Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಕೊಹ್ಲಿ 71ನೇ ಶತಕ ಬಾರಿಸುವವರೆಗೂ ಡೇಟ್ ಮಾಡುವುದಿಲ್ಲ ಎಂದ ಮಹಿಳಾ ಅಭಿಮಾನಿ

IPL 2022: Will not date until Kohlis 71st; Kohli Fan girls special banner for Virat goes viral

ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 70 ಶತಕಗಳ ಮೈಲುಗಲ್ಲನ್ನು ಮುಟ್ಟಿದ್ದು, ತಮ್ಮ ಮುಂದಿನ ಶತಕವನ್ನು ಯಾವಾಗ ಬಾರಿಸುತ್ತಾರೆ ಎಂದು ಅವರ ಅಭಿಮಾನಿ ಬಳಗ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಕೊಹ್ಲಿ ತಮ್ಮ ಕೊನೆಯ ಶತಕವನ್ನು ಬಾರಿಸಿ ಸುಮಾರು 2 ವರ್ಷಗಳೇ ಕಳೆದಿದ್ದು, ಕೊಹ್ಲಿ ಬ್ಯಾಟ್ ನಿಂದ 71ನೇ ಶತಕ ಯಾವಾಗ ಸಿಡಿಯಲಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಗೂ ಕೂಡ ಸೇರಿದೆ.

ಇನ್ನು ಪ್ರಸ್ತುತ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾಗವಹಿಸುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಮಹಿಳಾ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಮುಂದಿನ ಶತಕಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬೋರ್ಡ್ ಪ್ರದರ್ಶಿಸುತ್ತಿದ್ದ ಮಹಿಳಾ ಅಭಿಮಾನಿ ಅದರಲ್ಲಿ ವಿರಾಟ್ ಕೊಹ್ಲಿ 71ನೇ ಶತಕ ಬಾರಿಸುವವರೆಗೂ ನಾನು ಯಾರನ್ನೂ ಕೂಡ ಡೇಟ್ ಮಾಡುವುದಿಲ್ಲ ಎಂದು ಬರೆದುಕೊಂಡಿದ್ದರು.

ಹೀಗೆ ಮಹಿಳಾ ಅಭಿಮಾನಿಯೊಬ್ಬರು ಮಾಡಿದ್ದ ವಿಶೇಷ ಪ್ರಕಟಣೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 48 ರನ್ ಬಾರಿಸಿ ವಿವಾದಾತ್ಮಕ ತೀರ್ಪಿಗೆ ಔಟ್ ಆದರು. ಹೌದು, ಡಿವಾಲ್ದ್ ಬ್ರೆವಿಸ್ ಎಸೆದ ಎಸೆತದಲ್ಲಿ ಎಲ್ ಬಿಡಬ್ಲ್ಯು ಮನವಿಗೆ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಚೆಂಡು ಲೆಗ್ ಪ್ಯಾಡ್ ಮತ್ತು ಬ್ಯಾಟ್ ಎರಡಕ್ಕೂ ತಗುಲಿದ್ದ ಕಾರಣ ಇದು ಕ್ರಿಕೆಟ್ ನಿಯಮದ ಪ್ರಕಾರ ನಾಟ್ ಔಟ್ ಎಂದು ಕ್ರಿಕೆಟ್ ಪ್ರೇಮಿಗಳು ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ವಾದಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆಗಳಲ್ಲಿ ಈ ಕುರಿತಾಗಿ ಪೋಸ್ಟ್ ಹಾಕಿದ್ದು, ತಂಡವೂ ಸಹ ಅದೊಂದು ನಾಟ್ ಔಟ್ ಎಂಬುದನ್ನು ತನ್ನ ಅನುಯಾಯಿಗಳಿಗೆ ತಿಳಿಸಿದೆ.

KL Rahulಗೆ ಪಾಪ ಹೀಗಾಗಬಾರದಿತ್ತು | Oneindia Kannada

Story first published: Monday, April 11, 2022, 10:00 [IST]
Other articles published on Apr 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+