ಹಣದ ಮುಖ ನೋಡದೆ ಆರ್‌ಸಿಬಿ ಪರ ಆಡುತ್ತಿದ್ದೆ, ಆದರೆ..: ಮೊದಲ ಬಾರಿಗೆ ಬೇಸರ ಹೊರ ಹಾಕಿದ ಚಾಹಲ್

ಸುದೀರ್ಘ ಕಾಲದಿಂದ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ಯುಜುವೇಂದ್ರ ಚಾಹಲ್ ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ತಂಡದಿಂದ ಬೇರ್ಪಟ್ಟಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಹರಾಜಿನಲ್ಲಿ ಚಾಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೊಸ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿರುವ ಚಾಹಲ್ ಆರ್‌ಸಿಬಿ ತಂಡದಿಂದ ಬೇರ್ಪಟ್ಟಿರುವ ವಿಚಾರವಾಗಿ ಮೊದಲ ಬಾರಿ ಮಾತನಾಡಿದ್ದಾರೆ.
ಆರ್‌ಸಿಬಿ ತಂಡ ಅಚ್ಚರಿಯೆಂಬಂತೆ ಚಾಹಲ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ರೀಟೆನ್ಶನ್ ಮಾಡಿರಲಿಲ್ಲ. ನಂತರ ಹರಾಜಿನಲ್ಲಿಯೂ ಆರ್‌ಸಿಬಿ ಚಾಹಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನೂ ನಡೆಸಿರಲಿಲ್ಲ. ಇದೀಗ ಈ ವಿಚಾರವಾಗಿ ಯುಜುವೇಂದ್ರ ಚಾಹಲ್ ತಮ್ಮ ಮಾತನಾಡಿದ್ದು ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ.
ಬೇರೆ ತಂಡದ ಪರವಾಗಿ ಆಡುತ್ತೇನೆಂದು ಊಹಿಸಿಯೂ ಇರಲಿಲ್ಲ: ನಾನು ಆರ್‌ಸಿಬಿ ತಂಡದೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದೇನೆ. ಆರ್‌ಸಿಬಿ ಹೊರತುಪಡಿಸಿ ಬೇರೆ ತಂಡದ ಪರವಾಗಿ ಆಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಜನರು ಈಗಲೂ ನನ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾಕೆ ನೀವು ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಹಣವನ್ನು ಕೇಳಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ಸತ್ಯ ಬೇರೆಯೇ ಇದೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ರೀಟೆನ್ಶನ್ ಆಗಲು ಬಯಸುತ್ತೀರಾ ಎಂಬ ಬಗ್ಗೆ ಮಾತನ್ನೇ ಕೇಳಲಿಲ್ಲ: "ಸತ್ಯ ಏನೆಂದರೆ ಆರ್‌ಸಿಬಿ ನಿರ್ದೇಶಕ ಮೈಕ್ ಹಸನ್ ನನಗೆ ಕರೆ ಮಾಡಿ, ಯುಜಿ ಈ ಬಾರಿ ನಾವು ಮೂರು ರೀಟೆನ್ಶನ್ ಮಾತ್ರವೇ ಮಾಡಿಕೊಳ್ಳುತ್ತಿದ್ದೇವೆ(ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್) ಎಂದಿದ್ದರು. ಅವರು ನನ್ನಲ್ಲಿ ರೀಟೈನ್ ಆಗಲು ಬಯಸುತ್ತೀರಾ ಎಂದಾಗಲಿ ಅಥವಾ ಅವರು ರೀಟೈನ್ ಮಾಡಲು ಬಯಸುವುದಾಗಿ ಯಾವುದೇ ಮಾತನ್ನು ನನ್ನಲ್ಲಿ ಕೇಳಲಿಲ್ಲ. ಅವರು ಮೂರು ರೀಟೆನ್ಶನ್ ಬಗ್ಗೆ ಮಾತ್ರವೇ ನನ್ನಲ್ಲಿ ಮಾತನಾಡಿದ್ದರು. ನಿನ್ನನ್ನು ಆಕ್ಷನ್ ಮೂಲಕ ಸೇರ್ಪಡೆಗೊಳಿಸುತ್ತೇವೆ ಎಂದಿದ್ದರು. ಆದರೆ ಇದನ್ನು ಹೊರತುಪಡಿಸಿ ನಾನು ಆರ್‌ಸಿಬಿಯಲ್ಲಿ ಯಾವುದೇ ಹಣದ ಬೇಡಿಕೆಯನ್ನೂ ಇಟ್ಟಿಲ್ಲ ಹಾಗೂ ಅವರೂ ನನ್ನಲ್ಲಿ ಯಾವುದೇ ಆಫರ್‌ಅನ್ನು ಕೂಡ ನನ್ನ ಮುಂದೆ ಇಡಲಿಲ್ಲ. ಆದರೆ ನಾನು ಯಾವಾಗಲೂ ಆರ್‌ಸಿಬಿ ಅಭಿಮಾನಿಗಳಿಗೆ ನಿಷ್ಠಾವಂತನಾಗಿರುತ್ತೇನೆ. ಆರ್ಸಿಬಿ ಅಭಿಮಾನಿಗಳನ್ನು ಬಹಳ ಇಷ್ಟ ಪಡುತ್ತೇನೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ಚಾಹಲ್ ಕೊಳ್ಳಲು ಬಿಡ್ ಮಾಡಲೇ ಇಲ್ಲ ಆರ್‌ಸಿಬಿ: ಇನ್ನು ಕಳೆದ 8 ವರ್ಷಗಳಿಂದ ಆರ್‌ಸಿಬಿ ತಂಡದ ಪ್ರಮುಖ ಭಾಗವಾಗಿದ್ದರು ಯುಜುವೇಂದ್ರ ಚಾಹಲ್. ತಂಡ ಟ್ರಂಪ್‌ಕಾರ್ಡ್ ಸ್ಪಿನ್ನರ್ ಆಗೊ ಮಿಂಚಿದ್ದರು ಚಾಹಲ್. ಹೀಗಾಗಿ ಆರ್‌ಸಿಬಿ ಚಾಹಲ್ ಅವರನ್ನು ತಂಡಕ್ಕೆ ಮತ್ತೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಒಂದು ಬಾರಿಯೂ ಬಿಡ್ ಮಾಡದೆ ಮತ್ತೆ ಸೇರ್ಪಡೆಗೊಳಿಸುವ ಯಾವುದೇ ಪ್ರಯತ್ನವನ್ನೂ ಆರ್‌ಸಿಬಿ ಮಾಡದೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. 2 ಕೋಡಿ ಮೂಲ ಬೆಲೆ ಹೊಂದಿದ್ದ ಚಾಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ 6.50 ಕೋಟಿ ನೀಡಿ ಖರೀದಿಸಿತ್ತು.
ಆರ್ಆರ್ ಪರವಾಗಿ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದ ಚಾಹಲ್: ಇನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಚಾಹಲ್ ಅವರು ಈ ಬಾರಿ ಆರ್ಆರ್ ತಂಡದ ಪರವಾಗಿ ಕೂಡ ಆರ್‌ಸಿಬಿ ತಂಡದ ಪರವಾಗಿ ನೀಡಿದ ಪ್ರದರ್ಶನದಷ್ಟೇ ಪರಿಣಾಮಕಾರಿಯಾಗಿ ಆಡಲಿದ್ದೇನೆ ಎಂದಿದ್ದಾರೆ. "ಖಂಡಿತಾವಾಗಿಯೂ ಜರ್ಸಿ ಮಾತ್ರವೇ ಭಿನ್ನವಾಗಿರುತ್ತದೆ. ಅದೇ ಯುಜಿ ಈ ಬಾರಿಯೂ ಆಡಲಿದ್ದಾನೆ. ಅದೇ ರೀತಿಯ ವಿಕೆಟ್ ಪಡೆಯುವ ಪ್ರದರ್ಶನ ಹಾಗೂ ಸಂಭ್ರಮವನ್ನು ನೀವು ನನ್ನಿಂದ ನೀವು ನೀರೀಕ್ಷಿಸಬಹುದು. ಇದು ನನಗೆ ಹೊಸ ಪ್ರಯಾಣವಾಗಿದ್ದು ಈ ಪ್ರಯಾಣದ ಬಗ್ಗೆ ನಾನು ಸಾಕಷ್ಟು ಇಉತ್ಸುಕನಾಗಿದ್ದೇನೆ. ಎಲ್ಲವೂ ಈ ಹಿಂದಿನಂತೆಯೇ ಇರಲಿದ್ದು ಜರ್ಸಿ ಮಾತ್ರವೇ ಬದಲಾಗಲಿದೆ. ಹರಾಜಿನಲ್ಲಿ ಆರ್‌ಆರ್ ತಂಡ ನನ್ನ ಮೇಲೆ ನಂಬಿಕೆಯಿಟ್ಟು ಬಿಡ್ ಮಾಡಿದೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications