23 ಎಸೆತಗಳಲ್ಲಿ 66 ರನ್ ಚಚ್ಚಿಸಿಕೊಂಡ ಅರ್ಷ್‌ದೀಪ್; ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ನೀಡಿದ 5 ಬೌಲರ್‌ಗಳಿವರು!

ನಿನ್ನೆ ( ಮೇ 3 ) ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಮುಂಬೈ ಇಂಡಿಯನ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಚಚ್ಚಿ ಭರ್ಜರಿ ಗೆಲುವನ್ನು ಕಂಡಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಏರಿಕೆಯನ್ನು ಕಂಡಿದ್ದು, ಪ್ಲೇಆಫ್ ರೇಸ್‌ನಲ್ಲಿ ಉಳಿದ ತಂಡಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬಂದಿದೆ.
ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಮತ್ತು ತಿಲಕ್ ವರ್ಮಾ ಭರ್ಜರಿ ಫಿನಿಷಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಗೆಲುವಿನ ಕೇಕೆ ಹಾಕಿದೆ. ಇನ್ನು ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ ನಡೆದಿದ್ದಾಗ ಪಂಜಾಬ್ ಕಿಂಗ್ಸ್ ನೀಡಿದ್ದ 215 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಗೆಲುವಿನ ಕನಸ್ಸಿಗೆ ತಣ್ಣೀರೆರಚಿದ್ದ ಅರ್ಷ್‌ದೀಪ್ ಸಿಂಗ್ ಈ ಬಾರಿಯ ಪಂದ್ಯದಲ್ಲಿ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದರು.
ಹೌದು, ಕಳೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 16 ರನ್ ಬೇಕಿದ್ದಾಗ ಚೆಂಡನ್ನು ಹಿಡಿದು ಕಣಕ್ಕಿಳಿದಿದ್ದ ಅರ್ಷ್‌ದೀಪ್ ಸಿಂಗ್ ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ರೀತಿಯ ಸ್ಪೋಟಕ ಆಟಗಾರರಿಗೆ ರನ್ ನೀಡದೇ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ತಿಲಕ್ ವರ್ಮಾ ಸೇರಿದಂತೆ ಎರಡು ವಿಕೆಟ್‌ಗಳನ್ನು ಸ್ಟಂಪ್ ಮುರಿದು ಹಾಕುವ ಮುನ್ನ ಪಡೆದಿದ್ದ ಅರ್ಷ್‌ದೀಪ್ ಸಿಂಗ್ ಕೇವಲ ಎರಡು ರನ್ ನೀಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು.
ಹೀಗೆ ಐಪಿಎಲ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಫೈನಲ್ ಓವರ್ ಮಾಡಿದ್ದ ಅರ್ಷ್‌ದೀಪ್ ಸಿಂಗ್ ನಿನ್ನೆ ಅದೇ ತಂಡದ ವಿರುದ್ಧ 3.5 ಓವರ್ ಎಸೆದು 66 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದಾರೆ. ತಿಲಕ್ ವರ್ಮಾ 18 ಓವರ್‌ನಲ್ಲಿ ಎರಡು ಸಿಕ್ಸರ್, ಒಂದು ಫೋರ್ ಹಾಗೂ ಕೊನೆಯ ಓವರ್‌ನಲ್ಲಿ 102 ಸಿಕ್ಸರ್ ಚಚ್ಚುವ ಮೂಲಕ ಕಳೆದ ಪಂದ್ಯದ ಸೇಡನ್ನೂ ಸಹ ತೀರಿಸಿಕೊಂಡರು.
ಹೀಗೆ ಸಿಕ್ಕಾಪಟ್ಟೆ ದುಬಾರಿಯಾದ ಓವರ್ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಹಾಗಿದ್ದರೆ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ನೀಡಿರುವ ಐವರು ಬೌಲರ್‌ಗಳು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಬಸಿಲ್ ತಂಪಿ - ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - 4 ಓವರ್‌ಗಳಲ್ಲಿ 70 ರನ್
2. ಯಶ್ ದಯಾಳ್ - ಗುಜರಾತ್ ಟೈಟನ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ - 4 ಓವರ್‌ಗಳಲ್ಲಿ 69 ರನ್
3. ಇಶಾಂತ್ ಶರ್ಮಾ - ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ - 4 ಓವರ್‌ಗಳಲ್ಲಿ 66 ರನ್
4. ಮುಜಿಬ್ ಉರ್ ರಹಮಾನ್ - ಕಿಂಗ್ಸ್ ಇಲೆವೆನ್ ಪಂಜಾಬ್ vs ಸನ್ ರೈಸರ್ಸ್ ಹೈದರಾಬಾದ್ 4 ಓವರ್‌ಗಳಲ್ಲಿ 66 ರನ್
5. ಅರ್ಷ್‌ದೀಪ್ ಸಿಂಗ್ - ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ - 3.5 ಓವರ್‌ಗಳಲ್ಲಿ 66 ರನ್
ಹೀಗೆ ದುಬಾರಿ ಎನಿಸಿಕೊಂಡ ಅರ್ಷ್‌ದೀಪ್ ಸಿಂಗ್ ಓವರ್‌ನಲ್ಲಿ ಇನ್ನೂ ಒಂದು ಎಸೆತ ಬಾಕಿ ಉಳಿದುಕೊಂಡಿದ್ದು, ಆ ಎಸೆತವನ್ನೂ ಬೌಲಿಂಗ್ ಮಾಡಿ ಸಿಕ್ಸರ್ ಬಾರಿಸಿಕೊಂಡಿದ್ದರೆ ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೌಲರ್ ಎಂಬ ಕೆಟ್ಟ ದಾಖಲೆ ಬರೆಯುತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications