For Quick Alerts
ALLOW NOTIFICATIONS  
For Daily Alerts
 

IPL 2023: ಡಿಸೆಂಬರ್ 23ರ ಹರಾಜಿನಲ್ಲಿ 1 ಕೋಟಿ, 1.5 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

IPL 2023 Auction Players List: Players Who Registered With Rs 1 To 1.5 Crore Base Price

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂಬರುವ ಆವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಇದೇ ವೇಳೆ 2023ರ ಐಪಿಎಲ್ ಟೂರ್ನಿಗಾಗಿ ಮಿನಿ ಹರಾಜಿ ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ.

ಇದು ಹಿಂದಿನ ವರ್ಷದಂತೆ ಮೆಗಾ ಹರಾಜು ಪ್ರಕ್ರಿಯೆ ನಡೆಯದಿದ್ದರೂ, ಶ್ರೀಮಂತ ಕ್ರಿಕೆಟ್ ಲೀಗ್‌ನ 16ನೇ ಆವೃತ್ತಿಯ ಮುಂದೆ ಸಾಕಷ್ಟು ನಿರೀಕ್ಷೆಯಿದೆ. ಐಪಿಎಲ್ 2023ಗಾಗಿ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದ್ದು, ಸುಮಾರು 991 ಆಟಗಾರರು ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಇದೀಗ ಹರಾಜಾಗಲು ಸಿದ್ಧರಿರುವ ಆಟಗಾರರ ಶಾರ್ಟ್‌ಲಿಸ್ಟ್ ಅನ್ನು ಬಿಸಿಸಿಐ ಮಂಗಳವಾರ ಅಂದರೆ ಡಿಸೆಂಬರ್ 13ರಂದು ಪ್ರಕಟಿಸಿದೆ. 10 ತಂಡಗಳೊಂದಿಗೆ ಸಮಾಲೋಚಿಸಿದ ನಂತರ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರ ಶಾರ್ಟ್‌ಲಿಸ್ಟ್ ತಯಾರು ಮಾಡಲಾಗಿದೆ.

19 ಆಟಗಾರರು 2 ಕೋಟಿ ರೂ., 11 ಆಟಗಾರರು 1.5 ಕೋಟಿ ರೂ. ಮತ್ತು 20 ಆಟಗಾರರು 1 ಕೋಟಿ ರೂ.ಗಳ ಅತ್ಯಧಿಕ ಮೂಲ ಬೆಲೆಯ ಪಟ್ಟಿಯಲ್ಲಿದ್ದಾರೆ.

ವಿಪರ್ಯಾಸವೆಂದರೆ, ಯಾವುದೇ ಭಾರತೀಯ ಆಟಗಾರರು 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ. ಈ ಪಟ್ಟಿಯಲ್ಲಿ ಒಟ್ಟು 19 ಆಟಗಾರರಿದ್ದಾರೆ.

ಇನ್ನೂ 36 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ

ಇನ್ನೂ 36 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ

10 ತಂಡಗಳು ನವೆಂಬರ್‌ನಲ್ಲಿ ತಮ್ಮ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರನ್ನು ಘೋಷಿಸಿದ ನಂತರ, 991 ಆಟಗಾರರು ಐಪಿಎಲ್ 2023 ಹರಾಜಿಗೆ ನೋಂದಾಯಿಸಿದ್ದರು. ಅನಂತರ, 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು ಮತ್ತು ಫ್ರಾಂಚೈಸಿಗಳು ತಮ್ಮ ವಿನಂತಿಗಳನ್ನು ಸಲ್ಲಿಸಿದ ನಂತರ ಇನ್ನೂ 36 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ.

ಐಪಿಎಲ್ 2023ರ ಮಿನಿ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಇನ್ನು Viacom18 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದ ಕಾರಣ, ಐಪಿಎಲ್ ಹರಾಜು ಪ್ರಕ್ರಿಯೆ ಲೈವ್ ಸ್ಟ್ರೀಮಿಂಗ್ Jio ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಐಪಿಎಲ್ 2023: ಎಲ್ಲಾ 10 ತಂಡಗಳ ಉಳಿದ ಪರ್ಸ್ ಮೌಲ್ಯ

ಐಪಿಎಲ್ 2023: ಎಲ್ಲಾ 10 ತಂಡಗಳ ಉಳಿದ ಪರ್ಸ್ ಮೌಲ್ಯ

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಅತ್ಯಂತ ಸಂಕಷ್ಟದ ಪರಿಸ್ಥಿತಿ ಹೊಂದಿದ್ದಾರೆ. ಏಕೆಂದರೆ ಅವರು ಆಟಗಾರರಿಗೆ 14 ಸ್ಲಾಟ್‌ಗಳನ್ನು ಹೊಂದಿದ್ದಾರೆ, ಆದರೆ ಅವರ ಪರ್ಸ್‌ನಲ್ಲಿ ಕೇವಲ 7.05 ಕೋಟಿ ರೂ. ಇದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತನ್ನ ಪರ್ಸ್‌ನಲ್ಲಿ 42.25 ಕೋಟಿ ರೂ.ಗಳನ್ನು ಹೊಂದಿದೆ ಮತ್ತು ಅವರು 17 ಸ್ಲಾಟ್‌ಗಳಿಗೆ ಆಟಗಾರರನ್ನು ತುಂಬಬೇಕಾಗುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ - 20.45 ಕೋಟಿ ರೂ. (9 ಸ್ಲಾಟ್‌ಗಳು)

ದೆಹಲಿ ಕ್ಯಾಪಿಟಲ್ಸ್ - 19.45 ಕೋಟಿ ರೂ. (7 ಸ್ಲಾಟ್‌ಗಳು)

ಗುಜರಾತ್ ಟೈಟಾನ್ಸ್ - 19.25 ಕೋಟಿ ರೂ. (10 ಸ್ಲಾಟ್‌ಗಳು)

ಕೋಲ್ಕತ್ತಾ ನೈಟ್ ರೈಡರ್ಸ್ - 7.05 ಕೋಟಿ ರೂ. (14 ಸ್ಲಾಟ್‌ಗಳು)

ಲಕ್ನೋ ಸೂಪರ್ ಜೈಂಟ್ಸ್ - 23.35 ಕೋಟಿ ರೂ. (14 ಸ್ಲಾಟ್‌ಗಳು)

ಮುಂಬೈ ಇಂಡಿಯನ್ಸ್ - 20.05 ಕೋಟಿ ರೂ. (12 ಸ್ಲಾಟ್‌ಗಳು)

ಪಂಜಾಬ್ ಕಿಂಗ್ಸ್ - 32.2 ಕೋಟಿ ರೂ. (12 ಸ್ಲಾಟ್‌ಗಳು)

ರಾಯಲ್ ಚಾಲೆಂಜರ್ಸ್ ಬೆಂಗಳೂರು - 8.75 ಕೋಟಿ ರೂ. (9 ಸ್ಲಾಟ್‌ಗಳು)

ರಾಜಸ್ಥಾನ್ ರಾಯಲ್ಸ್ - 13.2 ಕೋಟಿ ರೂ. (13 ಸ್ಲಾಟ್‌ಗಳು)

ಸನ್‌ರೈಸರ್ಸ್ ಹೈದರಾಬಾದ್ - 42.25 ಕೋಟಿ ರೂ. (17 ಸ್ಲಾಟ್‌ಗಳು)

ಕೋಲ್ಕತ್ತಾ ನೈಟ್ ರೈಡರ್ಸ್ ಪರ್ಸ್‌ನಲ್ಲಿ 7.05 ಕೋಟಿ ರೂ.

