For Quick Alerts
ALLOW NOTIFICATIONS  
For Daily Alerts
 

IPL 2023: RCB ತಂಡಕ್ಕೆ ಭಾರೀ ಹಿನ್ನಡೆ; ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಫಾಫ್ ಡು ಪ್ಲೆಸಿಸ್ ಅನುಮಾನ!

ಸೋಮವಾರ, ಏಪ್ರಿಲ್ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ 8 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಸಿಎಸ್‌ಕೆ ನೀಡಿದ್ದ 227 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಪರ ನಾಯಕ ಫಾಫ್ ಡು ಪ್ಲೆಸಿಸ್ 33 ಎಸೆತಗಳಲ್ಲಿ 62 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

IPL 2023: Big Blow For RCB: Faf du Plessis Likely To Miss Next Match Against Punjab Kings

ಫಾಫ್ ಡು ಪ್ಲೆಸಿಸ್ ಅವರಿಗೆ ಗ್ಲೆನ್ ಮ್ಯಾಕ್ಸ್‌ವೆಲ್ 36 ಎಸೆತಗಳಲ್ಲಿ 76 ರನ್ ಬಾರಿಸಿ, 3ನೇ ವಿಕೆಟ್‌ಗೆ ಕೇವಲ 61 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟವನ್ನು ನೀಡಿದರು. ಆದರೆ, ಕೊನೆಯ ಐದು ಓವರ್‌ಗಳಲ್ಲಿ ನಿಯಮಿತವಾಗಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ, ಗೆಲುವಿನ ಗುರಿ ದೂರ ಉಳಿಯಿತು. ಅಂತಿಮವಾಗಿ 8 ವಿಕೆಟ್‌ಗಳಿಂದ ವೀರೋಚಿತ ಸೋಲು ಕಾಣಬೇಕಾಯಿತು.

ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಮಾಡುವಾಗ ತೀವ್ರ ನೋವಿನಿಂದ ಬಳಲುತ್ತಿರುವಂತೆ ಕಂಡುಬಂತು. ಅದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನಿಂಗ್ಸ್ ವೇಳೆ, ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಮಾಡುವಾಗ ಪಕ್ಕೆಲುಬಿಗೆ ಗಾಯ ಮಾಡಿಕೊಂಡರು.

"ಪಂದ್ಯದ ಆರಂಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ನಾನು ಸುಮಾರು ಡೈವಿಂಗ್ ಮಾಡುತ್ತಿದ್ದೆ ಮತ್ತು ನಾನು ಡೈವ್ ಮಾಡಿದಾಗ ಪಕ್ಕೆಲುಬು ನೆಲಕ್ಕೆ ತಾಗಿದ್ದು, ಇದು ನೋವಿಗೆ ಕಾರಣವಾಗಿದೆ. ಬ್ಯಾಟಿಂಗ್ ಮಾಡುವಾಗ ನಾನು ಕೊನೆಯಲ್ಲಿ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡೆ, ನಾನು ಗಟ್ಟಿಯಾಗುತ್ತಿದ್ದಂತೆ ನಿರಾಶೆಗೊಂಡಿದ್ದೆ," ಎಂದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಪಂದ್ಯದ ನಂತರ ಹೇಳಿದರು.

IPL 2023: Big Blow For RCB: Faf du Plessis Likely To Miss Next Match Against Punjab Kings

ರನ್ ಚೇಸಿಂಗ್ ವೇಳೆ ಸಿಎಸ್‌ಕೆ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವಾಗ ಎರಡನೇ ಇನ್ನಿಂಗ್ಸ್‌ನ 13ನೇ ಓವರ್‌ನ ನಂತರ, ಫಾಫ್ ಡು ಪ್ಲೆಸಿಸ್ ತನ್ನ ಹೊಟ್ಟೆಯ ಸುತ್ತಲೂ ಬಿಳಿ ಪಟ್ಟಿ ಕಟ್ಟಿಕೊಂಡರು.

ಗಾಯದ ಪ್ರಮಾಣದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲವಾದರೂ, ಆರ್‌ಸಿಬಿ ತಂಡದ ಮುಂದಿನ ಪಂದ್ಯ ಗುರುವಾರ, ಏಪ್ರಿಲ್ 20ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದ್ದು, ಈ ವೇಳೆ ನಾಯಕ ಫಾಫ್ ಡು ಪ್ಲೆಸಿಸ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ತಿಳಿಸಿವೆ.

"15 ರಿಂದ 20 ರನ್‌ಗಳು ಹೆಚ್ಚಾದವು ನಾನು ಭಾವಿಸುತ್ತೇನೆ. ಶಿವಂ ದುಬೆ ಬ್ಯಾಟಿಂಗ್ ಮಾಡುವಾಗ ನಾವು ಕೆಲವು ಬೌಂಡರಿಗಳನ್ನು ಬಿಟ್ಟುಕೊಟ್ಟೆವು. ಕೊನೆಯ ನಾಲ್ಕು ಓವರ್‌ಗಳನ್ನು ನಾವಂದುಕೊಂಡಂತೆ ಮುಗಿಸಲು ಸಾಧ್ಯವಾಗಲಿಲ್ಲ. ಮೊದಲ ಎಸೆತದಿಂದ ಉತ್ತಮ ಬೌಲ್ ಮಾಡಿದಾಗ ವಿಕೆಟ್ ಪಡೆಯುವ ಸಾಧ್ಯತೆ ಇರುತ್ತದೆ," ಎಂದು ಫಾಫ್ ಡು ಪ್ಲೆಸಿಸ್ ಹೇಳಿದರು.

IPL 2023: Big Blow For RCB: Faf du Plessis Likely To Miss Next Match Against Punjab Kings

ಸದ್ಯ 2023ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿದ 5 ಪಂದ್ಯಗಳಲ್ಲಿ 3 ಸೋಲು ಮತ್ತು 2 ಗೆಲುವಿನೊಂದಿಗೆ 4 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Story first published: Tuesday, April 18, 2023, 20:02 [IST]
Other articles published on Apr 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+