Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಚಹಾಲ್ ದಾಖಲೆ, ಸೀಸನ್‌ವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್

Yuzvendra chahal

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ಗೆಲ್ಲುವುದರ ಜೊತೆಗೆ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ.

ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯುತ್ತಿದ್ದಂತೆ ಚಹಾಲ್, ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗನನ್ನ ಹಿಂದಿಕ್ಕಿ ಐಪಿಎಲ್ 2022ರ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಜೊತೆಗೆ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು.

ಈ ದಾಖಲೆಯ ಜೊತೆಗೆ ಚಹಾಲ್ ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಸ್ಪಿನ್ನರ್ ಎಂಬ ವಿಶೇಷ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಯುಜವೇಂದ್ರ ಚಹಾಲ್ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯುವ ಮೂಲಕ ಸೀಸನ್‌ನಲ್ಲಿ 27ನೇ ವಿಕೆಟ್ ಪಡೆದರು.

ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ಸ್‌
27 ಯುಜವೇಂದ್ರ ಚಹಾಲ್ (2022) *
26 ಇಮ್ರಾನ್ ತಾಹೀರ್ (2019)
26 ವಹಿಂದು ಹಸರಂಗ (2022)
24 ಸುನಿಲ್ ನರೈನ್ (2012)
24 ಹರ್ಭಜನ್ ಸಿಂಗ್ (2013)

ಆರಂಭದಲ್ಲೇ ಎಡವಟ್ಟು ಮಾಡಿ ಗುಜರಾತ್ ಗೆ ಗೆಲ್ಲೊ ದಾರಿ ಬಿಟ್ಟುಕೊಟ್ಟ Sanju Samson |#cricket |Oneindia Kannada

Story first published: Sunday, May 29, 2022, 23:31 [IST]
Other articles published on May 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+