Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಈ ತಂಡದ ಬೌಲಿಂಗ್ ಅತ್ಯುತ್ತಮವಾಗಿದೆ ಎಂದು ಆಕಾಶ್ ಚೋಪ್ರಾ

IPL 2023: Aakash Chopra Praises Delhi Capitals Formidable Bowling Department Ahead of IPL 2023

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿವೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಂಡದಲ್ಲಿ ಹಲವು ಬದಲಾವಣೆ ಮಾಡಿದ್ದು, ಉತ್ತಮ ತಂಡವಾಗಿ ಕಾಣುತ್ತಿದೆ.

ಆಕಾಶ್ ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಮಾತನಾಡಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2022ರ ಐಪಿಎಲ್‌ ಹರಾಜಿನಲ್ಲಿ 10.75 ಕೋಟಿ ರುಪಾಯಿ ನೀಡಿ ಶಾರ್ದೂಲ್ ಠಾಕೂರ್ ಅವರನ್ನು ಖರೀದಿ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2023ರ ಐಪಿಎಲ್‌ಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆ ಕ್ಯಾಪಿಟಲ್ಸ್ ಟ್ರೇಡ್ ಮಾಡಿದೆ.

ಶಾರ್ದೂಲ್ ಠಾಕೂರ್ ಅವರನ್ನು ಕೆಕೆಆರ್ ತಂಡಕ್ಕೆ ನೀಡಿ ಅಮನ್ ಖಾನ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಈ ಮೂಲಕ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಶಾಂತ್ ಶರ್ಮಾ ಮತ್ತು ಮುಖೇಶ್ ಕುಮಾರ್ ಅವರನ್ನು ಖರೀದಿ ಮಾಡಿದ್ದಾರೆ.

IPL 2023: Aakash Chopra Praises Delhi Capitals Formidable Bowling Department Ahead of IPL 2023

ಅತ್ಯುತ್ತಮ ಬೌಲಿಂಗ್ ದಾಳಿ ವಿಭಾಗ

ಜಿಯೋ ಸಿನಿಮಾದಲ್ಲಿನ "ಆಕಾಶವಾಣಿ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಬ್ಬರು ಸ್ಪಿನ್ನರ್ ಗಳನ್ನು ಒಳಗೊಂಡಂತೆ ದೆಹಲಿ ಕ್ಯಾಪಿಟಲ್ಸ್ ಸುಸಜ್ಜಿತ ಬೌಲಿಂಗ್ ದಾಳಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

"ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಅಸಾಧಾರಣವಾಗಿ ಕಾಣುತ್ತದೆ. ಬೌಲಿಂಗ್ ವಿಭಾಗದಲ್ಲಿ ಯಾವುದೇ ದೌರ್ಬಲ್ಯ ನನಗೆ ಕಾಣಿಸುತ್ತಿಲ್ಲ. ಕಳೆದ ಆವೃತ್ತಿಯಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸಾಕಷ್ಟು ವಿಕೆಟ್ ಪಡೆದಿದ್ದರು. ಅವರು ಈ ಬಾರಿ ಕೂಡ ಉತ್ತಮವಾಗಿ ಬೌಲಿಂಗ್ ಮಾಡಬಹುದು" ಎಂದು ಹೇಳಿದರು.

ಬ್ಯಾಕ್‌ಅಪ್ ಸ್ಪಿನ್-ಬೌಲಿಂಗ್ ಆಯ್ಕೆಗಳೊಂದಿಗೆ ಡೆಲ್ಲಿಕ್ಯಾಪಿಟಲ್ಸ್ ಅತ್ಯುತ್ತಮ ವೇಗದ ಬೌಲಿಂಗ್ ಲೈನ್‌ಅಪ್ ಅನ್ನು ಹೊಂದಿವೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಆನ್ರಿಚ್ ನೊಕಿಯಾ ಫಿಟ್ ಆಗಿದ್ದು, ಮೊದಲನ ಪಂದ್ಯದಿಂದಲೇ ಆಯ್ಕೆಗೆ ಲಭ್ಯವಿದ್ದಾರೆ.

ಮುಸ್ತಫಿಜುರ್ ರೆಹಮಾನ್, ಲುಂಗಿ ಎನ್‌ಗಿಡಿ, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಕಮಲೇಶ್ ನಾಗರಕೋಟಿ, ಮುಖೇಶ್ ಕುಮಾರ್ ಮತ್ತು ಇಶಾಂತ್ ಶರ್ಮಾರಂತಹ ಅತ್ಯುತ್ತಮ ವೇಗದ ಬೌಲಿಂಗ್ ವಿಭಾಗವಿದೆ. ಇವರ ಜೊತೆಗೆ ಪ್ರವೀಣ್ ದುಬೆ, ವಿಕಿ ಓಸ್ತ್ವಾಲ್ ಮತ್ತು ಅಮಾನ್ ಖಾನ್ ಕೂಡ ಒದ್ದಾರೆ. ಈ ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ.

IPL 2023: Aakash Chopra Praises Delhi Capitals Formidable Bowling Department Ahead of IPL 2023

ಆನ್ರಿಚ್ ನೋಕಿಯಾ ತಂಡದ ದೊಡ್ಡ ಆಸ್ತಿ

"ಶಾರ್ದೂಲ್ ಠಾಕೂರ್ ತಂಡದಲ್ಲಿ ಇದ್ದರೂ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಟ್ಟುಕೊಟ್ಟರು. ಈ ಆನ್ರಿಚ್ ನೊಕಿಯಾ ಫಿಟ್ ಆಗಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಆಡಲು ಸಜ್ಜಾಗಿದ್ದಾರೆ. ಜಸ್ಪ್ರೀತಾ ಬುಮ್ರಾ ನಂತರ ಅವರು ನನ್ನ ನೆಚ್ಚಿನ ಟಿ20 ಬೌಲರ್. ಆತ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ನೊಕಿಯಾ ಕೇವಲ ಆರು ಪಂದ್ಯಗಳನ್ನು ಆಡಿದರು. ಅವರು ಒಂಬತ್ತು ವಿಕೆಟ್‌ಗಳನ್ನು ಪಡೆದರೂ, ಅತ್ಯುತ್ತಮವಾಗಿ ಫಿಟ್ ಆಗಿರಲಿಲ್ಲ, ಪ್ರತಿ ಓವರ್‌ಗೆ ಸರಾಸರಿ 9.71 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Story first published: Sunday, March 26, 2023, 15:45 [IST]
Other articles published on Mar 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+