IPL 2023 Auction: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕ ದೊಡ್ಡ ಮೊತ್ತಕ್ಕೆ ಖರೀದಿಯಾಗಲಿದ್ದಾರೆ; ಮಾರ್ಗನ್

2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅತ್ಯಂತ ದುಬಾರಿ ಖರೀದಿಗಳಲ್ಲಿ ಒಬ್ಬರಾಗಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ. ಇಂಗ್ಲೆಂಡ್ ಟೆಸ್ಟ್ ನಾಯಕ ಕೇವಲ ನಾಯಕತ್ವದ ಕೌಶಲ್ಯಗಳೊಂದಿಗೆ ಆಡುವುದಿಲ್ಲ, ಅಧಿಕ ಒತ್ತಡದ ಸಂದರ್ಭಗಳಲ್ಲಿ ಹೆಚ್ಚಿನ ಅನುಭವವನ್ನು ಕೂಡ ನೀಡುತ್ತಾರೆ ಎಂದು ಹೇಳಿದರು.
ಜಿಯೋ ಸಿನಿಮಾದಲ್ಲಿ ಐಪಿಎಲ್ 2023ರ ಪೂರ್ವದ ಹರಾಜು ಪ್ರದರ್ಶನದ ಭಾಗವಾಗಿದ್ದ ಇಯಾನ್ ಮಾರ್ಗನ್, ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿದರು. ಪಂಜಾಬ್ ತಂಡ ಸ್ಟೋಕ್ಸ್ ಉಪಸ್ಥಿತಿಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು.
2018ರಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಕೊನೆಯದಾಗಿ 12.5 ಕೋಟಿ ರೂ.ಗೆ ಮಾರಾಟವಾಗಿದ್ದರು. ಶುಕ್ರವಾರ ಕೊಚ್ಚಿಯಲ್ಲಿ ಈ ಇಂಗ್ಲೆಂಡ್ ತಾರೆ ಹೆಚ್ಚು ಹಣವನ್ನು ಗಳಿಸುವ ಸಾಧ್ಯತೆಯಿದೆ ಎಂದರು.

ಪಂಜಾಬ್ ಕಿಂಗ್ಸ್ ಮಿನಿ ಹರಾಜಿನಲ್ಲಿ 32.2 ಕೋಟಿ ರೂ.ಗಳೊಂದಿಗೆ ಹೋಗಲಿದೆ. ಸನ್ ರೈಸರ್ಸ್ ಹೈದರಾಬಾದ್ ನಂತರ (42.25 ಕೋಟಿ ರೂ.) ಎರಡನೇ ಅತಿ ಹೆಚ್ಚು ಪರ್ಸ್ ಹೊಂದಿರುವ ತಂಡವಾಗಿದೆ. ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರು ಪಡೆಯುವ ಪ್ರತಿ ಪೈಸೆಯೂ ಮೌಲ್ಯಯುತವಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಇಯಾನ್ ಮಾರ್ಗನ್ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಆದರೆ ಬೆನ್ ಸ್ಟೋಕ್ಸ್ ತಂಡದಲ್ಲಿ ನಾಯಕನಾಗಿರಲು ಬೇರೆ ನಾಯಕನ ಅಗತ್ಯವಿಲ್ಲ ಎಂದು ಮಾರ್ಗನ್ ಅಭಿಪ್ರಾಯಪಟ್ಟರು.
"ಬೆನ್ ಸ್ಟೋಕ್ಸ್ ಪ್ರತಿ ಪೈಸೆಗೆ ಯೋಗ್ಯರು. ಅವರು ನಾಯಕತ್ವವನ್ನು ವಹಿಸಿಕೊಳ್ಳುವುದು ಮಾತ್ರವಲ್ಲದೆ ಒತ್ತಡದಲ್ಲಿ ಹೆಚ್ಚಿನ ಅನುಭವವನ್ನು ತರುತ್ತಾರೆ. ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನದ ದೃಷ್ಟಿಯಿಂದ ಇದು ಅಗತ್ಯವಿದೆ. ಚುಟುಕು ಕ್ರಿಕೆಟ್‌ನಲ್ಲಿ ಸ್ಟೋಕ್ಸ್ ಪ್ರಮುಖ ಆಟಗಾರನಾಗಿರುತ್ತಾರೆ," ಎಂದು ಇಯಾನ್ ಮಾರ್ಗನ್ ತಿಳಿಸಿದರು.

"ಬೆನ್ ಸ್ಟೋಕ್ಸ್ ಕಳೆದ ಕೆಲವು ವರ್ಷಗಳಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನಗಳನ್ನು ನಾವು ನೋಡಿದ್ದೇವೆ ಮತ್ತು ಈ ವರ್ಷ ಪಂಜಾಬ್ ಕಿಂಗ್ಸ್ ತಂಡದ ಪಾಲಾಗುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು.
ಅಚ್ಚರಿಯೆಂದರೆ, ಐಪಿಎಲ್ 2023ರ ಟೂರ್ನಿ ಅಂತ್ಯಕ್ಕೆ ಬೆನ್ ಸ್ಟೋಕ್ಸ್ ಲಭ್ಯತೆಯ ಬಗ್ಗೆ ಅನುಮಾನಗಳ ಹೊರತಾಗಿಯೂ ದೊಡ್ಡ ಹಣಕ್ಕಾಗಿ ಹೋಗುತ್ತಾರೆ ಎಂದು ಇಯಾನ್ ಮಾರ್ಗನ್ ಅಭಿಪ್ರಾಯಪಟ್ಟರು. ಏಕೆಂದರೆ, ಜೂನ್ 1ರಿಂದ ಐರ್ಲೆಂಡ್ ವಿರುದ್ಧದ ಟೆಸ್ಟ್‌ನೊಂದಿಗೆ ಇಂಗ್ಲೆಂಡ್ ತಂಡ ಮುಂದಿನ ವರ್ಷ ಆಶಸ್‌ಗೆ ಸಿದ್ಧವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications