For Quick Alerts
ALLOW NOTIFICATIONS  
For Daily Alerts
 

IPL 2023: ಮಿನಿ ಹರಾಜಿನಲ್ಲಿ ಈ ವಿದೇಶಿ ಆಟಗಾರರಿಗಾಗಿ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ಪೈಪೋಟಿ

IPL 2023: Bidding Competition Between Franchises For These Foreign Players In Mini Auction

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ ಋತುವಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲು ಸಿದ್ಧವಾಗಿದೆ. ಇದೇ ವೇಳೆ ಕೆಲ ಫ್ರಾಂಚೈಸಿಗಳು ಪ್ರಮುಖ ವಿದೇಶಿ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲು ಸಿದ್ಧರಾಗಿದ್ದಾರೆ.

ಐಪಿಎಲ್ ಫ್ರಾಂಚೈಸಿಗಳು ಕೆಲವು ದೊಡ್ಡ ಆಟಗಾರರನ್ನು ತಂಡಗಳಿಗೆ ಸೆಳೆದುಕೊಳ್ಳಲು ನಿರ್ಧರಿಸಿವೆ. ಈ ಬಾರಿಯ ಹರಾಜಿನಲ್ಲಿ ಕೆಲ ವಿದೇಶಿ ಆಟಗಾರರಿದ್ದು, ಇತ್ತೀಚಿನ ಅವರ ಪ್ರದರ್ಶನಗಳಿಂದ ಹೆಚ್ಚು ಬಿಡ್ಡಿಂಗ್ ಬೆಲೆ ಹೆಚ್ಚಾಗಲಿದೆ.

ಐಪಿಎಲ್ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ಪೈಪೋಟಿಯನ್ನು ಉಂಟುಮಾಡಬಹುದಾದ ಕೆಲವು ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.

ಟಿ20 ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ (ಇಂಗ್ಲೆಂಡ್)

ಟಿ20 ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ (ಇಂಗ್ಲೆಂಡ್)

ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಒಬ್ಬ ಮ್ಯಾಚ್ ಫಿನಿಶರ್ ಆಟಗಾರನಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್‌ಗೆ ತಮ್ಮ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಕೊಡುವಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರ ವಹಿಸಿದರು.

ಆಲ್‌ರೌಂಡರ್ ಆಗಿ ಬೆನ್ ಸ್ಟೋಕ್ಸ್‌ನ ಸಾಮರ್ಥ್ಯವು ಪ್ರಮುಖ ಪಂದ್ಯಗಳಲ್ಲಿ ಚಿರಪರಿಚಿತವಾಗಿದೆ. ಅವರು ಯಾವುದೇ ತಂಡದಲ್ಲಿ ಆಡಿದರೂ ಆ ತಂಡಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ. 43 ಟಿ20 ಪಂದ್ಯಗಳಲ್ಲಿ 920 ರನ್ ಮತ್ತು 28 ವಿಕೆಟ್‌ಗಳನ್ನು ಪಡೆದಿರುವ ಕಾರಣ ಬೆನ್ ಸ್ಟೋಕ್ಸ್ ಪಂದ್ಯ ವಿಜೇತರಾಗಿ ಅವರ ಸಾಮರ್ಥ್ಯಗಳು ನಿಸ್ಸಂದೇಹವಾಗಿದೆ.

ಸ್ಫೋಟಕ ದಾಂಡಿಗ ಕ್ಯಾಮೆರೂನ್ ಗ್ರೀನ್ (ಆಸ್ಟ್ರೇಲಿಯಾ)

ಸ್ಫೋಟಕ ದಾಂಡಿಗ ಕ್ಯಾಮೆರೂನ್ ಗ್ರೀನ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾದ ಈ ದೊಡ್ಡ ಹಿಟ್ಟರ್‌ನ ಸಾಮರ್ಥ್ಯ ಮತ್ತು ಮಧ್ಯಮ ವೇಗದ ಬೌಲಿಂಗ್ ಕೌಶಲ್ಯದಿಂದಾಗಿ ಈ ಬಾರಿಯ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಸಬಹುದಾದ ಅತ್ಯಾಕರ್ಷಕ ಪ್ರತಿಭೆ. ಕ್ಯಾಮೆರೂನ್ ಗ್ರೀನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಕ್ರಿಕೆಟ್ ಆಡಿಲ್ಲ. ಆದರೆ ಅವರು ಆಸ್ಟ್ರೇಲಿಯಾದ ಜೆರ್ಸಿಯಲ್ಲಿ ಈಗಾಗಲೇ ಅನೇಕ ತಂಡಗಳಿಂದ ಆಸಕ್ತಿಯನ್ನು ಸೆಳೆಯಲು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕ್ಯಾಮೆರೂನ್ ಗ್ರೀನ್‌ಗಾಗಿ ಈ ಬಾರಿ ಫ್ರಾಂಚೈಸಿಗಳ ನಡುವೆ ದೊಡ್ಡ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ಅಪಾಯಕಾರಿ ಬ್ಯಾಟರ್ ರಿಲೀ ರೋಸ್ಸೌ (ದಕ್ಷಿಣ ಆಫ್ರಿಕಾ)

ಅಪಾಯಕಾರಿ ಬ್ಯಾಟರ್ ರಿಲೀ ರೋಸ್ಸೌ (ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ರಿಲೀ ರೋಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾಯಕಾರಿಯಾಗಿದ್ದಾರೆ. ಕೆಲವು ಗಂಭೀರ ಶಾಟ್‌ಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಅವರ ಬ್ಯಾಟ್ ಬೀಸಲು ಶುರುಮಾಡಿದರೆ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾರೆ. ಇಂತಹ ಆಟಗಾರರು ಈ ಹಿಂದೆ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಿರುವುದನ್ನು ನೋಡಿದ್ದೇವೆ. ಶುಕ್ರವಾರ ನಡೆಯುವ ಮಿನಿ ಹರಾಜಿನಲ್ಲಿ ಈತನಿಗಾಗಿ ಪೈಪೋಟಿ ಗ್ಯಾರಂಟಿ ಏರ್ಪಡಲಿದೆ.

ಆಲ್‌ರೌಂಡರ್ ಸ್ಯಾಮ್ ಕುರ್ರಾನ್ (ಇಂಗ್ಲೆಂಡ್)

ಆಲ್‌ರೌಂಡರ್ ಸ್ಯಾಮ್ ಕುರ್ರಾನ್ (ಇಂಗ್ಲೆಂಡ್)

ಈ ಯುವ ಆಲ್‌ರೌಂಡರ್‌ನ ಕೌಶಲ್ಯ ಈಗ ಇಡೀ ಜಗತ್ತಿಗೆ ತಿಳಿದಿದೆ. ಸ್ಯಾಮ್ ಕುರ್ರಾನ್ ಅವರು ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ ಮತ್ತು ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಆಟಗಾರರಾಗಿದ್ದರು. ಇಂಗ್ಲೆಂಡ್ ತಮ್ಮ ಎರಡನೇ ಟಿ20 ಪ್ರಶಸ್ತಿಯನ್ನು ಗೆಲ್ಲಲು ಅತ್ಯಂತ ಪ್ರಮುಖ ಕಾರಣವಾಗಿದ್ದರು.

ಸ್ಯಾಮ್ ಕುರ್ರಾನ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಐಪಿಎಲ್ ಲೀಗ್‌ನಲ್ಲಿ ಆಡಿದ್ದಾರೆ ಮತ್ತು ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಮರಳಿ ಖರೀದಿಸಲು ನೋಡಬಹುದು. ಆದರೆ ಈ ಪ್ರತಿಭಾವಂತ ಆಲ್‌ರೌಂಡರ್‌ಗೆ ಉಳಿದ ಫ್ರಾಂಚೈಸಿಗಳಿಂದ ತೀವ್ರ ಪೈಪೋಟಿ ಉಂಟಾಗುತ್ತದೆ ಮತ್ತು ಅದು ಅವರನ್ನು ಕೋಟ್ಯಧಿಪತಿಯನ್ನಾಗಿ ಮಾಡಬಹುದು.

ಕ್ರಿಕೆಟ್‌ನ ದೊಡ್ಡ ಅನ್ವೇಷಣೆ ಹ್ಯಾರಿ ಬ್ರೂಕ್ (ಇಂಗ್ಲೆಂಡ್)

ಕ್ರಿಕೆಟ್‌ನ ದೊಡ್ಡ ಅನ್ವೇಷಣೆ ಹ್ಯಾರಿ ಬ್ರೂಕ್ (ಇಂಗ್ಲೆಂಡ್)

ಹ್ಯಾರಿ ಬ್ರೂಕ್ ಈ ವರ್ಷ ಇಂಗ್ಲೆಂಡ್‌ ತಂಡದ ಅತಿದೊಡ್ಡ ಅನ್ವೇಷಣೆಗಳಲ್ಲಿ ಒಬ್ಬರಾಗಿದ್ದಾರೆ. ಅವರು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಒತ್ತಡದಲ್ಲಿಯೂ ಬ್ಯಾಟಿಂಗ್ ಮಾಡುವ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಈತ ಎಲ್ಲಾ ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಬ್ಯಾಟರ್ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಬಯಸುವ ತಂಡಗಳು ಹ್ಯಾರಿ ಬ್ರೂಕ್‌ಗಾಗಿ ಪೈಪೋಟಿ ನಡೆಸಲು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Story first published: Wednesday, December 21, 2022, 20:04 [IST]
Other articles published on Dec 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+