಗೆ ಕೆಲವು ಕುತೂಹಲಕಾರಿ ಕಮೆಂಟ್ ಮಾಡಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಯವರ್ಧನೆ ಅವರನ್ನು ಅರ್ಜುನ್ ಅವರ ಚೊಚ್ಚಲ ಪಂದ್ಯದ ಕುರಿತು ಕೇಳಲಾಯಿತು.ಅದು ತಂಡದ ಸಂಯೋಜನೆಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು.

''ತಂಡದಲ್ಲಿ ಎಲ್ಲರೂ ಆಯ್ಕೆಯಾಗಿದ್ದಾರೆ. ಸಂದರ್ಭಗಳನ್ನು ಅವಲಂಬಿಸಿ ನಾವು ಯಾರನ್ನು ಆಡಬೇಕೆಂದು ನಿರ್ಧರಿಸುತ್ತೇವೆ. ಆಟಗಾರರ ಆಯ್ಕೆಯು ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ. ತಂಡದ ಯಶಸ್ಸಿಗೆ ಅಪೇಕ್ಷಿತ ಸಂಯೋಜನೆಯನ್ನು ಆಯ್ಕೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಪ್ರತಿಯೊಂದು ಪಂದ್ಯವೂ ಆತ್ಮವಿಶ್ವಾಸವನ್ನು ನೀಡುತ್ತಿದೆ. ನಾವು ನಮ್ಮ ಮೊದಲ ಗೆಲುವು ಪಡೆದಿದ್ದೇವೆ. ಇದೇ ರೀತಿ ಮುಂದುವರೆಯಬೇಕು. ಉತ್ತಮ ಆಟಗಾರರನ್ನು ತಂಡಕ್ಕೆ ಕರೆತರಬೇಕು, ಅದರಲ್ಲಿ ಅರ್ಜುನ್ ತೆಂಡೂಲ್ಕರ್ ಕೂಡ ಇದ್ದಾರೆ. ಅವರನ್ನು ಆಡಿಸುವ ಬಗ್ಗೆ ಪರಿಶೀಲಿಸುತ್ತೇವೆ. ಆದರೆ ಇದು ತಂಡದ ಸಂಯೋಜನೆಯನ್ನು ಅವಲಂಬಿಸಿರುತ್ತದೆ' ಎಂದು ಮುಂಬೈ ತಂಡದ ಹೆಡ್‌ ಕೋಚ್‌ ಜಯವರ್ಧನೆ ಹೇಳಿದರು.

ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಮಹೇಲಾ ಜಯವರ್ಧನೆ, ಬ್ಯಾಟಿಂಗ್ ವೈಫಲ್ಯದಿಂದ ನಿರಾಶೆಗೊಂಡಿದ್ದೇನೆ ಎಂದು ಹೇಳಿದರು. ಆದಾಗ್ಯೂ, ಬ್ಯಾಟಿಂಗ್ ವೈಫಲ್ಯಕ್ಕಿಂತ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮುಖ್ಯ ಎಂದು ಹೇಳಿದರು.

30 ಲಕ್ಷ ರೂಪಾಯಿಗೆ ಅರ್ಜುನ್ ತೆಂಡೂಲ್ಕರ್ ಖರೀದಿ
ಐಪಿಎಲ್ 2022 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ 30 ಲಕ್ಷ ರೂಪಾಯಿಗೆ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದೆ. ಆದರೆ, ಒಂದೇ ಒಂದು ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಎಲ್ಲಾ ಪ್ರಮುಖ ವೇಗಿಗಳ ವೈಫಲ್ಯದ ಹಿನ್ನೆಲೆಯಲ್ಲಿ ಅರ್ಜುನ್ ಆಡುವುದು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಅರ್ಜುನ್ ನೆಟ್ಸ್ ನಲ್ಲೂ ಅಮೋಘ ಬೌಲಿಂಗ್ ಮಾಡುತ್ತಿದ್ದಾರೆ. ಅಮೋಘ ಎಸೆತದಲ್ಲಿ ಇಶಾನ್ ಕಿಶನ್ ಕ್ಲೀನ್ ಬೌಲ್ಡ್ ಆದರು. ಈ ವಿಡಿಯೋವನ್ನು ಮುಂಬೈ ಫ್ರಾಂಚೈಸಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಮುಂಬೈ ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

Story first published: Friday, May 6, 2022, 11:30 [IST]
Other articles published on May 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+