
ಫಾಫಾ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಕಣ್ಣು
ಎನ್ ಜಗದೀಶನ್ 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕಾಗಿ ತಮ್ಮ ಚೊಚ್ಚಲ ಐಪಿಎಲ್ ಪ್ರವೇಶವನ್ನು ಮಾಡಿದರು. ಆ ವೇಳೆ ಬ್ಯಾಟ್‌ನಲ್ಲಿ ಸ್ಥಿರವಾದ ರನ್ ಗಳಿಸಲಿಲ್ಲ. ಈ ವರ್ಷದ ಹರಾಜಿಗೂ ಮುನ್ನ ಅವರನ್ನು ಸಿಎಸ್‌ಕೆ ತಂಡ ಬಿಡುಗಡೆಗೊಳಿಸಿತ್ತು. 20 ಲಕ್ಷ ರೂ.ಗಳ ಮೂಲ ಬೆಲೆಯೊಂದಿಗೆ ಖರೀದಿಸಿದ ಹಣಕ್ಕೆ ಮೌಲ್ಯಯುತ ಆಟಗಾರನಾಗುವ ಭರವಸೆಯಂತೂ ಇದೆ.
ಶ್ರೀಮಂತ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಕೆಲವು ಅತ್ಯುತ್ತಮ ಬ್ಯಾಟರ್‌ಗಳನ್ನು ಹೊಂದಿರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್ ಮತ್ತು ಕ್ರಿಸ್ ಗೇಲ್ ಅವರಂತಹ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳನ್ನು ಹೊಂದಿದ್ದ ತಂಡ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು ಎನ್ ಜಗದೀಶನ್ ಅವರತ್ತ ಕಣ್ಣು ನೆಟ್ಟಿದೆ. ಈ ಡ್ಯಾಶಿಂಗ್ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಖರೀದಿಸುವುದರಿಂದ ಆರ್‌ಸಿಬಿ ತಂಡಕ್ಕೆ ಏಕೆ ಅನುಕೂಲವಾಗಲಿದೆ ಎಂಬುದಕ್ಕೆ ಈ 3 ಕಾರಣಗಳನ್ನು ತಿಳಿದುಕೊಳ್ಳಬಹುದು.

ವಿಜಯ್ ಹಜಾರೆ ಟ್ರೋಫಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ
ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾರಾಯಣ್ ಜಗದೀಸನ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಗಳೊಂದಿಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಯುವ ಆಟಗಾರ ಆಡಿದ 8 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ 125.38ರ ಸ್ಟ್ರೈಕ್‌ರೇಟ್ ಮತ್ತು 138.33ರ ಸರಾಸರಿಯಲ್ಲಿ 830 ರನ್ ಗಳಿಸಿದರು.
ತಮಿಳುನಾಡಿನ ಈ ಬಲಗೈ ಬ್ಯಾಟ್ಸ್‌ಮನ್ ವಿಜಯ್ ಹಜಾರೆ ಟ್ರೋಫಿ ಋತುವಿನಲ್ಲಿ ಸತತ 5 ಶತಕ ಗಳಿಸಿದರು. ಅವರು ಟೂರ್ನಿಯಲ್ಲಿ ಅಮೋಘ ದ್ವಿಶತಕ (141 ಎಸೆತಗಳಲ್ಲಿ 277 ರನ್) ಬಾರಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಕೋರ್‌ಗಾಗಿ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಕಳೆದ ಐಪಿಎಲ್ ಋತುವಿನಲ್ಲಿ ಅನುಜ್ ರಾವತ್ ಕಳಪೆ ಪ್ರದರ್ಶನ
ಕಳೆದ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ತಂಡ ದೆಹಲಿಯ ಯುವ ಕೀಪರ್-ಬ್ಯಾಟ್ಸ್‌ಮನ್ ಅನುಜ್ ರಾವತ್‌ಗೆ ಅವಕಾಶ ನೀಡಿತ್ತು. 8 ಇನ್ನಿಂಗ್ಸ್‌ಗಳಲ್ಲಿ 14.33ರ ಕಡಿಮೆ ಸರಾಸರಿಯಲ್ಲಿ ಮತ್ತು 108.40ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 129 ರನ್‌ಗಳನ್ನು ಗಳಿಸಿ ಕಳಪೆ ಋತುವನ್ನು ಹೊಂದಿದ್ದರು.
ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಈ ಋತುವಿನಲ್ಲಿ ಅನುಜ್ ರಾವತ್‌ರನ್ನು ಉಳಿಸಿಕೊಂಡಿದ್ದರೂ, ಕಳೆದ ಋತುವಿನಲ್ಲಿ ಅವರ ಕಳಪೆ ಪ್ರದರ್ಶನಗಳು ಮತ್ತು ಈ ವರ್ಷ ಎನ್ ಜಗದೀಸನ್ ಅವರ ಅಮೋಘ ಬ್ಯಾಟಿಂಗ್ ಫಾರ್ಮ್ ನೋಡಿದರೆ, ಅನುಜ್ ರಾವತ್‌ಗೆ ಪರ್ಯಾಯವಾಗಿ ಪರಿಗಣಿಸಬಹುದು.

ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಉತ್ತರಾಧಿಕಾರಿ
ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಮೂವತ್ತರ ಹರೆಯ ದಾಟಿದ್ದು, ಆರ್‌ಸಿಬಿ ತಂಡದಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಯುವ ಪ್ರತಿಭೆಗಳನ್ನು ಹುಡುಕುವ ಪ್ರಯತ್ನದಲ್ಲಿ ತಂಡವಿದೆ. ಎನ್ ಜಗದೀಶನ್ ಆ ಆಯ್ಕೆ ಉತ್ತಮ ಪರಿಗಣನೆಯಾಗಲಿದ್ದಾರೆ.
ನಾರಾಯಣ್ ಜಗದೀಸನ್ ಆರ್‌ಸಿಬಿ ತಂಡಕ್ಕಾಗಿ ರುತುರಾಜ್ ಗಾಯಕ್ವಾಡ್ ರೀತಿಯ ಆಟಗಾರನಾಗಬಹುದು ಮತ್ತು ಭವಿಷ್ಯದಲ್ಲಿ ಐಪಿಎಲ್ ನಾಯಕರಾಗುವ ನಿರೀಕ್ಷೆಯನ್ನು ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡ ಈಗಿನಿಂದಲೇ ಈ ಪ್ರತಿಭೆಯ ಮೇಲೆ ಹೂಡಿಕೆ ಮಾಡಿ ಫ್ರಾಂಚೈಸ್‌ನೊಂದಿಗೆ ದೀರ್ಘಾವಧಿಯಲ್ಲಿ ಭವಿಷ್ಯದ ನಾಯಕನನ್ನು ರೂಪಿಸಲು ಬಯಸಬಹುದು.
ಈ ಮೂರು ಕಾರಣಗಳು ಇಂದಿನ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾರಾಯಣ್ ಜಗದೀಸನ್ ಕಡೆ ಗಮನ ಹರಿಸಬಹುದು ಎಂದು ಭಾವಿಸಬಹುದು.


Click it and Unblock the Notifications
