IPL 2023: 16ನೇ ಐಪಿಎಲ್ ಆವೃತ್ತಿ ಆರಂಭದ ದಿನಾಂಕ ಪಕ್ಕಾ?; ಈ ದಿನದಿಂದ ಅದ್ಧೂರಿ ಚಾಲನೆ

ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹಲವು ಆಟಗಾರರು ದಾಖಲೆ ಮೊತ್ತಕ್ಕೆ ಮಾರಾಟಗೊಂಡರು.
ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರ್ರಾನ್ 18.5 ಕೋಟಿ ರೂ. ದಾಖಲೆಯ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರರೆನಿಸಿದರು. ತದನಂತರ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ 17.50 ಕೋಟಿ ರೂ.ಗೆ ಎರಡನೇ ದುಬಾರಿ ಆಟಗಾರನಾಗಿ ಖರೀದಿಸಿತು.
ಇತರ ದೊಡ್ಡ ಖರೀದಿಗಳೆಂದರೆ ಚೆನ್ನೈ ಬೆನ್ ಸ್ಟೋಕ್ಸ್ ಅವರು ಸೂಪರ್ ಕಿಂಗ್ಸ್ ತಂಡಕ್ಕೆ 16.25 ಕೋಟಿ ರೂ.ಗೆ ಖರೀದಿಯಾದರು. ವೆಸ್ಟ್ ಇಂಡೀಸ್‌ನ ಬ್ಯಾಟರ್ ನಿಕೋಲಸ್ ಪೂರನ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 16 ಕೋಟಿ ರೂ.ಗೆ ಮಾರಾಟವಾದರು.
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 8.25 ಕೋಟಿ ರೂ. ಬೆಲೆಗೆ ಮಾರಾಟವಾದ ಮಯಾಂಕ್ ಅಗರ್ವಾಲ್ ಭಾರತದಿಂದ ಅತಿ ಹೆಚ್ಚು ಲಾಭ ಗಳಿಸಿದ ಆಟಗಾರನಾದರು.

ಏಪ್ರಿಲ್ 1ರಂದು ಐಪಿಎಲ್ ಲೀಗ್‌ಗೆ ಚಾಲನೆ
ಐಪಿಎಲ್ 2023 ಮಿನಿ ಹರಾಜಿನ ಮುಕ್ತಾಯದ ನಂತರ ಶ್ರೀಮಂತ ಕ್ರಿಕೆಟ್ ಲೀಗ್‌ನ ಪ್ರಾರಂಭದ ದಿನಾಂಕವನ್ನು ದೃಢೀಕರಿಸಲಾಗಿದೆ. ಇನ್‌ಸೈಡ್‌ಸ್ಪೋರ್ಟ್ ವರದಿಯ ಪ್ರಕಾರ, ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳಿಗೆ ಲೀಗ್ ಪ್ರಾರಂಭದ ಬಗ್ಗೆ ತಿಳಿಸಲು ಬಿಸಿಸಿಐ ಮೇಲ್ ಕಳಿಸಿದೆಯಂತೆ, ಆ ಮೇಲ್‌ನಲ್ಲಿ ಏಪ್ರಿಲ್ 1ರಂದು 16ನೇ ಆವೃತ್ತಿಯ ಐಪಿಎಲ್ ಲೀಗ್‌ಗೆ ಚಾಲನೆ ನೀಡಲಾಗುವುದು ಎಂದು ಬರೆಯಲಾಗಿದೆ ಎಂದು ತಿಳಿಸಿದೆ.

ಮಹಿಳಾ ಐಪಿಎಲ್ ಮಾರ್ಚ್ 26ರಂದು ಮುಕ್ತಾಯ
2023ರ ಐಪಿಎಲ್ ಒಂದು ವಾರ ವಿಳಂಬವಾಗಲಿದೆ, ಆದರೆ ಕಳೆದ ವರ್ಷದಂತೆ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಎರಡು ಫ್ರಾಂಚೈಸಿಗಳು ಹೇಳಿವೆ. ಮೊದಲು ಮಹಿಳಾ ಐಪಿಎಲ್‌ನ ದಿನಾಂಕಗಳ ಮಾಹಿತಿಯನ್ನು ಮೇಲ್‌ನಲ್ಲಿ ನೀಡಲಾಗಿದೆ. WIPL ಮಾರ್ಚ್ 3ರಂದು ಪ್ರಾರಂಭವಾಗಲಿದೆ ಮತ್ತು ಮಾರ್ಚ್ 26ರಂದು ಮುಕ್ತಾಯಗೊಳ್ಳಲಿದೆ.
ಮಹಿಳಾ ಐಪಿಎಲ್‌ಗಾಗಿ ಬಿಸಿಸಿಐ ಈಗಾಗಲೇ ಮಾಧ್ಯಮ ಹಕ್ಕುಗಳ ಟೆಂಡರ್ ಅನ್ನು ಬಿಡುಗಡೆ ಮಾಡಿದೆ ಆದರೆ ಅವರು ಮಂಡಳಿಯು ಇನ್ನೂ ಮಹಿಳಾ ಐಪಿಎಲ್ ಫ್ರಾಂಚೈಸಿಗಳಿಗೆ ಟೆಂಡರ್ ಅನ್ನು ಆಹ್ವಾನಿಸಿಲ್ಲ.

4.4 ಕೋಟಿ ರೂ. ಜೋಶುವಾ ಲಿಟಲ್ ಖರೀದಿಸಿದ ಗುಜರಾತ್ ಟೈಟನ್ಸ್
ತನ್ನ ಮೊದಲ ಋತುವಿನಲ್ಲಿಯೇ ಗುಜರಾತ್ ಟೈಟನ್ಸ್ ಹಾಲಿ ಐಪಿಎಲ್ ಚಾಂಪಿಯನ್ ಆಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಐಪಿಎಲ್ 2022ರ ಯಶಸ್ಸನ್ನು ಪುನರಾವರ್ತಿಸಲು ಎದುರು ನೋಡುತ್ತಿದೆ. ಶುಕ್ರವಾರ ನಡೆದ ಐಪಿಎಲ್ 2023 ಮಿನಿ ಹರಾಜಿನಲ್ಲಿ ಐರ್ಲೆಂಡ್ ಬೌಲರ್ ಜೋಶುವಾ ಲಿಟಲ್ ಅವರನ್ನು 4.4 ಕೋಟಿ ರೂ.ಗೆ ಖರೀದಿಸಿತು.
ವೇಗದ ಬೌಲರ್‌ಗಳನ್ನು ಇಷ್ಟಪಡುವ ಕೋಚ್ ಆಶಿಶ್ ನೆಹ್ರಾ ಅವರಿಂದ ಗುಜರಾತ್ ಟೈಟನ್ಸ್ಉತ್ತಮ ಯುವ ಪಡೆಯನ್ನು ಹೊಂದಿದೆ. ಜೋಶುವಾ ಲಿಟಲ್ ಇತ್ತೀಚೆಗೆ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಐಪಿಎಲ್ ತಂಡಕ್ಕೆ ಖರೀದಿಯಾದ ಮೊದಲ ಐರಿಶ್ ಆಟಗಾರನಾಗಿರುವ ಲಿಟಲ್ ಐಪಿಎಲ್ 2023ರಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ನೋಡಲು ಗುಜರಾತ್ ಟೈಟನ್ಸ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications