IPL 2023 mini-auction : ಆಟಗಾರರ ಹರಾಜಿಗೆ ವೇದಿಕೆ ಸಜ್ಜು: ಡಿಸೆಂಬರ್ 23ಕ್ಕೆ ಕೊಚ್ಚಿಯಲ್ಲಿ ಬಿಡ್ಡಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆಗೆ ಕೊನೆಗೂ ಆತಿಥ್ಯ ಸ್ಥಳವನ್ನ ಬಿಸಿಸಿಐ ಗೊತ್ತುಪಡಿಸಿದ್ದು, ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಬಿಡ್ಡಿಂಗ್‌ನಲ್ಲಿ ಆಟಗಾರರಿಗಾಗಿ 10 ಫ್ರಾಂಚೈಸಿಗಳು ಸ್ಪರ್ಧೆಗಿಳಿಯಲಿವೆ.
ಐಪಿಎಲ್ 2023ರ ಆಟಗಾರರ ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದ್ರೆ ಇದೀಗ ಬಂದಿರುವ ವರದಿಯ ಪ್ರಕಾರ ಐಪಿಎಲ್ ಹೊಸ ಅಧ್ಯಕ್ಷ ಅರುಣ್ ದುಮಾಲ್ ಕೊಚ್ಚಿಯನ್ನು ಫೈನಲ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಅಧ್ಯಕ್ಷ ಅರುಣ್ ದುಮಾಲ್ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ವಿಶ್ವದ ಬೆಸ್ಟ್ ದೇಶೀಯ ಟೂರ್ನಮೆಂಟ್ ಮಾಡುವ ಆಶಯ ವ್ಯಕ್ತಪಡಿಸಿದ ಬೆನ್ನಲ್ಲೇ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕ ಮತ್ತು ಸ್ಥಳ ಹೊರಬಿದ್ದಿದೆ.
ಮುಂದಿನ ಐಪಿಎಲ್ ಸೀಸನ್‌ಗೆ ಈಗಾಗಲೇ 10 ತಂಡಗಳು ಸ್ಕ್ವಾಡ್ ಅಂತಿಮಗೊಳಿಸಲು ತಯಾರಿ ನಡೆಸುತ್ತಿವೆ. ಡೆಡ್‌ಲೈನ್ ಒಳಗೆ ರೀಟೈನ್ ಆಗಿರುವ ಆಟಗಾರರು ಮತ್ತು ರಿಲೀಸ್ ಮಾಡಲಿರುವ ಆಟಗಾರರನ್ನು ತಿಳಿಸಬೇಕಾಗಿದೆ. ಪ್ರತಿ ಫ್ರಾಂಚೈಸಿಗೆ ಬಿಡ್ಡಿಂಗ್ ಪರ್ಸ್ ಮೌಲ್ಯವನ್ನು 5 ಕೋಟಿ ರೂಪಾಯಿ ಹೆಚ್ಚಿಸಲಾಗಿದ್ದು, ಒಟ್ಟು ಪರ್ಸ್ ಮೌಲ್ಯ 95 ಕೋಟಿ ರೂಪಾಯಿ (950 ಮಿಲಿಯನ್) ನಿಗದಿಪಡಿಸಲಾಗಿದೆ.
ಇತ್ತೀಚೆಗಷ್ಟೇ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್, ರ್ಯಾನ್ ಟೆನ್ ಡಸೆಚ್‌ರನ್ನು ತನ್ನ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ. ಕಳೆದ ಸೀಸನ್‌ನಲ್ಲಿ ಫೀಲ್ಡಿಂಗ್ ಕೋಚ್ ಆಗಿದ್ದ ಜೇಮ್ಸ್ ಫೊಸ್ಟರ್ , ಸಹಾಯಕ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ.
ಐಪಿಎಲ್ 2021ರ ಸೀಸನ್‌ಗೆ ಹೋಲಿಸಿದ್ರೆ ಕಳೆದ ಸೀನಸ್‌ನಲ್ಲಿ ಪಂದ್ಯಗಳ ಸಂಖ್ಯೆಯನ್ನು 60ರಿಂದ 74 ಪಂದ್ಯಗಳಿಗೆ ಹೆಚ್ಚಿಸಲಾಗಿತ್ತು. ಇದರ ಜೊತೆಗೆ 10 ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದನ್ನ ಕಾಣಬಹುದು. ಎಲ್ಲಾ ತಂಡಗಳು 14 ಪಂದ್ಯಗಳನ್ನಾಡಿದ್ದು, ಪ್ರತಿ ತಂಡ ಎರಡು ಬಾರಿ ಮುಖಾಮುಖಿಯಾಗಿದ್ರೆ, ಇತರ ಗುಂಪಿನ ಉಳಿದ ತಂಡಗಳ ವಿರುದ್ಧ ಒಮ್ಮೆ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications