For Quick Alerts
ALLOW NOTIFICATIONS  
For Daily Alerts
 

IPL 2023: ಬರೋಬ್ಬರಿ 469 ರನ್; ಐಪಿಎಲ್‌ನ ಈ ಒಂದೇ ಪಂದ್ಯದಲ್ಲಿ ಹರಿದಿತ್ತು ರನ್ ಪ್ರವಾಹ!

IPL 2023: 469 biggest runs recorded in Chennai Super Kings vs Rajasthan Royals match in 2010 IPL

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ಈ ಬಾರಿಯ ಪಂದ್ಯಗಳಲ್ಲಿ ರನ್ ಮಳೆ ದೊಡ್ಡ ಮಟ್ಟದಲ್ಲಿಯೇ ಹರಿಯುತ್ತಿದೆ. ಈಗಾಗಲೇ ಹಲವು ಪಂದ್ಯಗಳಲ್ಲಿ 200 ರನ್‌ಗಳ ಗಡಿಯನ್ನು ತಂಡಗಳು ದಾಟಿ ಅಬ್ಬರಿಸಿವೆ.

ಇನ್ನು ನಿನ್ನೆ ( ಏಪ್ರಿಲ್ 28 ) ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಸಹ ಅಬ್ಬರದ ರನ್ ಹೊಳೆ ಹರಿದಿದೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಬೃಹತ್ ಗುರಿಯನ್ನು ನೀಡಿತು.

ಆದರೆ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲ್ಔಟ್ ಆದ ಪಂಜಾಬ್ ಕಿಂಗ್ಸ್ 56 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಆಟಗಾರರು ಕಲೆಹಾಕುತ್ತಿದ್ದ ರನ್ ಕಂಡಿದ್ದ ಕ್ರಿಕೆಟ್ ಪ್ರೇಮಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 263 ರನ್‌ಗಳ ದಾಖಲೆ ನೆಲಸಮ ಆಗುವುದು ಪಕ್ಕಾ ಎನ್ನುತ್ತಿದ್ದರು. ಆದರೆ ಅಂತಿಮ ಹಂತದಲ್ಲಿ ರನ್ ವೇಗ ಹೆಚ್ಚೇನೂ ಇರದಿದ್ದ ಕಾರಣ ತಂಡ ಆ ದಾಖಲೆ ಮುರಿಯುವಲ್ಲಿ ವಿಫಲಗೊಂಡಿತು.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 263 ರನ್‌ಗಳ ದಾಖಲೆ ಹಾಗೆಯೇ ಉಳಿದುಕೊಂಡಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಹರಿದುಬಂದಿದ್ದ ರನ್‌ಗಿಂತ ನಿನ್ನೆಯ ಪಂದ್ಯದಲ್ಲಿಯೇ ಹೆಚ್ಚು ರನ್ ಹರಿದುಬಂದಿತ್ತು. ಹೌದು, ಲಕ್ನೋ ಸೂಪರ್ ಜೈಂಟ್ಸ್ 257 ರನ್ ಹಾಗೂ ಪಂಜಾಬ್ ಕಿಂಗ್ಸ್ 201 ರನ್ ಗಳಿಸಿದ ಕಾರಣ ಎರಡೂ ತಂಡಗಳು ಸೇರಿ 258 ರನ್ ಈ ಪಂದ್ಯದಲ್ಲಿ ಹರಿದುಬಂತು.

ಆದರೆ ಇದಕ್ಕಿಂತ ಹೆಚ್ಚಿನ ರನ್ ಹರಿದುಬಂದ ಪಂದ್ಯವೊಂದಿದೆ. ಒಂದೇ ಪಂದ್ಯದಲ್ಲಿ ಎರಡೂ ತಂಡಗಳೂ ಸೇರಿ 469 ರನ್‌ಗಳು ಹರಿದುಬಂದಿದ್ದ ಪಂದ್ಯವದು. 2010ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದಾಗ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತ್ತು. ಪ್ರತಿಯಾಗಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಈ ಮೂಲಕ ಪಂದ್ಯದಲ್ಲಿ ಒಟ್ಟು 469 ರನ್ ದಾಖಲಾಗಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಹರಿದುಬಂದ ಅತಿಹೆಚ್ಚು ರನ್ ಆಗಿದೆ.

2018ರ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತ್ತು. ಪ್ರತಿಯಾಗಿ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತ್ತು. ಈ ಮೂಲಕ ಈ ಪಂದ್ಯದಲ್ಲಿ ಎರಡೂ ತಂಡಗಳು ಸೇರಿದಂತೆ 459 ರನ್ ಹರಿದುಬಂದಿತ್ತು.

2020ರ ಐಪಿಎಲ್‌ನಲ್ಲಿ ಶಾರ್ಜಾದಲ್ಲಿ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಪ್ರತಿಯಾಗಿ ರಾಜಸ್ಥಾನ್ ರಾಯಲ್ಸ್ 19.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತ್ತು. ಈ ಮೂಲಕ ಈ ಪಂದ್ಯದಲ್ಲಿ 449 ರನ್‌ಗಳ ಹೊಳೆ ಹರಿದಿತ್ತು.

Story first published: Saturday, April 29, 2023, 10:45 [IST]
Other articles published on Apr 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+