IPL 2023 Auction :ಅಲ್ಪ ಮೊತ್ತ ಹೊಂದಿದ್ದರೂ ಆರ್‌ಸಿಬಿಗೆ ಸ್ಕ್ವಾಡ್ ಬಲಿಷ್ಠಗೊಳಿಸಲು ಆಕಾಶ್ ಚೋಪ್ರ ಸಲಹೆ

ಐಪಿಎಲ್ ಮಿನಿ ಹರಾಜಿನ ದಿನ ಹತ್ತಿರವಾಗುತ್ತಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದಕ್ಕಾಗಿ ಎಲ್ಲಾ ತಂಡಗಳು ಕೂಡ ಸಿದ್ಧತೆ ನಡೆಸುತ್ತಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ತಂಡ ದೊಡ್ಡ ಮೊತ್ತವನ್ನು ಹೊಂದಿಲ್ಲದ ಕಾರಣ ದೊಡ್ಡ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಇರುವ ಮೊತ್ತವನ್ನು ಚಾಣಾಕ್ಷತನದಿಂದ ಬಳಸಿಕೊಳ್ಳಬೇಕಿದೆ.
ಇನ್ನು ಈ ಬಾರಿಯ ಮಿನಿ ಹರಾಜಿಗೂ ಮುನ್ನ ನಡೆದ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಆರ್‌ಸಿಬಿ ತನ್ನ ಮೂಲ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅಂದರೆ ಆಡುವ 11ರ ಬಳವನ್ನು ಹಾಗೆಯೇ ಉಳಿಸಿಕೊಂಡಿದೆ. ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಿದರೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಂಡದಲ್ಲಿದ್ದಾರೆ.
ಆರ್‌ಸಿಬಿ ತಂಡದ ಈ ಬಾರಿಯ ಹರಾಜಿನ ರಣತಂತ್ರದ ಬಗ್ಗೆ ಆಕಾಶ್ ಚೋಪ್ರ ಮಾತನಾಡಿದ್ದು ಕುತೂಹಲಕಾರಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬೌಲಿಂಗ್ ಬಲಿಷ್ಠಗೊಳಿಸಬೇಕಿದೆ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರ, "ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. ಇದರರ್ಥ ನಿಮ್ಮ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಬೇಕಿದೆ. ಹಾಗಾಗಿ ಕಡಿಮೆ ಮೊತ್ತಕ್ಕೆ ದೊರೆಯುವ ಆಟಗಾರರನ್ನು ಕೊಂಡುಕೊಳ್ಳಬೇಕಿದೆ. ಅವರು ಎಡಗೈ ವೇಗಿಗಳತ್ತ ಗಮನಹರಿಸಬಹುದು. ಆದರೆ ಸ್ಯಾಮ್ ಕರನ್ ಅವರಂಥಾ ಆಟಗಾರನತ್ತ ಆರ್‌ಸಿಬಿ ಯೋಚನೆ ಮಾಡಲು ಕೂಡ ಸಾಧ್ಯವಿಲ್ಲ. ಯಾಕೆಂದರೆ ಆತನನ್ನು ಕೊಂಡುಕೊಳ್ಳುವಷ್ಟು ಮೊತ್ತ ತಂಡದಲ್ಲಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಹೇಜಲ್‌ವುಡ್, ಹಸರಂಗಾಗೆ ಸೂಕ್ತ ಬ್ಯಾಕಪ್ ಹುಡುಕಿ!
ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಆರ್‌ಸಿಬಿ ತಂಡ ಅನುಭವಿ ವೇಗಿ ಜೋಶ್ ಹೇಜ್‌ವುಡ್ ಅವರಿಗೆ ಸೂಕ್ರವಾಗುವಂಥಾ ಬ್ಯಾಕಪ್ ಆಟಗಾರನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ. ಆಶಸ್ ಸರಣಿಯ ಹಿನ್ನೆಲೆಯಲ್ಲಿ ಹೇಜಲ್‌ವುಡ್ ಟೂರ್ನಿಯ ಅಂತ್ಯದ ವೇಳೆಗೆ ಅಲಭ್ತವಾಗುವ ಸಾಧ್ಯತೆಯಿದೆ. ರೀಸ್ ಟೋಪ್ಲೆ, ಮದುಶಂಕ ಅಥವಾ ಜೋಶುವಾ ಲಿಟಲ್ ಅವರನ್ನು ಸೇರಿಸಿಕೊಳ್ಳಬಹುದು. ಇವರಲ್ಲದಿದ್ದರೆ ಸದಸ್ಯ ರಾಷ್ಟ್ರಗಳ ಕೆಲ ಪ್ರತಿಭಾನ್ವಿತ ಆಟಗಾರರ ಮೇಲೆ ಆರ್‌ಸಿಬಿ ಚಿತ್ತ ನೆಡುವುದು ಉತ್ತಮ ಎಂದಿದ್ದಾರೆ. ಇನ್ನು ವನಿಂದು ಹಸರಂಗಾಗೆ ಕೂಡ ಸೂಕ್ತ ಬ್ಯಾಕಪ್ ಸ್ಪಿನ್ನರ್‌ನನ್ನು ಹುಡುಕೊಳ್ಳುವುದು ಉತ್ತಮ ಎಂದಿದ್ದಾರೆ ಆಕಾಶ್ ಚೋಪ್ರ.

ಕಾರ್ತಿಕ್‌ಗೆ ಬೆಂಬಲ ನೀಡುವ ಕೆಳ ಕ್ರಮಾಂಕದ ಆಟಗಾರ ಬೇಕು
ಇನ್ನು ಆರ್‌ಸಿಬಿ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್‌ಗೆ ಬೆಂಬಲ ನೀಡುವಂತಾ ಆಟಗಾರನ ಅಗತ್ಯವಿದೆ ಎಂದು ಕೂಡ ಆಕಾಶ್ ಚೋಪ್ರ ಅಬಿಪ್ರಾಯಪಟ್ಟಿದ್ದಾರೆ. "ಕೆಳ ಮಧ್ಯಮ ಕ್ರಮಂಕದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಹ್ಬಾಜ್ ಅಹ್ಮದ್ ಅವರನ್ನೇ ಆರ್‌ಸಿಬಿ ನೆಚ್ಚಿಕೊಳ್ಳುವಂತಾಗಿದೆ. ಈ ಹಂತದಲ್ಲಿ ಒಂದಿಬ್ಬರು ಬ್ಯಾಟಿಂಗ್ ಕೂಡ ಸಮರ್ಥವಾಗಿ ನಡೆಸುವ ಆಟಗಾರರ ಅಗತ್ಯವಿದೆ. ಡೆರೆಲ್ ಮಿಚೆಲ್ ಲಭ್ಯವಿರುವುದನ್ನು ಗಮನಿಸಿಕೊಳ್ಳಬಹುದು. ವನಿಂದು ಹಸರಂಗ ತಂಡದಲ್ಲಿ ಇದ್ದರು ಕೂಡ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಅವರಿಂದ ಪ್ರದರ್ಶನ ಬಂದಿಲ್ಲ. ಹೀಗಾಗಿ ಅವರನ್ನು ಪೂರ್ಣಕಾಲಿಕ ಸ್ಪಿನ್ನರ್ ಎಂದೇ ನಾನು ಭಾವಿಸುತ್ತೇನೆ" ಎಂದಿದ್ದಾರೆ ಆಕಾಶ್ ಚೋಪ್ರ.

8.75 ಕೋಟಿ ಪರ್ಸ್ ಹೊಂದಿರುವ ಆರ್‌ಸಿಬಿ
ಇನ್ನು ಈ ಬಾರಿಯ ಮಿನಿ ಹರಾಜಿಗೂ ಮುನ್ನ ನಡೆದ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಆರ್‌ಸಿಬಿ ಕೇವಲ ಐವರು ಆಟಗಾರರನ್ನು ಮಾತ್ರವೇ ಬಿಡುಗಡೆಗೊಳಿಸಿತ್ತು. ಹೀಗಾಗಿ ಆರ್‌ಸಿಬಿ ತನ್ನ ಪರ್ಸ್‌ನಲ್ಲಿ ಈಗ 8.75 ಕೋಟಿ ರೂಪಾಯಿ ಮಾತ್ರವೇ ಹೊಂದಿದೆ. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಳಿಕ ಅತಿ ಕನಿಷ್ಠ ಪರ್ಸ್ ಮೊತ್ತ ಹೊಂದಿರುವ ತಂಡವಾಗಿದೆ. ಆರ್‌ಸಿಬಿ ಒಟ್ಟು 7 ಆಟಗಾರರನ್ನು ಸೇರ್ಪಡೆಗೊಳಿಸುವ ಅವಕಾಶವಿದ್ದು ಇಬ್ಬರು ವಿದೇಶಿ ಆಟಗಾರರನ್ನು ಸೇರ್ಪಡೆಗೊಳಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications