For Quick Alerts
ALLOW NOTIFICATIONS  
For Daily Alerts
 

IPL 2023: ಹಾರ್ದಿಕ್ ಪಾಂಡ್ಯ ಹಾಗೂ ಆಶಿಶ್ ನೆಹ್ರಾಗೆ ತಂಡದ ಯಶಸ್ಸಿನ ಶ್ರೇಯಸ್ಸು ನೀಡಿದ ಕುಂಬ್ಳೆ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದೆ. ತಂಡದ ಈ ಸಾಧನೆಯ ಬಗ್ಗೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮಾತನಾಡಿದ್ದು ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಆಶಿಶ್ ನೆಹ್ರಾ ತಂಡದ ಈ ಯಶಸ್ಸಿಗೆ ಕಾರಣ ಎಂದು ಕೊಂಡಾಡಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿದ್ದ ಜಿಟಿ ಈ ಬಾರಿ ಮತ್ತೇ ಅಂಥಾದ್ಧೇ ಸಾಧನೆ ಮಾಡುವ ಸನಿಹದಲ್ಲಿದೆ.

"ಈ ವರ್ಷ ಅವರು ಕಳೆದ ವರ್ಷ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದಲೇ ಆರಂಭಿಸಿದ್ದಾರೆ. ಅದಕ್ಕಾಗಿ ಅದರ ಶ್ರೇಯಸ್ಸು ನಾಯಕ ಹಾರ್ದಿಕ್ ಪಾಂಡ್ಯಗೆ ಹಾಗೂ ಕೋಚ್ ಆಶಿಶ್ ನೆಹ್ರಾಗೆ ಸಲ್ಲಬೇಕು. ಉಳಿದ ಆಟಗಾರರು ಕೂಡ ಈ ಯಶಸ್ಸಿನಲ್ಲಿ ಅಷ್ಟೇ ಉತ್ತಮವಾದ ಕೊಡುಗೆ ನೀಡಿದ್ದಾರೆ" ಎಂದು ಕೊಂಡಾಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ನಾಯಕ ನಾಯಕ ಅನಿಲ್ ಕುಂಬ್ಳೆ.

IPL 2023: Anil Kumble praises Gujarat Titans performance and give Credit to Hardik Pandya and Ashish Nehra

"ಆಟಗಾರರು ಕೂಡ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಜೋಶ್ ಲಿಟಲ್ ಹಾಗೂ ನೂರ್ ಅಹ್ಮದ್ ಸೇರ್ಪಡೆ ತಂಡಕ್ಕೆ ಬಲ ನೀಡಿದೆ. ಈ ಇಬ್ಬರು ಆಟಗಾಋರು ಇಂಪಾಕ್ಟ್ ಪ್ಲೇಯರ್ ನಿಯಮದಿಂದಾಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಕೂಡ ತಮ್ಮ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ" ಎಂದು ಅನಿಲ್ ಕುಂಬ್ಳೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಮತ್ತೊಂದೆಡೆ ಗುಜರಾತ್ ಟೈಟನ್ಸ್ ತಂಡದ ಹಾದಿ ಆರಂಭದಿಂದಲೇ ಅದ್ಭುತವಾಗಿತ್ತು. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಜಿಟಿ ಅದೇ ಪ್ರದರ್ಶನವನ್ನು ಈ ಬಾರಿಯ ಐಪಿಎಲ್‌ನಲ್ಲಿಯೂ ನೀಡುವಲ್ಲಿ ಆರಂಭದಿಂದಲೂ ಯಶಸ್ವಿಯಾಯಿತು. ಟೂರ್ನಿಯ ಬಹುತೇಕ ಅವಧಿಯಲ್ಲಿ ಜಿಟಿ ತಂಡ ನಂಬರ್ 1 ತಂಡವಾಗಿಯೇ ಇತ್ತು ಮಾತ್ರವಲ್ಲದೆ ನಂಬರ್ 1 ತಂಡವಾಗಿಯೇ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು.

ಸಿಎಸ್‌ಕೆ ವಿರುದ್ಧ ಮೊದಲ ಕ್ವಾಲಿಫಯರ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಎರಡನೇ ಕ್ವಾಲಿಫಯರ್‌ನಲ್ಲಿ ಮುಂಬೈ ತಂಡವನ್ನು ಎದುರಿಸಿದ ಗುಜರಾತ್ ಟೈಮನ್ಸ್ ತಂಡಕ್ಕೆ ಮತ್ತೊಮ್ಮೆ ಶುಬ್ಮನ್ ಗಿಲ್ ಆಸರೆಯಾದರು.ಶುಬ್ಮನ್ ಗಿಲ್ ಅವರ ಅಮೋಘ 129 ರನ್‌ಗಳ ಕೊಡುಗೆಯ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬರೊಬ್ಬರಿ 234 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಈ ಮಹತ್ವದ ಪಂದ್ಯದಲ್ಲಿ ಬೃಹತ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರವಾಗಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಕ್ಯಾಮರೂನ್ ಗ್ರೀನ್ ಮಾತ್ರವೇ ಉತ್ತಮ ಪ್ರದರ್ಶಣ ನೀಡಲು ಯಶಸ್ವಿಯಾದರು. 171 ರನ್‌ಗಳಿಗೆ ಮುಂಬೈ ಆಲೌಟ್ ಆಗುವ ಮೂಲಕ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಅಧಿಕೃತವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಐಪಿಎಲ್ 16ನೇ ಆವೃತ್ತಿಯ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿದ್ದು ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಲು ಕಾರಣವಾಗಿದ್ದಾರೆ. ಕೇವಲ 60 ಎಸೆತಗಳಲ್ಲಿ ಶುಬ್ಮನ್ ಗಿಲ್ 129 ರನ್‌ಗಳನ್ನು ಸಿಡಿಸುವ ಮೂಲಕ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಮುಂಬೈ ಇಂಡಿಯನ್ಸ್‌ಗೆ 234 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿತು. ಹೀಗಾಗಿ ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 62 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.

Story first published: Saturday, May 27, 2023, 16:37 [IST]
Other articles published on May 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+