For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 5000 ರನ್ ಗಳಿಸಿದ 3 ಆಟಗಾರರು; ಇದರಲ್ಲಿ ಇಬ್ಬರು RCB ಸ್ಟಾರ್‌ಗಳು

ಸೋಮವಾರ, ಏಪ್ರಿಲ್ 3ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 5000 ರನ್ ಗಳಿಸಿದವರ ಗಣ್ಯರ ಪಟ್ಟಿಗೆ ಸೇರಿಕೊಂಡರು ಮತ್ತು ಈ ಸಾಧನೆ ಮಾಡಿದ 7ನೇ ಆಟಗಾರನಾದರು.

ಎಂಎಸ್ ಧೋನಿ ಐಪಿಎಲ್‌ನಲ್ಲಿ 5000 ರನ್ ಗಳಿಸಲು 208 ಇನ್ನಿಂಗ್ಸ್ ಮತ್ತು 3691 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಸಿಎಸ್‌ಕೆ ಮಾಜಿ ಆಟಗಾರ ಸುರೇಶ್ ರೈನಾ ನಂತರ ಎಸೆತಗಳ ಲೆಕ್ಕದಲ್ಲಿ 5004 ರನ್ ಪೂರೈಸಿದ 2ನೇ ವೇಗದ ಭಾರತೀಯನಾದರು.

 IPL 2023: 3 Fastest Players Including Virat Kohli and ABD To Score 5000 Runs In IPL History;

ಐಪಿಎಲ್ ಇತಿಹಾಸದಲ್ಲಿ 5000 ರನ್ ಕಲೆಹಾಕಿದ ಹಲವು ಬ್ಯಾಟ್ಸ್‌ಮನ್‌ಗಳಿದ್ದು, ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲಿ ಅತಿ ವೇಗವಾಗಿ 5000 ರನ್‌ಗಳನ್ನು ಗಳಿಸಿದ 3 ವೇಗದ ಬ್ಯಾಟರ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಡೇವಿಡ್ ವಾರ್ನರ್ - 135 ಇನ್ನಿಂಗ್ಸ್
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಬ್ಯಾಟರ್ ಎನಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್, ಅತ್ಯಂತ ವೇಗವಾಗಿ 5000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

 IPL 2023: 3 Fastest Players Including Virat Kohli and ABD To Score 5000 Runs In IPL History;

42.11ರ ಸರಾಸರಿ ಮತ್ತು 140.42 ಸ್ಟ್ರೈಕ್ರೇಟ್‌ನಲ್ಲಿ 5937 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 56 ಅರ್ಧ ಶತಕಗಳು ಒಳಗೊಂಡಿವೆ. ಡೇವಿಡ್ ವಾರ್ನರ್ ತಮ್ಮ 135 ಇನ್ನಿಂಗ್ಸ್‌ನಲ್ಲಿ ಕೇವಲ 33 ಎಸೆತಗಳಲ್ಲಿ ಅಜೇಯ 47 ರನ್ ಗಳಿಸುವ ಮೂಲಕ 5000 ರನ್‌ಗಳ ಗಡಿ ದಾಟಿದರು.

ವಿರಾಟ್ ಕೊಹ್ಲಿ - 157 ಇನ್ನಿಂಗ್ಸ್
ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಆಡಿದ 216 ಇನ್ನಿಂಗ್ಸ್‌ಗಳಲ್ಲಿ 36.64 ಸರಾಸರಿ ಮತ್ತು 129.50 ಸ್ಟ್ರೈಕ್‌ರೇಟ್‌ನಲ್ಲಿ 6706 ರನ್ ಗಳಿಸಿದ್ದಾರೆ.

 IPL 2023: 3 Fastest Players Including Virat Kohli and ABD To Score 5000 Runs In IPL History;

2019ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ 5000 ರನ್ ಮೈಲಿಗಲ್ಲನ್ನು ತಲುಪಿದರು. ಈ ಬಾರಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.

ಎಬಿ ಡಿವಿಲಿಯರ್ಸ್ - 161 ಇನ್ನಿಂಗ್ಸ್
ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಆರ್‌ಸಿಬಿ ತಂಡದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಒಬ್ಬರು. ಐಪಿಎಲ್ ಪಂದ್ಯಾವಳಿಯಲ್ಲಿ 5000 ರನ್ ಗಳಿಸಲು 161 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಒಟ್ಟಾರೆ 170 ಇನ್ನಿಂಗ್ಸ್‌ಗಳಲ್ಲಿ 39.70 ಸರಾಸರಿ ಮತ್ತು 151.68ರ ಸ್ಟ್ರೈಕ್ ರೇಟ್‌ನೊಂದಿಗೆ 5162 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು 40 ಅರ್ಧ ಶತಕಗಳು ಒಳಗೊಂಡಿವೆ.

 IPL 2023: 3 Fastest Players Including Virat Kohli and ABD To Score 5000 Runs In IPL History;

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಹಮದಾಬಾದ್ ಸ್ಟೇಡಿಯಂನಲ್ಲಿ ಕೇವಲ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ 5000 ರನ್‌ಗಳ ಮೈಲಿಗಲ್ಲು ಸ್ಥಾಪಿಸಿದರು. ಪ್ರಸಕ್ತ ಋತುವಿನ ಆರಂಭಕ್ಕೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಮತ್ತೊಬ್ಬ ಲೆಜೆಂಡ್ ಕ್ರಿಸ್ ಗೇಲ್ ಅವರೊಂದಿಗೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು.

Story first published: Tuesday, April 4, 2023, 23:12 [IST]
Other articles published on Apr 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+