For Quick Alerts
ALLOW NOTIFICATIONS  
For Daily Alerts
 

IPL 2023: ಗಾಯಾಳು ಮಯಾಂಕ್ ಯಾದವ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡ ಅರ್ಪಿತ್ ಗುಲೇರಿಯಾ

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತು ಆರಂಭವಾಗಿ ಎರಡು ವಾರಗಳು ಕಳೆದಿದ್ದು, ಹಲವು ಅಚ್ಚರಿಯ ಹಾಗೂ ರೋಮಾಂಚನಕಾರಿ ಪಂದ್ಯಗಳಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಈ ಬಾರಿ ಕೆಲವು ತಂಡಗಳಿಗೆ ಆಟಗಾರರ ಗಾಯದ ಸಮಸ್ಯೆಯೂ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ.

ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಹಲವು ತಂಡಗಳ ಆಟಗಾರರು ಪಂದ್ಯಾವಳಿ ಮುನ್ನವೇ ಗಾಯದ ಸಮಸ್ಯೆಯಿಂದ ಸಂಪೂರ್ಣ ಹೊರಗುಳಿದರು. ಇದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಹೊರತಾಗಿಲ್ಲ.

IPL 2023: Arpit Guleria Joins Lucknow Super Giants Instead Of Injured Mayank Yadav

ಇದೀಗ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ತಮ್ಮ ಗಾಯಾಳು ಮಯಾಂಕ್ ಯಾದವ್ ಬದಲಿಗೆ ಐಪಿಎಲ್ 2023ರ ತನ್ನ ಉಳಿದ ಪಂದ್ಯಗಳಿಗಾಗಿ ಅರ್ಪಿತ್ ಗುಲೇರಿಯಾ ಅವರನ್ನು ಆಯ್ಕೆ ಮಾಡಿದೆ. ಮಯಾಂಕ್ ಯಾದವ್ ಅವರ ಗಾಯದ ಸ್ವರೂಪ ಮತ್ತು ಅಪ್ಡೇಟ್ ಇನ್ನೂ ಸ್ಪಷ್ಟಪಡಿಸಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಈ ಯುವ ಬೌಲರ್ ಅರ್ಪಿತ್ ಗುಲೇರಿಯಾ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗಳಿಗೆ ಸೇರ್ಪಡೆ ಮಾಡಿಕೊಂಡಿದೆ.

ಅರ್ಪಿತ್ ಗುಲೇರಿಯಾ ಅವರು ಹಿಮಾಚಲ ಪ್ರದೇಶದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಸ್ತುತ ಸರ್ವಿಸಸ್‌ ತಂಡಕ್ಕಾಗಿ ಆಡುತ್ತಿದ್ದಾರೆ. ಅರ್ಪಿತ್ ಗುಲೇರಿಯಾ ಈವರೆಗೆ 15 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 12 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 44 ಮತ್ತು 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IPL 2023: Arpit Guleria Joins Lucknow Super Giants Instead Of Injured Mayank Yadav

ಲಕ್ನೋ ಸೂಪರ್ ಜೈಂಟ್ಸ್ ತಂಡ 2023ರ ಐಪಿಎಲ್‌ನಲ್ಲಿ ಅಡಿದ ನಾಲ್ಕು ಪಂದ್ಯಗಳಿಂದ ಮೂರು ಪಂದ್ಯಗಳನ್ನು ಗೆದ್ದು, 6 ಅಂಕಗಳೊಂದಿಗೆ 10 ತಂಡಗಳ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಏಪ್ರಿಲ್ 15ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈ ಪಂದ್ಯವು ಶನಿವಾರ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.

ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದರೆ, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಐಪಿಎಲ್ 2023ರ ಅಭಿಯಾನವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 50 ರನ್‌ಗಳ ಗೆಲುವಿನೊಂದಿಗೆ ಆರಂಭಿಸಿತು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ವೇಗದ ಬೌಲರ್ ಮಾರ್ಕ್ ವುಡ್ ಈ ಋತುವಿನಲ್ಲಿಯೇ ಐದು ವಿಕೆಟ್ ಪಡೆದ ಮೊದಲ ಬೌಲರ್ ಆದರು. ಇನ್ನು ಐಪಿಎಲ್‌ಗೆ ಪದಾರ್ಪಣೆ ಮಾಡಿದ ಕೈಲ್ ಮೇಯರ್ಸ್ 38 ಎಸೆತಗಳಲ್ಲಿ 73 ರನ್ ಗಳಿಸಿ ತ್ವರಿತ ಪ್ರಭಾವ ಬೀರಿದರು.

ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡವು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್‌ನಲ್ಲಿ ಮುಖಭಂಗ ಅನುಭವಿಸಿತು. ನಂತರದ ಪಂದ್ಯದಲ್ಲಿ ಪುಟಿದೆದ್ದು ಬಂದ ಕೆಎಲ್ ರಾಹುಲ್ ಪಡೆ, ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸತತವಾಗಿ ಗೆದ್ದುಕೊಂಡಿತು.

Story first published: Saturday, April 15, 2023, 12:44 [IST]
Other articles published on Apr 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+