1.5 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

1.5 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

1) ಹ್ಯಾರಿ ಬ್ರೂಕ್ (ಇಂಗ್ಲೆಂಡ್)

2) ವಿಲ್ ಜ್ಯಾಕ್ಸ್ (ಇಂಗ್ಲೆಂಡ್)

3) ಡೇವಿಡ್ ಮಲನ್ (ಇಂಗ್ಲೆಂಡ್)

4) ಜೇಸನ್ ರಾಯ್ (ಇಂಗ್ಲೆಂಡ್)

5) ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)

6) ಝೈ ರಿಚರ್ಡ್ಸನ್ (ಆಸ್ಟ್ರೇಲಿಯಾ)

7) ಆಡಮ್ ಝಂಪಾ (ಆಸ್ಟ್ರೇಲಿಯಾ)

8) ರಿಲೆ ಮೆರೆಡಿತ್ (ಆಸ್ಟ್ರೇಲಿಯಾ)

9) ಸೀನ್ ಅಬಾಟ್ (ಆಸ್ಟ್ರೇಲಿಯಾ)

10) ನಾಥನ್ ಕೌಲ್ಟರ್-ನೈಲ್ (ಆಸ್ಟ್ರೇಲಿಯಾ)

11) ಶೆರ್ಫೇನ್ ರುದರ್‌ಫೋರ್ಡ್ (ವೆಸ್ಟ್ ಇಂಡೀಸ್)

1 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

1 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೂಲ ಬೆಲೆ ಹೊಂದಿರುವ ದೇಶೀಯ ಆಟಗಾರರಾಗಿದ್ದು, ಈ ಇಬ್ಬರು ಭಾರತೀಯ ಆಟಗಾರರು ಪಟ್ಟಿಯಲ್ಲಿದ್ದಾರೆ.

1) ಮಯಾಂಕ್ ಅಗರ್ವಾಲ್ (ಭಾರತ)

2) ಮನೀಶ್ ಪಾಂಡೆ (ಭಾರತ)

3) ಜೋ ರೂಟ್ (ಇಂಗ್ಲೆಂಡ್)

4) ಲ್ಯೂಕ್ ವುಡ್ (ಇಂಗ್ಲೆಂಡ್)

5) ಆಂಡ್ರ್ಯೂ ಟೈ (ಆಸ್ಟ್ರೇಲಿಯಾ)

6) ಮೊಯಿಸೆಸ್ ಹೆನ್ರಿಕ್ಸ್ (ಆಸ್ಟ್ರೇಲಿಯಾ)

7) ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್)

8) ಶಾಯ್ ಹೋಪ್ (ವೆಸ್ಟ್ ಇಂಡೀಸ್)

9) ರೋಸ್ಟನ್ ಚೇಸ್ (ವೆಸ್ಟ್ ಇಂಡೀಸ್)

10) ರಹಕೀಮ್ ಕಾರ್ನ್‌ವಾಲ್ (ವೆಸ್ಟ್ ಇಂಡೀಸ್)

11) ತಬ್ರೈಜ್ ಶಮ್ಸಿ (ದಕ್ಷಿಣ ಆಫ್ರಿಕಾ)

12) ಹೆನ್ರಿಕ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ)

13) ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ)

14) ಮೊಹಮ್ಮದ್ ನಬಿ (ಅಫ್ಘಾನಿಸ್ತಾನ)

15) ಡೇರಿಲ್ ಮಿಚೆಲ್ (ನ್ಯೂಜಿಲೆಂಡ್)

16) ಕೈಲ್ ಜೇಮಿಸನ್ (ನ್ಯೂಜಿಲೆಂಡ್)

17) ಟಾಮ್ ಲ್ಯಾಥಮ್ (ನ್ಯೂಜಿಲೆಂಡ್)

18) ಮಿಚೆಲ್ ಬ್ರೇಸ್‌ವೆಲ್ (ನ್ಯೂಜಿಲೆಂಡ್)

19) ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)

20) ಡೇವಿಡ್ ವೈಸ್ (ನಮೀಬಿಯಾ)

Story first published: Wednesday, December 14, 2022, 13:56 [IST]
Other articles published on Dec 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+